Published On: Thu, Nov 24th, 2022

ನ.26 ರಂದು‌ ಸತ್ಯ- ಧರ್ಮ ಜೋಡುಕರೆ ಬಯಲು ಕಂಬಳ

ಬಂಟ್ವಾಳ: ಉಳಿಗ್ರಾಮದ ಕಕ್ಯಪದವು ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಆಶ್ರಯದಲ್ಲಿ ದಶಮಾನೋತ್ಸವ ಸಂಭ್ರಮದ  ಸತ್ಯ- ಧರ್ಮ ಜೋಡುಕರೆ ಬಯಲು ಕಂಬಳವು ಕಕ್ಯಪದವು ಮೈರ- ಬರ್ಕೆಜಾಲು ಎಂಬಲ್ಲಿ ನ.26 ರಂದು ನಡೆಯಲಿದೆ ಎಂದು‌ ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ ತಿಳಿಸಿದ್ದಾರೆ.

ಗುರುವಾರ ಸಂಜೆ ಬಂಟ್ಚಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಗೌರವಾಧ್ಯಕ್ಷತೆ ಹಾಗೂ ಕುಸುಮಾಧರ ಉರ್ಕಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಂಬಳಕೂಟದಲ್ಲಿ ಸುಮಾರು 200 ಜೋಡಿ ಓಟದ ಕೋಣಗಳು ಭಾಗವಹಿಸಲಿವೆ ಎಂದರು.

ಈ ಸಾಲಿನ ಮೊದಲು ಕಂಬಳ ಕೂಟ ಇದಾಗಿದ್ದು, ಸತ್ಯ-ಧರ್ಮ ಜೋಡುಕರೆ ಕಂಬಳಕ್ಕೆ ದಶಮಾನೋತ್ಸವದ ಹಿನ್ನಲೆಯಲ್ಲಿ ಇದರ
ಯಶಸ್ಸಿಗೆ ಸಿದ್ದತೆಗಳು ಭರದಿಂದ ಸಾಗುತ್ತಿದೆ ಎಂದರು.

ಬೆಳಗ್ಗೆ  ಉಳಿ ಶ್ರೀಗೋಪಾಕೃಷ್ಣ  ದೇವಸ್ಥಾನದ ಪ್ರಧಾನ ಅರ್ಚಕರಾದ ಯೋಗೀಂದ್ರ ಭಟ್ ಕಂಬಳಕ್ಕೆ ಚಾಲನೆ ನೀಡಲಿದ್ದಾರೆ.ಸಂಜೆ ಶಾಸಕ ರಾಜೇಶ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ  ಸಮಾರೋಪ ಸಮಾರಂಭದಲ್ಲಿ ಸಚಿವರಾದ ಸುನೀಲ್ ಕುಮಾರ್,ಕೋಟಾ ಶ್ರೀನಿವಾಸ ಪೂಜಾರಿ,ಸಂಸದ ನಳಿನ್ ಕುಮಾರ್ ಕಟೀಲ್,ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್  ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ 7  ಮಂದಿ ಸಾಧಕರಿಗೆ ಸನ್ಮಾನ ಹಾಗೂ  ರಾಜ್ಯೋತ್ಸವ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ‌ ಪುರಸ್ಕೃತರಿಗೆ ಅಭಿನಂದನೆ ನಡೆಯಲಿದೆ ಎಂದರು.

ಇದೇ ಮೊದಲ ಬಾರಿಗೆ ಕಂಬಳಕೂಟದಲ್ಲಿ ಮರಿಕೋಣ ವಿಭಾಗದಲ್ಲಿ ಕೋಣಗಳನ್ನು ಓಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದ ಅವರು ಕಂಬಳ ಕೂಟವು ಸರಕಾರ ರೂಪಿಸಿದ ನಿಯಮದಂತೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿ ಪದಾಧಿಕಾರಿಗಳಾದ ಸಾಂತಪ್ಪ ಪೂಜಾರಿ ಹಟದಡ್ಕ,ಸುರೇಶ್ ಮೈರ,ರಂಜಿತ್ ಮೈರ, ರವೀಂದ್ರಶೆಟ್ಟಿ,ಯಶೋಧರ ಕರ್ಬೆಟ್ಟು ಮೊದಲಾದವರಿದ್ದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter