ಕುಪ್ಪೆಪದವು ಶ್ರೀ ದುರ್ಗೆಶ್ವರೀ ದೇವಿ ದೇವಸ್ಥಾನದಲ್ಲಿ ಫೆ.07ರಿಂದ ಫೆ.12ರವರೆಗೆ ನಡೆಯುವ ಬ್ರಹ್ಮ ಕಲಶೋತ್ಷವದ ಚಪ್ಪರ ಮುಹೂರ್ತ
ಕೈಕಂಬ:ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಕುಪ್ಪೆಪದವು ಶ್ರೀ ದುರ್ಗೆಶ್ವರೀ ದೇವಿ ದೇವಸ್ಥಾನದಲ್ಲಿ ಫೆಬ್ರವರಿ 7ರಿಂದ 12 ರವರೆಗೆ ನಡೆಯಲಿರುವ ಬ್ರಹ್ಮ ಕಲಶೋತ್ಸವಕ್ಕೆ ಚಪ್ಪರ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಭಾನುವಾರ ಬೆಳಿಗ್ಗೆ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಸದಾಶಿವ ಕಾರಂತ ಧಾರ್ಮಿಕ ವಿಧಿಗಳನ್ನು ನೆರವೇರಿಸಿದ ನಂತರ ಸಾಂಕೇತಿಕವಾಗಿ ಶೃಂಗರಿಸಿದ ಅಡಿಕೆ ಮರವನ್ನು ಸ್ಥಾಪಿಸಲಾಯಿತು.
ಮ್ಯಾನೇಜಿಂಗ್ ಟ್ರಷ್ಟಿ ಪ್ರವೀಣ್ ಕುಮಾರ್ ಜೈನ್ ಅಗರಿ, ಟ್ರಷ್ಟಿ ಪುರುಷೋತ್ತಮ್ ಕೆ. ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ರಾಮಚಂದ್ರ ಸಾಲ್ಯಾನ್, ಬ್ರಹ್ಮ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ, ಕಾರ್ಯಾಧ್ಯಕ್ಷ ವಿನೋದ್ ಕುಮಾರ್ ಅಂಬೆಲೋಟ್ಟು, ಕಾರ್ಯದರ್ಶಿ ಮಹಾಬಲ ಸಾಲ್ಯಾನ್, ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ಸದಸ್ಯ ಪ್ರವೀಣ್ ಆಳ್ವ ಗುಂಡ್ಯ,ಶಿವರಾಮ ಕಾರಂತ ಸೇರಿದಂತೆ ಜೀರ್ಣೋದ್ದಾರ ಮತ್ತು ಬ್ರಹ್ಮ ಬ್ರಹ್ಮಕಲಶೋತ್ಸವ ಸಮಿತಿಗಳ ಪದಾಧಿಕಾರಿಗಳು, ಕಿಲೆಂಜಾರು, ಕುಲವೂರು ಮತ್ತು ಮುತ್ತೂರು ಗ್ರಾಮಗಳ ಗಣ್ಯರು, ಭಕ್ತಾದಿಗಳು, ದೇವಸ್ಥಾನದ ಅರ್ಚಕ ವೃಂದ, ಸಿಬ್ಬಂದಿವರ್ಗ ಹಾಜರಿದ್ದರು.