ದಡ್ಡಲಕಾಡು ಶಾಲೆಯಲ್ಲಿ ಚುನಾವಣೆ ಮೂಲಕ ನೂತನ ಮಂತ್ರಿಮಂಡಲ ರಚನೆ
ಬಂಟ್ವಾಳ: ದಡ್ಡಲ ಕಾಡು ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನೂತನ ಮಂತ್ರಿಮಂಡಲ ರಚನೆಗಾಗಿ ಚುನಾವಣೆಯನ್ನು ಹಮ್ಮಿಕೊಳ್ಳಲಾಯಿತು.ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತಹ ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಹಾಗೂ ಒಳ್ಳೆಯ ನಾಯಕನ ಆಯ್ಕೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಚುನಾವಣೆಯನ್ನು ನಡೆಸಲಾಯಿತು.

ಶಾಲೆಯ ಸುಮಾರು 11 ವಿದ್ಯಾರ್ಥಿಗಳು ಶಾಲಾ ಚುನಾವಣಾ ಆಯುಕ್ತರಾದ ರಮಾನಂದ ಅವರಲ್ಲಿ ಕಳೆದ ಮಂಗಳವಾರ ನಾಮಪತ್ರವನ್ನು ಸಲ್ಲಿಸಿದ್ದು , ಶನಿವಾರದಂದು ಚುನಾವಣೆಯನ್ನು ಆಯೋಜಿಸಲಾಗಿತ್ತು .ಚುನಾವಣಾ ಅಧಿಕಾರಿಯಾಗಿದ್ದ ಕವಿತಾ ,ವೇದಾವತಿ ಅವರು ಚುನಾವಣಾ ಆಯುಕ್ತರ ಸಮಕ್ಷಮದಲ್ಲಿ ಅಧ್ಯಕ್ಷ ಅಧಿಕಾರಿಗಳಾದ ಹಿಲ್ಡಾ ಫೆರ್ನಾಂಡಿಸ್,ಅನಿತಾ ,ಉಮಾವತಿ ,ವಿನ್ನಿ ಸಿಂತಿಯ ಇವರಿಗೆ ಚುನಾವಣಾ ಸಾಮಗ್ರಿಗಳನ್ನು ವರ್ಗಾಯಿಸಿದರು. ಇವರೊಂದಿಗೆ ಆಯಾಯ ಬೂತಿನ ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ತಮ್ಮ ನಾಯಕ ನಾಯಕಿಯ ಆಯ್ಕೆಗಾಗಿ ಮತದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು .ಬೆಳಿಗ್ಗೆ 9.30 ಕ್ಕೆ ಚುನಾವಣಾ ಪ್ರಕ್ರಿಯೆ ಪ್ರಾರಂಭಗೊಂಡು ಮತದಾನ ಮುಗಿದ ನಂತರ ಮತ ಎಣಿಕೆ ಪ್ರಾರಂಭವಾಯಿತು. ಮತ ಎಣಿಕೆ ಮುಗಿದ ನಂತರ 9 ನೇ ತರಗತಿಯ ಮಾನ್ಯ ಅತಿ ಹೆಚ್ಚು ಮತಗಳನ್ನು ಪಡೆದು ಶಾಲಾ ನಾಯಕಿಯಾಗಿ ಆಯ್ಕೆಗೊಂಡರು .
8 ನೇ ತರಗತಿಯ ವಿದ್ಯಾರ್ಥಿ ಪ್ರಥಮ್ ಶಾಲಾ ಉಪನಾಯಕನಾಗಿ ಆಯ್ಕೆಗೊಂಡರು. ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಚುನಾವಣಾ ಆಯುಕ್ತರಾದ ರಮಾನಂದ ಮಾತನಾಡಿ ಸೋಲು ಗೆಲುವು ಮುಖ್ಯವಲ್ಲ ಕರ್ತವ್ಯ ಪಾಲನೆ ಮುಖ್ಯ ಹಾಗೆ ಶಾಲೆಯ ವ್ಯವಸ್ಥೆ ಉತ್ತಮವಾಗಿ ಇರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು .
ಈ ಸಂದರ್ಭ ದಲ್ಲಿ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರಕಾಶ್ ಅಂಚನ್ ,ಪ್ರೌಢಶಾಲಾ ವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪುರುಷೋತ್ತಮ್ ಅಂಚನ್ ,ಸಂಸ್ಥೆಯ ಮುಖ್ಯೋಪಾಧ್ಯಾಯರಾದ ರಮಾನಂದ ,ಇಂಟರಾಕ್ಟ್ ಕ್ಲಬ್ ನ ವಿದ್ಯಾರ್ಥಿಗಳು ,ಪ್ರಾಥಮಿಕ ವಿಭಾಗದ ಮಾಜಿ ಎಸ್‌ಡಿಎಂಸಿ ಅಧ್ಯಕ್ಷರಾದ ರಾಮಚಂದ್ರ ಕರೆಂಕಿ, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡರು.