ಬಂಟ್ವಾಳ: ಅಭಿವೃದ್ಧಿ ಎಂಬುದು ನಿರಂತರವಾಗಿ ನಡೆಯುತ್ತಲೇ ಇರುವ ಪ್ರಕ್ರಿಯೆ , ಅದರ ಜೊತೆಗೆ ದೇಶವನ್ನು ಭದ್ರತೆಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಜೊತೆಯಾಗಿ ಕೆಲಸ ಮಾಡಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಅಮ್ಟಾಡಿ ಬಿಜೆಪಿ ಶಕ್ತಿಕೇಂದ್ರ ಇದರ ಆಶ್ರಯದಲ್ಲಿ ಕಾರ್ಯಕರ್ತರ ಸಮಾವೇಶ ಹಾಗೂ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲ್ಲಿ ಒಟ್ಟು 4 ಕೋ. 95 ಲಕ್ಷ ಅನುದಾನದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಬಳಿಕ ಅಮ್ಟಾಡಿ ಸೇ.ಸ.ಸಂಘದ ಬಳಿ ನಡೆದ ಸಭಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಶಾಸಕನಾದ ಬಳಿಕ ಕ್ಷೇತ್ರದ ಅಭಿವೃದ್ದಿಗಾಗಿ ಶಕ್ತಿಮೀರಿ ಕೆಲಸ  ಮಾಡಿರುವ ತೃಪ್ತಿ ಇದೆ ಎಂದ ಶಾಸಕರು,ಕೋವಿಡ್ ಸಂಕಷ್ಟದ ಕಾಲದಲ್ಲಿ ಆರೋಗ್ಯ ರಕ್ಷಣೆ ಜೊತೆಗೆ ಅನೇಕ ಜನರ ಕಷ್ಟಗಳಿಗೆ ಸ್ಪಂದಿಸುವ , ಜನರ ಸೇವೆ ಮಾಡುವ ಭಾಗ್ಯವನ್ನು ಒದಗಿಸಿದ್ದಾರೆ. ಅಭಿವೃದ್ದಿ ಜೊತೆಗೆ ದೇಶದ ಭದ್ರತೆಗಾಗಿ ಪಕ್ಷನ್ನು ಬಲಪಡಿಸುವ ಮೂಲಕ ದೇಶವನ್ನು ಕಟ್ಟುವ ಕೆಲಸ ಯುವ ಪೀಳಿಗೆ ಮಾಡಬೇಕು ಎಂದು ಅವರು ಹೇಳಿದರು.

ನಾಯ್ಕ್ ರಿಂದ ಭರ್ಜರಿ ಬ್ಯಾಟಿಂಗ್ : ಹರಿಕೃಷ್ಣ
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಅವರು ಮಾತನಾಡಿ  ಬಂಟ್ವಾಳದ ರಾಜಕೀಯ ಪಿಚ್ ನಲ್ಲಿ ವಿರೋಧ ಪಕ್ಷದ ಎಲ್ಲಾ ಬಾಲ್ ಗಳಿಗೂ  ಭರ್ಜರಿಯಾದ ಬ್ಯಾಟಿಂಗ್ ಮಾಡಿ  ಗೆಲುವು ಸಾಧಿಸುವ ತಾಕತ್ತು ರಾಜೇಶ್ ನಾಯ್ಕ್ ಅವರಿಗೆ ಇದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು. 

ಮತದಾರರು ವಿಶ್ವಾಸವಿಟ್ಟು ನೀಡಿದ ಮತಕ್ಕೆ ಯಾವುದೇ ರೀತಿಯ ಚ್ಯುತಿ ಬಾರದ ರೀತಿಯಲ್ಲಿ ಸಮಗ್ರ ಅಭಿವೃದ್ಧಿ ಯನ್ನು ನುಡಿದಂತೆ ಮಾಡಿದ ರಾಜ್ಯದ ಶಾಸಕರ ಪೈಕಿ ರಾಜೇಶ್ ನಾಯ್ಕ್ ಒರ್ವ ಎಂದು ಅವರು ಹೇಳಿದರು.

