ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.೪ ರಂದು ಗುರುವಾರ ಸಿಂಹ ಮಾಸದ ಶುಭ ಮಹೂರ್ತದಲ್ಲಿ ಬೆಳಗ್ಗೆ ೦೭.ಗಂಟೆಗೆ ತೆನೆಯನ್ನು ದೇವರ ಮಂಟಪದಲ್ಲಿ ತಂದು ಪೂಜೆ ನೆರವೇರಿಸಲಾಯಿತು.

ಭಕ್ತರೊಬ್ಬರ ಗದ್ದೆಯಲ್ಲಿ ಬೆಳೆದ ತೆನೆಯನ್ನು ತಂದು ದೇವರಲ್ಲಿ ಪ್ರಾರ್ಥನೆ ಮಾಡಿ ದೇವಳದ ಆವರಣಕ್ಕೆ ತೆನೆಯನ್ನು ತರಲಾಯಿತು. ಪದಾರ್ಥಿಯವರು ತಂದ ತೆನೆಯನ್ನು ದ್ವಜಸ್ಥಂಭದ ಬುಡದಲ್ಲಿ ಇಟ್ಟು ನಟ್ಟೋಜ ಮನೆತನದವರು ಅಲಂಕರಿಸಿದರು.

ಬ್ರಹ್ಮವಾಹಕ ವಾಸುದೇವ ಮಯ್ಯರು ತೆನೆಯನ್ನು ತಲೆಯಲ್ಲಿ ಹೊತ್ತುಕೊಂಡು ಪಂಚವಾದ್ಯದೊಂದಿಗೆ ದೇವಸ್ಥಾನಕ್ಕೆ ಒಂದು ಸುತ್ತು ಬಂದು ದೇವರ ಮಂಟಪದಲ್ಲಿ ಪೂಜೆ ನೆರವೇರಿಸಲಾಯಿತು. ನಂತರ ತೆನೆಯನ್ನು ದೇವರಿಗೆ ಅರ್ಪಿಸಿದ ಬಳಿಕ ತಂತ್ರಿವರ್ಗದವರಿಗೆ, ಅರ್ಚಕರಿಗೆ, ಚಾಕರಿಯವರಿಗೆ, ನೌಕರರಿಗೆ, ಗುತ್ತಿನ ಮನೆತನದವರಿಗೆ ಹಾಗೂ ಭಕ್ತಾಧಿಗಳಿಗೆ ತೆನೆಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಪಧಾನ ಅರ್ಚಕರಾದ ಮಾಧವ ಭಟ್, ಕೆ.ರಾಮ್ ಭಟ್, ನಾರಾಯಣಭಟ್, ಪರಮೇಶ್ವರ ಭಟ್, ವೆಂಕಟೇಶ್ ತಂತ್ರಿ, ವಾಸುದೇವ ಮಯ್ಯ, ಶಿವರಾಮ್ ಮಯ್ಯ, ಶ್ರೀಕಾಂತ್ ಮಯ್ಯ , ವಿಷ್ಣುಮೂರ್ತಿಭಟ್, ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಕಾರ್ಯನಿರ್ವಹಣಾಧಿಕಾರಿ, ಪ್ರವೀಣ್, ಅಮ್ಮುಂಜೆ ಗುತ್ತಿನವರು, ಉಳಿಪಾಡಿ ಗುತ್ತಿನವರು, ಮೊಗರು ಗುತ್ತಿನವರು, ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *