ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆಯವರಿಗೆ ಜೆಸಿಐ ಬಂಟ್ವಾಳದಿಂದ ಸನ್ಮಾನ.
ಬಂಟ್ವಾಳ: ಜೆಸಿಐ ಇದರ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಇವರನ್ನು ಗೌರವಿಸಿ ಅಭಿನಂದಿಸಿದ್ದಾರೆ.

ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಇವರ ಮಾಧ್ಯಮ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಜೆಸಿಐ ಬಂಟ್ವಾಳ ಇವರು ಸನ್ಮಾನಿಸಿದ್ದಾರೆ, ಪ್ರಸ್ತುತ ಇವರು ತಾಲೂಕಿನ ಜನಪ್ರಿಯ ಕೋಸ್ಟಲ್ ಬುಲೆಟಿನ್ ವೆಬ್ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಜೆಸಿಐ ವಲಯಧ್ಯಕ್ಷ ಪುರುಷೋತ್ತಮ್ ಶೆಟ್ಟಿ, ಪ್ರಾಂತ್ಯ ಉಪಾಧ್ಯಕ್ಷ ಅಜಿತ್ ಕುಮಾರ್ ಕೆ,ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಆನಂದ ಕೆ ಕುಂಪಲ, ಜೆಸಿಐ ಬಂಟ್ವಾಳದ ನೂತನ ಅಧ್ಯಕ್ಷ ರಾಜೇಂದ್ರ ಕೆ, ನಿಕಟಪೂರ್ವ ಅಧ್ಯಕ್ಷ ರೋಶನ್ ಕೆ ರೈ ಪಚ್ಚಿನಡ್ಕ, ಉಮೇಶ ಆರ್ ಮೂಲ್ಯ,ವಿದ್ಯಾ ಉಮೇಶ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.