2000 ಸಾವಿರ ಕೋಟಿಗೂ ಹೆಚ್ಚು ಅನುದಾನ ವನ್ನು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಗೆ ನೀಡಿ  ಶಾಸಕ ರಾಜೇಶ್ ಅವರು  ದಾಖಲೆ ನಿರ್ಮಿಸಿದ್ದಾರೆ ಮುಂದಿನ ಚುನಾವಣೆಯಲ್ಲು ಅವರನ್ನು ಆಶೀರ್ವದಿಸುವಂತೆ ಹರಿಕೃಷ್ಣ ಬಂಟ್ವಾಳ ಮನವಿ ಮಾಡಿದರು. ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷೆ ಮೋಹಿನಿ ಅವರು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಮ್ಟಾಡಿ ಗ್ರಾಮ ಪಂಚಾಯತ್  ಉಪಾಧ್ಯಕ್ಷ ಸುನಿಲ್ ಕುಮಾರ್, ಸದಸ್ಯರಾದ ಯಶವಂತ ಶೆಟ್ಟಿ, ಯೋಗೀಶ್, ವಿಜಯ್ ಕುಮಾರ್, ಪ್ರಕಾಶ್, ಹರೀಶ್ ಶೆಟ್ಟಿ ಪಡು, ಭಾರತಿ ಚೌಟ, ವಿಶ್ವನಾಥ ಕಲಾಯಿ, ಫೆಲಿಕ್ಸ್ ಡಿ.ಸೋಜ, ಚಂದ್ರಾವತಿ , ನಳಿನಿ, ವಿಶ್ವನಾಥ ಕಲಾಯಿ, 
ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ,ಪ್ರ. ಕಾರ್ಯದರ್ಶಿ ಡೊಂಬಯ್ಯ ಅರಳ, ಭೂ ಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್ ಡಿ.ಸೋಜ, ಬಂಟ್ವಾಳ ವಿ.ಎಸ್.ಎಸ್. ಬ್ಯಾಂಕ್ ಅಧ್ಯಕ್ಷ ಪದ್ಮನಾಭ ಬಂಟ್ವಾಳ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ,  ಪ್ರಮುಖರಾದ ರಮನಾಥ ರಾಯಿ, ಆನಂದ ಶಂಭೂರು,  ರೊನಾಲ್ಡ್ ಡಿ.ಸೋಜ ಅಮ್ಟಾಡಿ,    ಪುರುಷೋತ್ತಮ  ಶೆಟ್ಟಿ ವಾಮದಪದವು, ದಿನೇಶ್ ಶೆಟ್ಟಿ ದಂಬೆದಾರ್,ಸಂತೋಷ್ ರಾಯಿಬೆಟ್ಟು,  ಚಂದ್ರಕಲಾಯಿ, ಪ್ರಶಾಂತ್ ಕೆಂಪುಗುಡ್ಡೆ, ಅಮ್ಟಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷೆ ಚಂದ್ರಾವತಿ ಪೊಳಲಿ, ಸಂಚಾಲಕ ದೇವದಾಸ್, ಸಹಸಂಚಾಲಕ ಯೋಗೀಶ್,  ಗುತ್ತಿಗೆದಾರರಾದ ಸೀತಾರಾಮ ಪೂಜಾರಿ, ಯೋಗೀಶ್ ಕರ್ಪೆ,ಲೋಕೇಶ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.

