Published On: Mon, Mar 13th, 2023

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಪುಂಜಾಕಟ್ಟೆಯಲ್ಲಿ‌ ಅದ್ದೂರಿ ಸ್ವಾಗತ,ಬಂಟ್ವಾಳ ಪೇಟೆಯಲ್ಲಿ ಅಭೂತಪೂರ್ವ ರೋಡ್ ಶೋ

ಬಂಟ್ವಾಳ:  ಭಾನುವಾರ  ಬೆಳ್ತಂಗಡಿಯಿಂದ ಬಂಟ್ವಾಳ ಪ್ರವೇಶಸಿದ ರಾಜ್ಯ ಬಿಜೆಪಿ ನೇತೃತ್ವದ ವಿಜಯ ಸಂಕಲ್ಪ ಯಾತ್ರೆಯನ್ನು  ಪುಂಜಾಲಕಟ್ಟೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಹಾಗೂ ಮಾಜಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ನೇತೃತ್ವದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.


ಯಾತ್ರೆಯ ಸಂಚಾಲಕ ದೇವದಾಸ ಶೆಟ್ಟಿ,ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಪ್ಪಾನಂದ ಪ್ರಮುಖರಾದ ದೇವಪ್ಪ ಪೂಜಾರಿ ಮತ್ತಿತರರಿದ್ದರು.ಬಳಿಕ  ಪುಂಜಾಲಕಟ್ಟೆಯಿಂದ ಬಂಟ್ವಾಳ ಬಡ್ಡಕಟ್ಟೆ ವರೆಗೆ ಬೈಕ್ ,ವಾಹನ ರ್ಯಾಲಿ ನಡೆಯಿತು‌.ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಬೈಕ್,ವಾಹನ ರ್ಯಾಲಿಯಲ್ಲಿ ಭಾಗವಹಿಸಿದ್ದರು.


ಅಭೂತಪೂರ್ವ ರೋಡ್ ಶೋ..

ಬಂಟ್ವಾಳ ಬಡ್ಡಕಟ್ಟೆ ಶ್ರೀ ಹನುಮಾನ್ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ಅಭೂತಪೂರ್ವವಾದ ರೋಡ್ ಶೋ ಬಂಟ್ವಾಳ ನಗರದ ಮಾರ್ಕೆಟ್ ರಸ್ತೆ, ರಥಬೀದಿಯಲ್ಲಿ ಬಂಟ್ವಾಳ ಚಿಲಿಪಿಲಿ ಗೊಂಬೆ ಬಳಗದ ಗೊಂಬೆಕುಣಿತ , ಕೀಲುಕುದುರೆ, ಚೆಂಡೆ ವಾದನ,ಶ್ರೀ ಕ್ಷೇತ್ರ ಕೇಲ್ದೋಡಿ ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ ಹಾಗೂ ನೆಲ್ಲಿಗುಡ್ಡೆ ಬಸವನಬೈಲ್ ಪಾಂಚಜನ್ಯ ಭಜನಾ ಮಂಡಳಿಯ ಕುಣಿತ ಭಜನೆಯ ಆಕರ್ಷಣೆಯೊಂದಿಗೆಸಾವಿರಾರು ಮಂದಿ ಕಾರ್ಯಕರ್ತರ ಮುಗಿಲುಮುಟ್ಟಿದ ಘೋಷಣೆಯ ಮೂಲಕ ಸಾಗಿ ಬಂತು. 

ಯಾತ್ರೆ ಹಾಗೂ ನಾಯಕರಿದ್ದ ರಥಕ್ಕೆ ಕಾರ್ಯಕರ್ತರು ಅಲ್ಲಲ್ಲಿ ಪುಪ್ಪವೃಷ್ಠಿಗೈದರು. ಅಪಾರ ಸಂಖ್ಯೆಯಲ್ಲಿ ಬೈಕ್,ಆಟೋರಿಕ್ಷಾ,ಕಾರು ಮೊದಲಾದ ವಾಹನಗಳು ಯಾತ್ರೆಗೆ ಸಾಥ್ ನೀಡಿತು.ಸಂಘಟಕರ ನಿರೀಕ್ಷಗೂ ಮೀರಿ ರೋಡ್ ಶೋದಲ್ಲಿ‌ ಕಾರ್ಯಕರ್ತರು ಭಾಗಿಯಾಗಿದ್ದರು.


