Published On: Fri, Nov 18th, 2022

ಸಿಡಿಲು ಬಡಿದು ಮೃತಪಟ್ಟ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ ಕಾರ್ತಿಕ್ ಮನೆಗೆ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ ನೀಡಿ ಪರಿಹಾರ ನಿಧಿಯಿಂದ ರೂ 5 ಲಕ್ಷ ಹಸ್ತಾಂತರ

ಬಂಟ್ವಾಳ: ವಿಧಾನಸಭಾ ಕ್ಷೇತ್ರದ ಕರಿಯಂಗಳ ಗ್ರಾಮದ ಸಾಣೂರು ಪದವಿನಲ್ಲಿ ಮೊನ್ನೆ ರಾತ್ರಿ ಸಿಡಿಲು ಬಡಿದು ಮೃತಪಟ್ಟ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ ಕಾರ್ತಿಕ್ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿ ಸರಕಾರದ ಪ್ರಾಕೃತಿಕ ವಿಕೋಪದ ಪರಿಹಾರ ನಿಧಿಯಿಂದ ರೂ 5 ಲಕ್ಷದ ಮಂಜೂರಾತಿ ಪತ್ರವನ್ನು ಮೃತನ ಪೋಷಕರಾದ ರಂಜನಿ ಗಣೇಶ್ ಇವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಮಾನಾಥ ರಾಯಿ, ಬಿಜೆಪಿ ಅಮ್ಟಾಡಿ ಮಂಡಲ ಅಧ್ಯಕ್ಷರಾದ ಚಂದ್ರಾವತಿ ಪೊಳಲಿ, ಜಿಲ್ಲಾ ಯುವಮೋರ್ಚ ಕಾರ್ಯಕಾರಿಣಿ ಸದಸ್ಯರಾದ ಕಿಶೋರ್ ಪಲ್ಲಿಪಾಡಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಯಶವಂತ ಪೊಳಲಿ, ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಭರಣಿ, ಶ್ರೀಮತಿ ಗೀತ ಬಡಕಬೈಲ್, ಬಿಜೆಪಿ ಪ್ರಮುಖರಾದ ಸುಕೇಶ್ ಚೌಟ ಬಡಕಬೈಲ್, ಗೋಪಾಲ ಬಂಗೇರ, ಚಂದ್ರಶೇಖರ ಶೆಟ್ಟಿ ಬಡಕಬೈಲ್, ಲೋಕೇಶ್ ಸಾಣೂರುಪದವು, ಲೋಕೇಶ್ ಲಚ್ಚಿಲ್, ರೋಶನ್ ಗರೊಡಿ, ಗಣೇಶ್ ಧೋಟ, ಯೋಗೇಂದ್ರ ,ಜಗದೀಶ್ ಗುಂಡಿಕುಮೇರ್, ಮತ್ತು ಸಂಘಟನೆ ಯ ಪ್ರಮುಖರಾದ ಚಂದ್ರಶೇಖರ ಕಂಡದಬೆಟ್ಟು, ರೋಹಿತ್, ಪ್ರೇಮನಾಥ್,ನಿತೇಶ್ ,ಗ್ರಾಮ ಕರಣಿಕರಾದ ಪ್ರಶಾಂತ್, ಮತ್ತು ಕಂದಾಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter