ಕೈಕಂಬ : ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ವಾಮಂಜೂರು ತಿರುವೈಲು ವಾರ್ಡ್ ೨೦ರ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಅವರ ಪತಿ, ಉದ್ಯಮಿ ರಘು ಸಾಲ್ಯಾನ್ ಅವರು ತನ್ನ ೫೦ನೇ ಹುಟ್ಟುಹಬ್ಬದ ಸವಿ ನೆನಪಿಗಾಗಿ ತಾನು ಕಲಿತ ತಿರುವೈಲಿನ ದ.ಕ.ಜಿ.ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆಂಗ್ಲ ಮಾಧ್ಯಮ ವಿಭಾಗಕ್ಕೆ ಕೊಡುಗೆಯಾಗಿ ನೀಡಿದ ತರಗತಿ ಕೊಠಡಿಗೆ ಶಾಲಾ ಆವರಣದಲ್ಲಿ ಬುಧವಾರ ಸಾಲ್ಯಾನ್ ಸಹೋದರ ಲಿಂಗಪ್ಪ ಸಾಲ್ಯಾನ್ ಶಿಲಾನ್ಯಾಸ ನೆರವೇರಿಸಿದರು.


“ನನ್ನ ೫೦ನೇ ವರ್ಷದ ಹುಟ್ಟುಹಬ್ಬ ಸ್ಮರಣೀಯವಾಗಿರಿಸಲೆಂದು ನಾನು ಕಲಿತ ಶಾಲೆಗೆ ಈ ಕೊಡುಗೆ ನೀಡುತ್ತಿದ್ದೇನೆ. ಆಂಗ್ಲ ಮಾಧ್ಯಮ(೧-೩ನೇ ತರಗತಿ) ವಿಭಾಗದ ೩ನೇ ತರಗತಿಯಿಂದ ೪ನೇ ತರಗತಿಗೆ ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ತರಗತಿ ಕೊಠಡಿ ಕೊರತೆ ಆಗಬಾರದೆಂಬ ನೆಲೆಯಲ್ಲಿ ಈ ಕಿರು ಸೇವೆಗೈದಿದ್ದೇನೆ” ಎಂದು ರಘು ಸಾಲ್ಯಾನ್ ಹೇಳಿದರು.


ಕಾರ್ಯಕ್ರಮದಲ್ಲಿ ರಘು ಸಾಲ್ಯಾನ್ ಕುಟುಂಬದ ಸದಸ್ಯರು, ಮುಖ್ಯ ಶಿಕ್ಷಕಿ ಜೆನೆಟ್ ಪಿಂಟೊ, ಶಾಲಾ ಶಿಕ್ಷಕ ವರ್ಗ ಹಾಗೂ ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘ, ವಿದ್ಯಾ ಬೋಧಿನಿ ಎಜ್ಯುಕೇಶನ್ ಟ್ರಸ್ಟ್, ವಾಮಂಜೂರು ಟೈರ‍್ಸ್ ಸೇವಾ ಬ್ರಿಗೇಡ್‌ನ ಸದಸ್ಯರು ಉಪಸ್ಥಿತರಿದ್ದರು. ಶಾಲಾಭಿವೃದ್ಧಿಗೆ ವಾಮಂಜೂರು ಟೈರ‍್ಸ್ನವರು ೧೦,೦೦೦ ರೂ. ನಗದು ನೀಡಿದರು.

By suddi9

Leave a Reply

Your email address will not be published. Required fields are marked *