ಫೆ.12 ರಂದು ಮಂಚಿ – ಕೊಳ್ಳಾಡು ಸರಕಾರಿ ಪ್ರೌಢ ಶಾಲಾ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ಕ್ರೀಡಾಕೂಟ
ಬಂಟ್ವಾಳ: ಮಂಚಿ – ಕೊಳ್ಳಾಡು ಸರಕಾರಿ ಪ್ರೌಢ ಶಾಲಾ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ಕ್ರೀಡಾಕೂಟ-2023 ಕಾರ್ಯಕ್ರಮ ಫೆ. 12 ರಂದು ಮಂಚಿ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಯನ್ ರಾಮ್ ಪ್ರಸಾದ್ ರೈ ತಿರುವಾಜೆ ತಿಳಿಸಿದರು.

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಹಿರಿಯ ವಿದ್ಯಾರ್ಥಿ ಸಂಘವನ್ನು ಬಲಪಡಿಸುವ ದೃಷ್ಟಿಯಿಂದ ದೂರದೂರಿನಲ್ಲಿ ನೆಲೆಸಿರುವ ಹಲವಾರು ಹಿರಿಯ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಡಿಯಲ್ಲಿ ಕರೆ ತರಬೇಕೆನ್ನುವ ಉದ್ದೇಶದಿಂದ ಹಿರಿಯ ವಿದ್ಯಾರ್ಥಿಗಳ ಸಹಮಿಲನ ಹಾಗೂ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದರು.
ಇದೇ ಶಾಲೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿ, ಪುಣೆ ಮಹಾರಾಷ್ಟ್ರದ ಡಿ ವೈ ಪಾಟೀಲ್ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಹಾಗೂ ಪ್ರೊ. ಡಾ. ಬೀರಾನ್ ಮೊಯ್ದಿನ್ ಬಿ.ಎಂ. ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ಇವರು ವಹಿಸಲಿದ್ದಾರೆ. ಫಾದರ್ ಸೈಮನ್ ಡಿಸೋಜಾ, ಡಾ. ನವೀನ್ ಚಂದ್ರ ಕುಲಾಲ್, ಲ. ಸತೀಶ್ ಆಳ್ವ ಬಾಳಿಕೆ, ಡಾ. ರಾಜೇಶ್ ರೈ ಅಗರಿ ಪಾಲ್ತಾಜೆ, ಡಾ. ಸುರೇಖಾ ಅಮರನಾಥ ಶೆಟ್ಟಿ, ವಿಶ್ವನಾಥ ನಾಯ್ಕ, ಸುಲೈಮಾನ್ ಕೆ., ಪ್ರವೀಣ್ ಕೊಟ್ಟಾರಿ, ರಾಧಾಕೃಷ್ಣ ಭಟ್, ಸುಶೀಲಾ ವಿಟ್ಲ ನಾಗೇಶ್ ಶೆಟ್ಟಿ ಮುಂಬೈ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸಂಘದ ವತಿಯಿಂದ ಈಗಾಗಲೇ ಹಲವಾರು ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಹಿರಿಯ ವಿದ್ಯಾರ್ಥಿಗಳ ಸಹಮಿಲನ ಮತ್ತು ಸಂಗ್ರಹವಾಗುವ ನಿಧಿಯಿಂದ ಶಾಶ್ವತ ಯೋಜನೆಯೊಂದನ್ನು ರೂಪಿಸಲಾಗಿದೆ. ಶಾಲಾವರಣದಲ್ಲಿರುವ ಸುಮಾರು 50 ಸೆಂಟ್ಸ್ ಜಾಗದಲ್ಲಿ ಅಡಿಕೆ ಸಸಿಗಳನ್ನು ನಾಟಿ ಮಾಡಿ ನಾಲ್ಕು ವರ್ಷಗಳ ಕಾಲ ಸಂಘವೇ ಜವಾಬ್ದಾರಿಯನ್ನು ಹೊತ್ತು ಬಳಿಕ ಫಲಭರಿತ ಅಡಿಕೆ ತೋಟವನ್ನು ಶಾಲೆಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದರು.
ಈ ಕಾರ್ಯಕ್ತಮದಲ್ಲಿ ಇದೇ ಶಾಲೆಯಹಳೇವಿದ್ಯಾಥಿಗಳಾಗಿದ್ದು,ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಲ.ಡಾ.ಎಂ.ಗೋಪಾಲಾಚಾರ್ ಮಂಚಿ,ತಾರನಾಥ ಕೈರಂಗಳ,ಎಸ್ ಕೃಷ್ಣಪ್ಪ ಶಿಂಗಾರಕೋಡಿ,ನಾಗೇಶ್ ಸಿ.ಎಚ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರಮಾನಂದ ನೂಜಿಪ್ಪಾಡಿ, ಉಮ್ಮರ್ ಕುಂಞ, ಹಾ.ಜಿ.ಸುಲೈಮಾನ್ ಜಿ, ಕೊಳ್ನಾಡು ಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲ ವಿಟ್ಲ,ಚಿತ್ರಕಲಾ ಶಿಕ್ಷಕ ತಾರನಾಥ ಕೈರಂಗಳ ಮತ್ತಿತರರಿದ್ದರು.