ಪಕ್ಷಿಕೆರೆ: ಅಪಘಾತ; ಬೈಕ್ ಸವಾರ ಸಾವು
ಕಿನ್ನಿಗೋಳಿ: ಪಕ್ಷಿಕೆರೆ ಸಮೀಪದ ಕೊಯಿಕುಡೆ ಪೆಟ್ರೋಲ್ ಬಂಕ್ ಬಳಿಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಆಟೋ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ

ಮೃತ ಬೈಕ್ ಸವಾರನನ್ನು ಕೋಲ್ನಾಡು ಸಸಿತೋಟ ನಿವಾಸಿ ಪಕ್ಷಿಕೆರೆ ಪ್ಲಾಟ್ ನಲ್ಲಿ ವಾಸ್ತವ್ಯವಿರುವ ಶರತ್ ಶೆಟ್ಟಿ(49) ಎಂದು ಗುರುತಿಸಲಾಗಿದೆ. ಮೃತ ಶರತ್ ಶೆಟ್ಟಿ ಹಳೆಯಂಗಡಿಯ ಸಂಸ್ಥೆಯೊಂದರಲ್ಲಿ ಚಾಲಕನಾಗಿ ದುಡಿಯುತ್ತಿದ್ದು ಕೆಲಸ ಮುಗಿಸಿ ತಮ್ಮ ಬೈಕ್ ನಲ್ಲಿ ವಾಪಸ್ ಬರುವ ವೇಳೆ ಪಕ್ಷಿಕೆರೆ ಕೊಯಿಕುಡೆ ಪೆಟ್ರೋಲ್ ಬಂಕ್ ಬಳಿ ವಿರುದ್ಧ ದಿಕ್ಕಿನಿಂದ ಬಂದ ಆಟೋ ರಿಕ್ಷಾ ಜೊತೆ ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಶರತ್ ಶೆಟ್ಟಿ ರವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಅಪಘಾತದಿಂದ ಆಟೋ ಹಾಗೂ ಬೈಕ್ ಜಖಂಗೊಂಡಿದ್ದು ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ಶರತ್ ಶೆಟ್ಟಿ ಮುಂಬೈನಲ್ಲಿ ವಾಸ್ತವ್ಯವಿದ್ದು ಇತ್ತೀಚೆಗಷ್ಟೇ ಊರಿನಲ್ಲಿ ನೆಲೆಸಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಅಗಲಿದ್ದಾರೆ.