ಮೇ.3 ರಿಂದ ಅಡ್ಡೂರು ಮುಖ್ಯಪ್ರಾಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ “ಮಾತನಾಡಿಸಿದರೆ ಮಾತನಾಡುವ ದೇವರು”
ಸುದ್ದಿ9 ಪೊಳಲಿ: ಸುಮಾರು ೯೦೦-೧೦೦೦ ವರ್ಷಗಳ ಇತಿಹಾಸ ಇರುವ ಅಡ್ಡೂರು ಪೊನ್ನಂಗಿಲ ಶ್ರೀ ಮುಖ್ಯಪ್ರಾಣ ದೇವಸ್ಥಾನ* “ಮಾತನಾಡಿಸಿದರೆ ಮಾತನಾಡುವ ದೇವರು” ಎಂದೇ ಪ್ರತೀತಿ ಪಡೆದ ಅಡ್ಡೂರು ಮುಖ್ಯಪ್ರಾಣ ದೇವಸ್ಥಾನದ ಬ್ರಹ್ಮಕಲಶೋತ್ಸವವು ಇದೇ ಬರುವ ಮೇ.3 ರಿಂದ ಮೇ 7 ರವರೇಗೆ ನಡೆಯಲಿದೆ.
ಇದೇ ವೈಶಾಖ ಬಹುಳ ೨ಯ ರವಿವಾರ ದಿವಾ ಗಂಟೆ ೧೦ಕ್ಕೆ ಸರಿಯಾಗಿ ಮಿಥುನ ಲಗ್ನ ಸುಮೂಹೂರ್ತದಲ್ಲಿ ಅಡ್ಡೂರು ಪೊನ್ನಂಗಿಲ(ಅಗ್ರಹಾರ) ಶ್ರೀ ಮುಖ್ಯ ಪ್ರಾಣ ದೇವರ ನೂತನ ಗರ್ಭಗುಡಿಯಲ್ಲಿ ಪ್ರತಿಷ್ಠಾಂಗ ಅಷ್ಠಭಂಧ ಬ್ರಹ್ಮಕಲಶಾಭಿಷೇಖವು ಶ್ರೀ ಕ್ಷೇತ್ರದ ತಂತ್ರೀ ವರೇಣ್ಯರಾದ ಆಗಮ ಪ್ರವೀಣ ಶ್ರೀ ಪೊಳಲಿ ಕೋಡಿಮಜಲು ವೇದಬ್ರಹ್ಮ ಶ್ರೀ ವಿದ್ವಾನ್ ಕೆ. ಅನಂತಪದ್ಮನಾಭ ಉಪಾಧ್ದ್ಯಾಯರ ನೇತೃತ್ವದಲ್ಲಿ ನಡೆಯಲಿರುವುದು.
ಮೇ. 8 ರಂದು ಬೆಳಗ್ಗೆ *ಶ್ರೀ ರಾಮ ಜಪಯಜ್ಙ* ಅದೇ ದಿನ ಸಂಜೆ ಶ್ರೀ ಕ್ಷೇತ್ರದ ಅಮ್ಮಧೂಮಾವರತಿ ಪರಿವಾರ ಬಂಟ ದೈವಗಳಿಗೆ ನೇಮೋತ್ಸವ ಜರಗಲಿದೆ. ಶ್ರೀ ಕ್ಷೇತ್ರದ ಗೌರವಾಧ್ಯಕ್ಷರು ನೂಯಿ ಬಾಲಕೃಷ್ಣರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.