ಉದ್ಘಾಟನೆ ಮತ್ತು ಶಿಲಾನ್ಯಾಸಗೊಂಡ ಕಾಮಗಾರಿಗಳು:
ರೂ.5 ಲಕ್ಷ ವೆಚ್ಚದಲ್ಲಿ ಅಮ್ಟಾಡಿ ಗ್ರಾಮದ ಕಲಾಯಿ ಪಾದೆಚ್ಚಿಲ್  ಕೋಡಿ ರಸ್ತೆ ಕಾಂಕ್ರೀಟಿಕರಣ , ರೂ.10 ಲಕ್ಷ ವೆಚ್ಚದಲ್ಲಿ ಕಲಾಯಿ ಶ್ರೀ ಮಹಮ್ಮಾಯಿ ದೇವಸ್ಥಾನ ರಸ್ತೆ ಕಾಂಕ್ರೀಟಿಕರಣ, ರೂ. 10 ಲಕ್ಷ ಅನುದಾನದ ಲ್ಲಿ  ಬಂಟ್ವಾಳ ದಿಂದ ಕಲಾಯಿ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ, ಅಮ್ಟಾಡಿ ಗ್ರಾಮ ಪಂಚಾಯತ್ ನ ಆವರಣದಲ್ಲಿ ನೀರು ಸರಬರಾಜು ಟ್ಯಾಂಕ್ ಉದ್ಘಾಟನೆ, 15 ಲಕ್ಷ ವೆಚ್ಚದಲ್ಲಿ ಅಮ್ಟಾಡಿ ಮಾಲ್ತೋಟ ರಸ್ತೆ ಕಾಂಕ್ರೀಟಿಗೆ ಶಿಲಾನ್ಯಾಸ, ರೂ. 15 ಲಕ್ಷ ವೆಚ್ಚದಲ್ಲಿ ಲೊರೊಟ್ಟೊ ಗ್ರಾ.ಪಂ. ರಸ್ತೆ ಅಭಿವೃದ್ಧಿ, ರೂ.10 ಲಕ್ಷ ವೆಚ್ಚದಲ್ಲಿ ಲೊರೆಟ್ಟೊ ರಸ್ತೆ ಅಭಿವೃದ್ಧಿ, 2.50 ಲಕ್ಷ ವೆಚ್ಚದಲ್ಲಿ ಪೆದಮಲೆ ದೇವಸ್ಥಾನ ರಸ್ತೆ ಅಭಿವೃದ್ಧಿ , ರೂ.10 ಲಕ್ಷ ಅನುದಾನ ದಲ್ಲಿ ಅಜೆಕಲ ಕಾಂಕ್ರೀಟ್ ರಸ್ತೆ ಉದ್ಘಾಟನೆ, ರೂ.75 ಲಕ್ಷ ವೆಚ್ಚದಲ್ಲಿ ಕಾಯರ್ ಮಾರ್ ರಸ್ತೆ ಡಾಮರೀಕರಣ ಉದ್ಘಾಟನೆ, ರೂ.50 ಲಕ್ಷ ವೆಚ್ಚದಲ್ಲಿ ಕಿನ್ನಿಬೆಟ್ಟು ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ, ರೂ.5 ಲಕ್ಷ ವೆಚ್ಚದಲ್ಲಿ ಕಿನ್ನಿಬೆಟ್ಟು ಮೈರ ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆ,  ರೂ.5 ಲಕ್ಷ ವೆಚ್ಚದಲ್ಲಿ ಕಿನ್ನಿಬೆಟ್ಟು ದೋಟ ತಡೆಗೋಡೆ , ರೂ.5 ಲಕ್ಷ  ವೆಚ್ಚದಲ್ಲಿ ಕಿನ್ನಿಬೆಟ್ಟು ಮೈರ ರಸ್ತೆ ಶಿಲಾನ್ಯಾಸ, ರೂ.10 ಲಕ್ಷ ವೆಚ್ಚದಲ್ಲಿ ಒ.ಎಚ್‌, ಡಿ ನೀರಿನ ಟ್ಯಾಂಕ್ ಉದ್ಘಾಟನೆ, ರೂ.6 ಲಕ್ಷ ವೆಚ್ಚದಲ್ಲಿ ಬಡಾಜೆ ರಸ್ತೆ ಕಾಂಕ್ರೀಟ್ ಗೆ ಶಿಲಾನ್ಯಾಸ, ರೂ .10 ಲಕ್ಷ ವೆಚ್ಚದಲ್ಲಿ ಗುತ್ತಾರ್ ರಸ್ತೆ ಅಭಿವೃದ್ಧಿ , ರೂ.10 ಲಕ್ಷ ವೆಚ್ಚದಲ್ಲಿ ಬಾಂಬಿಲಪದವು ರಸ್ತೆ ಅಭಿವೃದ್ಧಿ , ಪಂಜಿಗುಡ್ಡೆ ರಸ್ತೆ ಬದಿ ತಡೆಗೋಡೆ ನಿರ್ಮಾಣಕ್ಕೆ ಶಿಲಾನ್ಯಾಸ,  ರೂ12.75 ಲಕ್ಷ ವೆಚ್ಚದಲ್ಲಿ ಏರ್ಯ ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆ, ರೂ.5. ಲಕ್ಷ ಅನುದಾನದಲ್ಲಿ, ಮುಂಡೆಗುರಿ ಸಾರ್ವಜನಿಕ ರುದ್ರಭೂಮಿ ಕಾಂಕ್ರೀಟ್ ರಸ್ತೆ ಉದ್ಘಾಟನೆ, ರೂ.7 ಲಕ್ಷ ವೆಚ್ಚದಲ್ಲಿ  ಹೊಳ್ಳರಬೈಲು ಲೋರಿಬೆಟ್ಟು ಕಾಂಕ್ರೀಟ್ ರಸ್ತೆ ಉದ್ಘಾಟನೆ,  ರೂ.75 ಲಕ್ಷ ವೆಚ್ಚದಲ್ಲಿ ನಲ್ಕೆಮಾರ್ ರಸ್ತೆ ಕಾಂಕ್ರೀಟ್, ರೂ.5 ಲಕ್ಷ ವೆಚ್ಚದಲ್ಲಿ ಕಿನ್ನಿಬೆಟ್ಟು ಕಾಂಕ್ರೀಟ್ ರಸ್ತೆ,  ರೂ. 3 ಲಕ್ಷ ಅನುದಾನದಲ್ಲಿ ನಲ್ಕೆ ಮಾರ್ ಶಾಲಾ ಅವರಣ ಗೋಡೆ, ರೂ.18 ಲಕ್ಷ ಅನುದಾನದ ಲ್ಲಿ ದೇವಿನಗರ ತಡೆಗೋಡೆ, ರೂ.12

ಲಕ್ಷ ಅನುದಾನ ದಲ್ಲಿ ನಲ್ಕೆಮಾರ್ ಶಾಲಾ ಕೊಠಡಿಯ ಉದ್ಘಾಟನೆ
ಒಟ್ಟು 4.95 ಲಕ್ಷ ಅನುದಾನದ ಲ್ಲಿ  ನಿರ್ಮಾಣವಾಗಿರುವ  ರಸ್ತೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ಶಾಸಕ ರಾಜೇಶ್ ನಾಯ್ಕ್ ನೆರವೇರಿಸಿದರು. 

By Suddi9

Leave a Reply

Your email address will not be published. Required fields are marked *