ವಿಜಯ ಸಂಕಲ್ಪ ಯಾತ್ರೆಯ ರಥದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್,ಮಾಜಿ ಸಚಿವ,ಶಾಸಕ ಕೆ.ಎಸ್. ಈಶ್ವರಪ್ಪ , ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ,ಮಾಜಿ ಶಾಸಕರಾದ ರುಕ್ಮಯಪೂಜಾರಿ,ಪದ್ಮನಾಭ ಕೊಟ್ಟಾರಿ,ಚುನಾವಣಾಪ್ರಭಾರಿ, ಮೂಡ ಅಧ್ಯಕ್ಷ ರವಿಶಂಕರ್ ಮಿಜಾರ್,ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಪ್ರಮುಖರಾದ ದತ್ತಾತ್ರೇಯ, ಉದಯಕುಮಾರ್ ರಾವ್ ಬಂಟ್ವಾಳ,ಸುಲೋಚನಾ ಜಿ.ಕೆ.ಭಟ್,ಮಾಧವ ಮಾವೆ, ಹರ್ಷಿಣಿ ಪುಪ್ಪಾನಂದ,ಪ್ರಭಾರಿ ಕೊರಗಪ್ಪ ನಾಯ್ಕ್, ಸುದೀರ್ ಶೆಟ್ಟಿ ಕಣ್ಣೂರು,ರಾಮದಾಸ ಬಂಟ್ವಾಳ, ಸಂದೇಶ್ ಶೆಟ್ಟಿ, ಮೊದಲಾದವರಿದ್ದರು.


ಹರಿದು ಬಂದ ಕೇಸರಿಸಾಗರ…
ಬಂಟ್ವಾಳ ಪೇಟೆಯುದ್ದಕ್ಕು ಕೇಸರಿ ಸಾಗರದಂತೆ ಹರಿದು ಬಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಸಂಪನ್ನಗೊಂಡಿತು.
ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್,ಪಕ್ಷದ ಸ್ಥಳೀಯ ನಾಯಕರಾದ   ಸುದರ್ಶನ್ ಬಜ,ರವೀಶ್ ಶೆಟ್ಟಿ ಕರ್ಕಳ,ರೋನಾಲ್ಡ್ ಡಿಸೋಜ,ಗಣೇಶ್ ರೈ ಮಾಣಿ,ರಮಾನಾಥ ರಾಯಿ, ಪ್ರಕಾಶ್ ಅಂಚನ್,ಪುರುಷೋತ್ತಮ ಶೆಟ್ಟಿ ವಾಮದಪದವು,ಗೋವಿಂದ ಪ್ರಭು, ಪುಪ್ಪರಾಜ ಶೆಟ್ಟಿ,ಅರುಣ್ ರೋಶನ್ ಡಿಸೋಜ,ಯಶೋಧರ ಕರ್ಬೆಟ್ಟು,ಮೋನಪ್ಪ ದೇವಸ್ಯ,ಪುರುಷೋತ್ತಮ ಸಾಲಿಯಾನ್ ಶಂಭೂರು,ಧನಂಜಯ ಶೆಟ್ಟಿ ಸರಪಾಡಿ,ಜನಾರ್ದನ ಬೊಂಡಾಲ,ಉಮೇಶ್ ಅರಳ,ಕೇಶವ ದೈಪಲ,ದಾಮೋದರ ನೆತ್ತರಕೆರೆ,ಕಾರ್ತಿ ಕ್ ಬಲ್ಲಾಳ್ ,ಸುಕೇಶ್ ಚೌಟ,ಪ್ರಭಾಕರಪ್ರಭು ಕರ್ಪೆ, ಯಶವಂತ ಪೊಳಲಿ,ಭಾರತಿ ಚೌಟ,ಸುಶ್ಮಾ ಚರಣ್,   ಕಿಶೋರ್ ಪಲ್ಲಿಪಾಡಿ,ವಿಜಯ ರೈ,ಚಿದಾನಂದ ರೈ ಕಕ್ಯ,ಚೆನ್ನಪ್ಪ ಆರ್ ಕೋಟ್ಯಾನ್,ವಜ್ರನಾಥ ಕಲ್ಲಡ್ಕ, ದಿನೇಶ್ ಅಮ್ಟೂರು,ಮೋಹನ್ ಪಿ.ಎಸ್.,ಸುರೇಶ್ ಕೋಟ್ಯಾನ್, ಕೃಷ್ಣಪ್ಪ ಪೂಜಾರಿ ದೋಟ,ಮಚ್ಚೇಂದ್ರ ಸಾಲಿಯಾನ್,ಸುರೇಶ್ ಕುಲಾಲ್ ಬಂಟ್ವಾಳ ಮೊದಲಾದವರಿದ್ದರು
ಯಾತ್ರೆಯ ಸಂಚಾಲಕ ದೇವದಾಸ ಶೆಟ್ಟಿ ಸ್ವಾಗತಿಸಿದರು.ಕ್ಷೇತ್ರದ ಪ್ರ.ಕಾರ್ಯದರ್ಶಿ ಡೊಂಬಯ ಅರಳ ವಂದಿಸಿದರು. 

 ಬಿಜೆಪಿಗೆ ಪೂರ್ಣ ಬಹುಮತ : ಈಶ್ವರಪ್ಪ
ಕರ್ನಾಟಕದ ಎಲ್ಲ ಇಲಾಖೆಗಳ ಹಣವನ್ನು ನೇರವಾಗಿ ಬಂಟ್ವಾಳಕ್ಕೇ ತಂದವರು ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು.ಕಾರ್ಯಕರ್ತರ ಇಂದಿನ ಉತ್ಸಾಹ 2023 ಕ್ಕೆ  ನಡೆಯುವ ಚುನಾವಣೆಯಲ್ಲಿ ಅವರನ್ನು 25 ಸಾವಿರಕ್ಕು‌ಅಧಿಕ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸರಕಾರ  ಅಭಿವೃದ್ಧಿಯಷ್ಟೇ ಅಲ್ಲ. ಇದರ ಜೊತೆಗೆ ಇಡೀ ಕರ್ನಾಟಕಕ್ಕೆ ರಾಷ್ಟ್ರೀಯತೆಯನ್ನು ಜಾಗೃತ ಮಾಡಿದ ಜಿಲ್ಲೆ ದಕ್ಷಿಣ ಕನ್ನಡ. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು, ಕರ್ನಾಟಕದಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆಯುವಂತಾಗಬೇಕು ಎಂದ ಅವರು ಬಿಜೆಪಿಗೆ ಪೂರ್ಣ ಬಹುಮತವನ್ನು ದೊರಕಿಸಿಕೊಡಬೇಕು, ದೇಶ, ಸಂಸ್ಕೃತಿಯ ರಕ್ಷಣೆ ಮತ್ತು ಅಭಿವೃದ್ಧಿ ಮಾಡಿದ ಪಕ್ಷ ಬಿಜೆಪಿ ಎಂಬುದನ್ನು ಗಮನದಲ್ಲಿರಿಸಿಕೊಂಡು ಗೆಲ್ಲಿಸಬೇಕು ಎಂದು ಹೇಳಿದರು.

ಸಂತೃಪ್ತಿ: ನಾಯ್ಕ್ 
ಶಾಸಕ ರಾಜೇಶ್ ನಾಯ್ಕ್ ಕಳೆದ ನಾಲ್ಕು ವರ್ಷ ಹತ್ತು ತಿಂಗಳಲ್ಲಿ ಶಾಸಕನಾಗಿ ಪ್ರಾಮಾಣಿಕ ಮತ್ತು ನಿಷ್ಠೆಯಿಂದ  ಅಭಿವೃದ್ಧ ಕೆಲಸಗಳನ್ನು ಮಾಡಿರುವ  ಸಂತೃಪ್ತಿ ಹೊಂದಿದ್ದೆನೆ.ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಬಂಟ್ವಾಳದಲ್ಲು ಬಿಜೆಪಿ ಜಯ ಸಾಧಿಸಲಿದೆ ಎಂದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter