ಕೊಂಕಣಿ ಸಭಾ ಮುಲುಂಡ್ ಅಧ್ಯಕ್ಷರಾಗಿ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಆಯ್ಕೆ
ಮುಂಬಯಿ: ಬೃಹನ್ಮುಂಬಯಿ ಉಪನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಸ್ವಾಸ್ಥ್ಯ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕöÈತಿಕ ಸೇವೆಗಳೊಂದಿಗೆ ಸೇವಾ ನಿರತ ಕೊಂಕಣಿ ಸಭಾ (ರಿ.) ಮುಲುಂಡ್ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಮುಲುಂಡ್‌ನಲ್ಲಿ ಸಭಾದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಡೆಸಲಾಗಿದ್ದು ಸಂಸ್ಥೆಯ ನೂತನ ಅಧ್ಯಕ್ಷ ಆಗಿ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಇವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿದೆ.
ಉಪಾಧ್ಯಕ್ಷರಾಗಿ ಫೆಲಿಕ್ಸ್ ಬರ್ನಸ್ ಬಾರ್ಕೂರು, ಕಾರ್ಯದರ್ಶಿ ಆಗಿ ಪಾಸ್ಕಲ್ ಲೋಬೊ, ಕೋಶಾಧಿಕಾರಿ ಗಿಲ್ಬರ್ಟ್ ಫುರ್ಟಾಡೊ, ಜೊತೆ ಕಾರ್ಯದರ್ಶಿ ಫಿಡಿಲೇಸ್ ಫೆರ್ನಾಂಡಿಸ್, ಜೊತೆ ಕೋಶಾಧಿಕಾರಿ ಫ್ರಾನ್ಸಿಸ್ ಡಿಸೋಜಾ ಆಯ್ಕೆ ಗೊಂಡಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹೆನ್ರಿ ಡಿಸೋಜಾ, ಪಾಸ್ಕಲ್ ಫೆರ್ನಾಂಡಿಸ್, ಫ್ಲೋರಿನ್ ಡಿಮೆಲ್ಲೊ, ಜುಲಿಯಾ ಚೆನ್, ಸೈಮನ್ ಗೋಮ್ಸ್, ರಿಚ್ಚರ್ಡ್ ಲುವಿಸ್, ಬೆನೆಡಿಕ್ಟಾ ಡಿಸೋಜಾ, ರುಜಾಯ್ ಫೆರ್ನಾಂಡಿಸ್, ಮೆಲ್ವಿನ್ ಫೆರ್ನಾಂಡಿಸ್ ಆಯ್ಕೆಯಾಗಿದ್ದಾರೆ.