ಪೊಳಲಿ ವ್ಯವಸಾಯ ಸಹಕಾರ ಸಂಘದ ವತಿಯಿಂದ ನೂತನ ಬೆಂಜನಪದವು ಶಾಖೆಯ ಉದ್ಘಾಟನೆ
ಕೈಕಂಬ: ಪೊಳಲಿ ವ್ಯವಸಾಯ ಸಹಕಾರ ಸಂಘದ ವತಿಯಿಂದ ಬೆಂಜನಪದವು ಹೋಲಿ ಫ್ಯಾಮಿಲಿ ಕಾಂಪ್ಲೆಕ್ಸ್ ನಲ್ಲಿ ನ.೨೫ರಂದು ಶಾಖೆಯು ಪ್ರಾರಂಭಗೊಂಡಿತು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶಾಖೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಭದ್ರತಾ ಕೊಠಡಿಯ ಉದ್ಘಾಟನೆಯನ್ನು ಸಹಕಾರ ಸಂಘದ ಉಪ ನಿಬಂಧಕರು ಎಚ್ ಎನ್ ರಮೇಶ್ ನೆರವೇರಿಸಿದರು. ಕೆ.ಗೋಪಾಲಕೃಷ್ಣ ಭಟ್ ಪ್ರಥಮ ಠೇವಣಿ ಪತ್ರದ ಬಿಡುಗಡೆಗೊಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಟಿ .ಜೆ.ರಾಜರಾಮ್ ಭಟ್ ಮಾತನಾಡಿ ಯಾವುದೇ ಗ್ರಾಹಕ ನಮ್ಮ ಸಂಘಕ್ಕೆ ನೋ ಡ್ಯೂ ಸರ್ಟಿಪಿಕೆಟ್ ಕೇಳಲು ಬಂದರೆ ಅಪಾಯದ ಮುನ್ಸೂಚನೆ ಎಂದು ಅರಿತಿರಬೇಕು. ನಮ್ಮದೆ ಸಂಘದಲ್ಲಿ ಗ್ರಾಹಕರಿಗೆ ಉತ್ತಮ ಸರ್ವೀಸ್ ನೀಡಿದರೆ ಯಾವೊಬ್ಬ ಗ್ರಾಹಕ ಬೇರೊಂದು ಬ್ಯಾಂಕ್ ಗೆ ಸಾಲ ಪಡೆಯಲು ಹೋಗುವುದಿಲ್ಲ ಎಂದು ಹೇಳಿದರು.
ಈ ಭಾಗದ ರೈತರಿಗೆ ಕ್ರಷಿ ಚಟುವಟಿಕೆಗಳಿಗೆ ಬೇಕಾದ ರಾಸಾಯನಿಕ ಗೊಬ್ಬರ, ಜನ ಔಷದ, ಸಾಲ ಸೌಲಭ್ಯ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುವಂತೆ ಪೊಳಲಿ ವ್ಯವಸಾಯ ಸಹಕಾರ ಸಂಘದಿಂದ ಇನ್ನೂ ಹೆಚ್ಚಿನ ಪ್ರಯೋಜನಗಳು ಪಡೆಯುವತಾಗಲಿ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಮ್ಮುಂಜೆ ಗ್ರಾಮದ ಅದ್ಯಕ್ಷ ವಾಮನ ಆಚಾರ್ಯ ಮತ್ತು ಕರಿಯಂಗಳ ಗ್ರಾಮದ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬಂಟ್ವಾಳ ಸಹಕಾರ ಅಭಿವೃದ್ಧಿ ಅಧಿಕಾರಿ ಗೋಪಾಲ್ ಎನ್ ಜೆ, ಸಹಕಾರ ಸಂಘಗಳ ಸಹಾಯಕ ನಿಬಂದಕರು ಸುಧೀರ್ ಕುಮಾರ್ ಜೆ., ಸ್ಕಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಹಾಗೂ ಪೊಳಲಿ ವ್ಯವಸಾಯ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ,ಉಪಾಧ್ಯಕ್ಷ ವೆಂಕಟೇಶ್ ನಾವಡ ಪೊಳಲಿ, ಕಾರ್ಯನಿರ್ವಹಣಾಧಿಕಾರಿ ವಿಜಯ್ ರವಿ ಫೆರ್ನಾಂಡಿಸ್ ,ಪೊಳಲಿ ವ್ಯವಸಾಯ ಸಹಕಾರ ಸಂಘದ ನಿರ್ದೇಶಕರಾದ ಯಶವಂತ ಪೂಜಾರಿ ಪೊಳಲಿ ,ಡಿ.ಎ ಅಬುಬಕ್ಕರ್ , ಕರುಣಾಕರ ಆಳ್ವ, ದೇವದಾಸ ಹೆಗ್ಡೆ ಬಿ, ಗೋಪಾಲ ಅಂಚನ್, ಕರಿಯದ, ವಾಮನ ಪೂಜಾರಿ, ನಿರಂಜನಿ ಸಿ. ಶೆಟ್ಟಿ, ಜಯಂತಿ, ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ಕೇಶವ ಕಿಣಿ ಹೆಚ್. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.ಡಿ.ಎ.ಅಬುಬಕ್ಕರ್ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ್ ನಾವಡ ಸ್ವಾಗತಿಸಿ, ಯಶವಂತ ಪೊಳಲಿ ವಂದಿಸಿದರು,