ನ.೨೭ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಕರಾವಳಿ ಆಯುರ್ವೇದ ಮೆಡಿಕಲ್ ಕಾಲೇಜು ಅಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಮಂಗಳೂರು ಇವರ ವತಿಯಿಂದ “ಆಜಾದಿ ಕ ಅಮೃತ ಮಹೋತ್ಸವ”ದ ಅಂಗವಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನ.೨೭ರಂದು ಭಾನುವಾರ ಜರಗಲಿದೆ.
ಈ ಶಿಬಿರದಲ್ಲಿ ಸಾಮಾನ್ಯವಾಗಿ ಕಂಡುಬರುವ ತೊಂದರೆಗಳಾದ ಬಿ.ಪಿ., ಸಕ್ಕರೆ ಕಾಯಿಲೆ, ಕೆಮ್ಮು ದಮ್ಮು, ಮಂಡಿನೋವು, ಸೊಂಟ ನೋವು, ಮೂತ್ರ ತೊಂದರೆ, ಅಜೀರ್ಣ, ಗ್ಯಾಸ್ಟಿಕ್ ತೊಂದರೆ, ನಿದ್ರಾಹೀನತೆ, ಮಾನಸಿಕ ಅಶಾಂತಿ, ನೆನಪಿನ ಶಕ್ತಿ ಕಡಿಮೆಯಾಗುವುದು, ನರಗಳ ತೊಂದರೆ ಹಾಗೂ ಇನ್ನಿತರ ಸಾಮಾನ್ಯ ತೊಂದರೆಗಳಿಗೆ ತಪಾಸಣೆ ಮಾಡಲಾಗುವುದು.