ಜ. ೩-೪ರಂದು ಶ್ರೀ ವಜ್ರದೇಹಿ ಮಠದ ವಾರ್ಷಿಕ `ವಜ್ರದೇಹಿ ಜಾತ್ರೆ’
ಕೈಕಂಬ : ಶ್ರೀ ವಜ್ರದೇಹಿ ಮಠ ಗುರುಪುರ ಇದರ ವಾರ್ಷಿಕ `ವಜ್ರದೇಹಿ ಜಾತ್ರೆ’ ಜನವರಿ ೩ ಮತ್ತು ೪ರಂದು ಶ್ರೀ ರಾಜಶೇಖರಾನಂದ ಸ್ವಾಮಿ ಅವರ ಉಪಸ್ಥಿತಿ ಹಾಗೂ ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆಯವರ ಆಧ್ವರ್ಯುತನದಲ್ಲಿ ಶ್ರೀ ರಾಮಾಂಜನೇಯ ದೇವರ ಸನ್ನಿಧಿಯಲ್ಲಿ ನಡೆಯಲಿದೆ.
ಜ. ೩ರಂದು ಬೆಳಿಗ್ಗೆ ೮ಕ್ಕೆ ತೋರಣ ಮುಹೂರ್ತ, ದ್ವಾದಶ ನಾರಿಕೇಳ ಮಹಾಗಣಯಾಗ, ಉಗ್ರಾಣ ಮುಹೂರ್ತ, ನವಕ ಕಲಶಾಭಿಷೇಕ, ಕೂರ್ಮ ಮಹಾಸಾಲಿಗ್ರಾಮ ಮತ್ತು ಅನಂತ ಪದ್ಮನಾಭ ಮಹಾಸಾಲಿಗ್ರಾಮಕ್ಕೆ ಮಹಾಮಜ್ಜನ, ಶ್ರೀ ನಾಗದೇವರಿಗೆ ಪಂಚಾಮೃತಾಭಿಷೇಕ, ಸಾಮೂಹಿಕ ಆಶ್ಲೇಷಾ ಬಲಿ ಸೇವೆ ನಡೆಯಲಿದೆ.
ಮಧ್ಯಾಹ್ನ ೧೨ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಶ್ರೀ ರಾಜಶೇಖರಾನಂದ ಸ್ವಾಮಿ, ಸಚಿವ ವಿ. ಸುನಿಲ್ ಕುಮಾರ್, ಉದ್ಯಮಿಗಳಾದ ಲ. ಸಂಜೀತ್ ಶೆಟ್ಟಿ, ಡಾ. ಚಂದ್ರಶೇಖರ್, ಲ. ವಸಂತ್ ಕುಮಾರ್ ಶೆಟ್ಟಿ, ಬಿಜೆಪಿ ಮುಖಂಡ ಗುರ್ಮೆ ಸುರೇಶ್ ಶೆಟ್ಟಿ, ಧಾರ್ಮಿಕ ಮುಖಂಡ ಶೆಡ್ಡೆ ಮಂಜುನಾಥ ಭಂಡಾರಿ, ಮನೋಹರ ಶೆಟ್ಟಿ, ಸುರೇಂದ್ರ ರಾವ್ ಶುಭಮಂಗಳ ಪಾಲ್ಗೊಳ್ಳುವರು. ಕಲ್ಲಡ್ಕ ವಿಠಲ ನಾಯಕ್, ತುಳಸಿದಾಸ್ ಮಂಜೇಶ್ವರ, ಡಾ. ಯೋಗೀಶ್ ತಂತ್ರಿ ಇವರಿಗೆ ಗೌರವಾರ್ಪಣೆ ಹಾಗೂ ಮಧ್ಯಾಹ್ನ ೧ರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ೨ರಿಂದ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ' ಮತ್ತು ರಾತ್ರಿ ೯ರಿಂದ ಲ. ಕಿಶೋರ್ ಡಿ. ಶೆಟ್ಟಿ ಸಾರಥ್ಯದಲ್ಲಿ
ಲಲಿತೆ’ ತಂಡದ ಕಲಾವಿದರಿಂದ `ಗರುಡ ಪಂಚಮಿ’ ನಾಟಕ ಪ್ರದರ್ಶನಗೊಳ್ಳಲಿದೆ.
ಜ. ೪ರಂದು ಬೆಳಿಗ್ಗೆ ೬ಕ್ಕೆ ಕವಾಟೋದ್ಘಾಟನೆ, ಧರ್ಮ ದೈವಗಳ ಭಂಡಾರ ಏರುವುದು, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ೪:೩೦ರಿಂದ ಶ್ರೀ ದೇವರ ಬಲಿ, ಕಟ್ಟೆಪೂಜೆ, ವಸಂತ ಮಂಟಪ ಪೂಜೆ, ಓಕುಳಿ, ಅವಭೃತ, ಪ್ರಸಾದ ವಿತರಣೆಯಾಗಲಿದೆ. ರಾತ್ರಿ ೯ರಿಂದ ಮೈಸಂದಾಯ, ಶ್ರೀ ರಕ್ತೇಶ್ವರಿ ಮತ್ತು ಅಣ್ಣಪ್ಪ ಪಂಜುರ್ಲಿ ದೈವಗಳ ನೇಮ ನಡೆಯಲಿದೆ.