ಮಂಗಳೂರು: ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ದುಬೈನಿಂದ ಬಂದಿಳಿದ ಇಬ್ಬರು ಯಾನಿಗಳು ಗುದನಾಳದಲ್ಲಿ ಅಡಗಿಸಿದ್ದ 18 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್ ಗಳನ್ನು ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದಾರೆ.

gold seize

gold seize1

ಮೊದಲ ಯಾನಿಯಿಂದ 233.300 ಗ್ರಾಂ. ಚಿನ್ನ ಹಾಗೂ ಇನ್ನೊಬ್ಬನಿಂದ 466.600 ಗ್ರಾಂ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಉದುಮ ನಿವಾಸಿ ಹಝೀಝ್ ಸುಲೇಮಾನ್, ಅಡ್ಕತ್ತಬೈಲ್ ನಿವಾಸಿ ಅಬ್ದುಲ್ ಹಮೀದ್ ಮುಟ್ಟತ್ತೋಡಿ ಎಂದು ಹೆಸರಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

By suddi9

Leave a Reply

Your email address will not be published. Required fields are marked *