ಬಂಟ್ವಾಳ: ಬೆಂಬಲ ಬೆಲೆಯಡಿ ಭತ್ತ ಖರೀದಿ ಆರಂಭ
ಬಂಟ್ವಾಳ: ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವತಿಯಿಂದ ಇಲ್ಲಿನ ಬಿ.ಸಿ.ರೋಡು ದಾಸ್ತಾನು ಮಳಿಗೆಯಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲಾಗಿದೆ. ಈ ಖರೀದಿ ಕೇಂದ್ರದಲ್ಲಿ ಕನಿಷ್ಟ ಬೆಂಬಲ ಬೆಲೆ- ಸಾಮಾನ್ಯ ಭತ್ತ ಕ್ವಿಂಟಾಲ್ ಗೆ ರೂ ೨,೦೪೦, ಎ -ಗ್ರೇಡ್
ಭತ್ತಕ್ಕೆ ರೂ ೨,೦೬೦, ಪ್ರತೀ ಕ್ವಿಂಟಾಲ್ ಗೆ ರೂ.೫೦೦ ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಒಂದು ರೈತರಿಂದ ಗರಿಷ್ಟ ೪೦ ಕ್ವಿಂಟಾಲ್ ತನಕ ಭತ್ತ ಖರೀದಿಸಲಾಗುವುದು. ಈಗಾಗಲೇ ಫ್ರುಟ್ಸ್ ತಂತ್ರಾAಶದಲ್ಲಿ ನೋಂದಣಿ ಮಾಡಿಸಿಕೊಳ್ಳದೇ ಇರುವ ರೈತರು ಆಯಾಯ ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಆಸಕ್ತರು ಖರೀದಿ ಕೇಂದ್ರದ ನೋಡೆಲ್ ಅಧಿಕಾರಿ ವಿಜಯ್ (ಮೊ. ೯೩೮೦೪೩೫೪೮೫) ಇವರನ್ನು ಸಂಪರ್ಕಿಸಬಹುದು ಎಮದು ಪ್ರಕಟಣೆ ತಿಳಿಸಿದೆ.