ಬಂಟ್ವಾಳ: ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನ 15 ಹೆಚ್ಚುವರಿ ಅಂಕ ಗಳಿಸಿದ ವಿದ್ಯಾರ್ಥಿನಿ
ಬಂಟ್ವಾಳ:ಇಲ್ಲಿನ ಪಾಣೆಮಂಗಳೂರು ಎಸ್ ಎಲ್ ಎನ್ ಪಿ ವಿದ್ಯಾಲಯದ ವಿದ್ಯಾರ್ಥಿನಿ ಕೃತಜ್ಞಾ ಧನರಾಜ್ ಇವರಿಗೆ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಮರು ಮೌಲ್ಯಮಾಪನದಲ್ಲಿ 15 ಹೆಚ್ಚುವರಿ ಅಂಕ ದೊರೆತಿದೆ.

ಈ ಹಿಂದೆ ಒಟ್ಟು 625 ರಲ್ಲಿ 597 ಅಂಕ ಗಳಿಸಿದ್ದು, ಇದೀಗ ಮರು ಮೌಲ್ಯಮಾಪನ ಬಳಿಕ ಒಟ್ಟು 612 ಅಂಕ ಗಳಿಸಿ ಶೇ.97.92 ಫಲಿತಾಂಶ ದಾಖಲಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಈಕೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆ ಶಿಕ್ಷಕ ಧನರಾಜ್ ಡಿ.ಆರ್. ಮತ್ತು ಮಂಚಿ ಕುಕ್ಕಾಜೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಕುಸುಮಾ ಎಸ್.ಬಿ. ದಂಪತಿ ಪುತ್ರಿ.