ರಾಯಿ: ಸ್ವಚ್ಛ ಸಂಕೀರ್ಣ ಘಟಕ ಮತ್ತು ಎರಡು ಹಿಂದೂ ರುದ್ರಭೂಮಿ ಲೋಕಾರ್ಪಣೆ
ಬಂಟ್ವಾಳ: ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಚ್ಛ ಸಂಕೀರ್ಣ ಘಟಕ ಮತ್ತು ಎರಡು ಹಿಂದೂ ರುದ್ರಭೂಮಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಶುಕ್ರವಾರ ಚಾಲನೆ ನೀಡಿದರು.

ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ ೧೦ ಕೋಟಿಗೂ ಮಿಕ್ಕಿ ಅನುದಾನದಲ್ಲಿ ವಿವಿಧ ರಸ್ತೆ ಕಾಂಕ್ರಿಟೀಕರಣ, ಅಣೆಕಟ್ಟೆ ಮತ್ತಿತರ ಸೌಲಭ್ಯ ಒದಗಿಸಲಾಗಿದ್ದು, ಇಲ್ಲಿನ ಸ್ವಚ್ಛ ಸಂಕೀರ್ಣ ಘಟಕ ಮತ್ತು ಹಿಂದೂ ರುದ್ರಭೂಮಿ ಅಭಿವೃದ್ಧಿಗೂ ಅನುದಾನ ನೀಡುವುದಾಗಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಚ್ಛ ಸಂಕೀರ್ಣ ಘಟಕ ಸಹಿತ ರಾಯಿ ಮತ್ತು ಕೈತ್ರೋಡಿ ಎರಡು ಪತ್ಯೇಕ ಹಿಂದೂ ರುದ್ರÀಭೂಮಿ ಶುಕ್ರವಾರ ಸಂಜೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಾ ಆನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಪ್ರಾಸ್ತಾವಿಕ ಮಾತನಾಡಿ, ಗ್ರಾಮ ಪಂಚಾಯಿತಿ ಜೊತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ಹಿಂದೂ ರುದ್ರಭೂಮಿ ನಿರ್ಮಾಣಗೊಂಡಿದೆ ಎಂದರು. ಗ್ರಾ.ಪಂ.ಸದಸ್ಯರಾದ ಸಂತೋಷ್ ಕುಮಾರ್ ಬೆಟ್ಟು, ದಿನೇಶ ಶೆಟ್ಟಿ, ಯಶೋಧ ನಾಯ್ಕ, ಉಷಾ ಸಂತೋಷ್, ಗುಣವತಿ, ಪುಷ್ಪಾವತಿ, ಮಾಜಿ ಅಧ್ಯಕ್ಷರಾದ ಜಿ.ದಾಮೋದರ ಬಂಗೇರ, ಇಂದಿರಾ ಮಧುಕರ ಬಂಗೇರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಕೆ.ನಾಯ್ಕ್, ಜಲಜೀವನ್ ಮಿಷನ್ ಎಂಜಿನಿಯರ್ ವಿಘ್ನೇಶ್ ರಾಜ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಶಿವಾನಂದ, ರುದ್ರಭೂಮಿ ಮೇಲ್ವಿಚಾರಕ್ಷರಾದ ಬಿ.ದಯಾನಂದ ಸಪಲ್ಯ, ಕೆ.ಪರಮೇಶ್ವರ ಪೂಜಾರಿ ಮತ್ತಿತರರು ಇದ್ದರು.
ಪಿಡಿಒ ಮಧು ಟಿ.ಎಲ್.ಸ್ವಾಗತಿಸಿ, ದಿನೇಶ ಸುವರ್ಣ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.