ಮೂಡುಶೆಡ್ಡೆಯಲ್ಲಿ ಬಿಜೆಪಿ ವಾಹನ ಜಾಥಾ
ಕೈಕಂಬ : ಮೂಡುಶೆಡ್ಡೆ ಪ್ರದೇಶದ ಬಿಜೆಪಿಗರು ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಪ್ರಯುಕ್ತ ಮಾ. ೧೨ರಂದು ಮೂಡುಶೆಡ್ಡೆಯಲ್ಲಿ ಆಯೋಜಿಸಿದ ವಾಹನ ಜಾಥಾಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಮೂಲ್ಕಿ-ಮೂಡಬಿದ್ರೆ ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ ಜಂಟಿಯಾಗಿ ಚಾಲನೆ ನೀಡಿದರು.
ಮೂಡುಶೆಡ್ಡೆ ಪಂಚಾಯತ್ ಎದುರಿನಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಈವರೆಗೂ ಸಹಕರಿಸಿದ ಅಭಿಮಾನಿ ಬಂಧುಗಳು ಮಾ. ೧೩ರಂದು ಕಿನ್ನಿಗೋಳಿಯಲ್ಲಿ ನಡೆಯಲಿರುವ ವಿರಾಟ್ ಸಭೆಗೆ ಹಾಜರಾಗಬೇಕು. ಅಲ್ಲಿಗೆ ಅಸ್ಸಾಂ ಮುಖ್ಯಮಂತ್ರಿ, ಕೇಂದ್ರ ಮತ್ತು ರಾಜ್ಯದ ಬಿಜೆಪಿ ಮುಖಂಡರು ಆಗಮಿಸಲಿದ್ದಾರೆ. ಅದೊಂದು ಕ್ಷೇತ್ರದ ಶಕ್ತಿ ಪ್ರದರ್ಶನ ಸಭೆಯೂ ಆಗಲಿದೆ ಎಂದರು.
ಮೂಲ್ಕಿ-ಮೂಡಬಿದ್ರೆ ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ ಮಾತನಾಡಿ, ಪಕ್ಷವು ಅಭಿವೃದ್ಧಿ ಜೊತೆಗೆ ಹಿಂದೂತ್ವ ಮತ್ತು ರಾಷ್ಟಿçÃಯತೆ ಬಗ್ಗೆ ಚಿಂತಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತ ವಿಶ್ವಗುರುವಾಗಬೇಕಿದೆ ಎಂದರು.
ರ‍್ಯಾಲಿಯಲ್ಲಿ ಶಾಸಕರು ಬೈಕೊಂದರಲ್ಲಿ ಸವಾರಿ ನಡೆಸಿದರು. ಬೈಕ್, ಕಾರುಗಳ ರ‍್ಯಾಲಿಯು ಮೂಡುಶೆಡ್ಡೆ ಪಂಚಾಯತ್ ಎದುರಿನಿಂದ ಎದುರುಪದವು, ನಿಸರ್ಗಧಾಮ ಮಾರ್ಗವಾಗಿ ಪಂಚಾಯತ್ ಕಡೆಗೆ ಮರಳಿತು. ರ‍್ಯಾಲಿಯಲ್ಲಿ ಬಿಜೆಪಿ ಮುಖಂಡರು, ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು