ಅಡ್ಯನಡ್ಕ ಜನತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಕೆ. ಮಾಧವ ನಾಯ್ಕ್ ಅವರಿಗೆ ಬೀಳ್ಕೊಡುಗೆ
ಅಡ್ಯನಡ್ಕ: ಇಲ್ಲಿನ ಜನತಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೩೨ ರ‍್ಷಗಳ ಕಾಲ ಸುದರ‍್ಘ ಸೇವೆ ಸಲ್ಲಿಸಿ ಫೆಬ್ರುವರಿ ೨೮ರಂದು ವಯೋನಿವೃತ್ತರಾದ ಮುಖ್ಯೋಪಾಧ್ಯಾಯ ಕೆ. ಮಾಧವ ನಾಯ್ಕ್ ಅವರಿಗೆ ಬೀಳ್ಕೊಡುಗೆ ಸಮಾರಂಭವು ಮಾ. ೧ ರಂದು ನಡೆಯಿತು.
ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಗೋವಿಂದ ಪ್ರಕಾಶ್ ಸಾಯ ಅವರು ಅಧ್ಯಕ್ಷತೆ ವಹಿಸಿದ್ದರು.
ಜನತಾ ವಿದ್ಯಾಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮರ‍್ತಿ ಅವರು ಮುಖ್ಯ ಅತಿಥಿಯಾಗಿದ್ದರು. ಜನತಾ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ಜತ್ತಪ್ಪ ರೈ ಕುಕ್ಕುವಳ್ಳಿ, ಆಡಳಿತಾಧಿಕಾರಿಗಳಾದ ರಮೇಶ ಎಂ. ಬಾಯಾರು, ಜನತಾ ಪದವಿಪರ‍್ವ ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಅವರು ಮಾತನಾಡಿದರು. ಜನತಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಳಂತಿಮೊಗರು ಈಶ್ವರ ಭಟ್, ನಿವೃತ್ತ ಅಧ್ಯಾಪಕ ಕೆ. ಸದಾಶಿವ ಹೊಳ್ಳ, ಸಹೋದ್ಯೋಗಿಗಳಾದ ಸುಂದರ ಜಿ., ಎಸ್. ರಾಜಗೋಪಾಲ ಜೋಶಿ ಅವರು ಮಾಧವ ನಾಯ್ಕ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು. ವಿದ್ಯರ‍್ಥಿಗಳು ಅನಿಸಿಕೆಗಳನ್ನು ಹಂಚಿಕೊಂಡರು.
ಕೆ. ಮಾಧವ ನಾಯ್ಕ್ – ಗೀತಾ ದಂಪತಿಗೆ ಹಾರ, ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯಿತ್ತು ಸನ್ಮಾನಿಸಲಾಯಿತು. ಕೆ. ಮಾಧವ ನಾಯ್ಕ್ ಅವರು ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡುತ್ತಾ ವೃತ್ತಿ ಬದುಕಿನ ಅವಿಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು. ಜನತಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಎ. ಅವರು ಸ್ವಾಗತಿಸಿ, ಪ್ರಸ್ತಾವಿಸಿದರು. ಸಹಶಿಕ್ಷಕಿ ಕೆ. ಸುಗುಣ ಕರ‍್ಯಕ್ರಮ ನಿರೂಪಿಸಿ, ಜನತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ್ ಮುಳಿಯ ವಂದಿಸಿದರು.
ಜನತಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜನತಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಸಮಾರಂಭವನ್ನು ರ‍್ಪಡಿಸಲಾಗಿತ್ತು. ಆಡಳಿತ ಮಂಡಳಿ ಸದಸ್ಯರು, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.