ಪಿಲಿಂಗಾಲು: ಗಾಯತ್ರಿ ದೇವಿ ದೇವಸ್ಥಾನ ಮಂತ್ರಗಳ ರಾಜ ಗಾಯತ್ರಿ ಮಂತ್ರ: ಒಡಿಯೂರು ಶ್ರೀ
ಬಂಟ್ವಾಳ: ಗಾಯತ್ರಿ ಮಂತ್ರದಲ್ಲಿ 28 ಅಕ್ಷರಗಳಿದ್ದು, ಇದು ಮಂತ್ರಗಳ ರಾಜ ಆಗಿದೆ ಎಂದು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ. ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಬದುಕಿನ ಲೆಕ್ಕಾಚಾರದಲ್ಲೂ 24 ಅಂಶಗಳು ಇದೆ. ಇಂತಹ ಅಂಶಗಳನ್ನು ಮೀರಿ ಪಿಲಿಂಗಾಲು ಗಾಯತ್ರಿ ದೇವಸ್ಥಾನ ಬೆಳೆದು ನಿಂತಿದೆ ಎಂದರು.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘು ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ, ವೇದಗಳಿಗೆ ತಾಯಿ ಗಾಯತ್ರಿ. ಈ ಮಂತ್ರ ಪಠನೆಯಿಂದ ತಾಯಿ ರಕ್ಷಿಸುತ್ತಾಳೆ ಎಂದರು. ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್. ಪಂಡಿತ್, ಬ್ರಹ್ಮಲಶ ಆರ್ಥಿಕ ಸಮಿತಿ ಅಧ್ಯಕ್ಷ ಮಾಧವ ಎಸ್.ಮಾವೆ, ಪೂಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ, ಜಿ.ಪಂ.ಮಾಜಿ ಸದಸ್ಯೆ ಕಮಲಾಕ್ಷಿ ಪೂಜಾರಿ, ಮಂಗಳೂರು ಗಾಣಿಗರ ಸಂಘದ ಅಧ್ಯಕ್ಷ ಕಣ್ಣೂರು ನಾರಾಯಣ ಸಪಲ್ಯ, ಗ್ರಾ.ಪಂ.ಸದಸ್ಯ ದಿನೇಶ್ ಎಣೆಕಲ, ಉದ್ಯಮಿ ಪ್ರಕಾಶ್ ಉಡುಪ ಬೆಂಗಳೂರು ಶುಭ ಹಾರೈಸಿದರು.
ಸಮಿತಿ ಉಪಾಧ್ಯಕ್ಷ ಪ್ರಮೋದ್ ಕುಮಾರ್ ರೈ, ಸಂಜೀವ ಪೂಜಾರಿ ಪಿಲಿಂಗಾಲು, ಮಾಣಿಕ್ಯರಾಜ್ ಜೈನ್, ಉಮೇಶ ಬೋಳಂತೂರು, ಎಂ.ಬೂಬ ಸಪಲ್ಯ ಮುಂಡಬೈಲು, ಕೆ.ಬಾಬು ಸಪಲ್ಯ ವಗ್ಗ, ಪ್ರಮುಖರಾದ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ರಾಜಾ ಎಸ್.ಹೊಳ್ಳ ಪತ್ತುಮುಡಿ, ಸುಜಿತ್ ಕುಮಾರ್ ಜೈನ್, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಯಶೋಧರ ಶೆಟ್ಟಿ ದಂಡೆ, ಚಂದ್ರಶೇಖರ ಶೆಟ್ಟಿ ವಾಮದಪದವು, ಸದಾಶಿವ ಬರಿಮಾರು, ವಾಸು ಸಪಲ್ಯ ವಗ್ಗ, ಸದಾಶಿವ ಪುತ್ರನ್, ಕೇಶವ ಶೆಟ್ಟಿ ಕಂದಾಡಿ, ಚೇತನ್ ಪಿಲಿಂಗಾಲು, ಚಿದಾನಂದ ನಾಯ್ಕ್ ಮತ್ತಿತರರು ಇದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ. ತುಂಗಪ್ಪ ಬಂಗೇರ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಕಲ್ಲಡ್ಕ ಪ್ರಾಸ್ತವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು. ದಾಮೋದರ ಶರ್ಮ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು.