ಬಿ.ಸಿ.ರೋಡು: ಜೀವ ವಿಮಾ ಪ್ರತಿನಿಧಿಗಳ ಸಂಘಟನೆ ವಿಚಾರ ಸಂಕಿರಣ, ಡಿ.9ರಂದು ಹೈದರಾಬಾದ್ ನಲ್ಲಿ ಬೃಹತ್ ಧರಣಿ ನಡೆಸಲು ನಿರ್ಧಾರ
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಗಾಣದಪಡ್ಪು ಸಭಾಂಗಣದಲ್ಲಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ ವತಿಯಿಂದ ಸೋಮವಾರ ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಮುಖಂಡ ಎಲ್. ಮಂಜುನಾಥ್, ಲೋಕೇಶ ಶೆಟ್ಟಿ, ಎಂ.ಎಸ್.ಭಟ್ ಮತ್ತಿತರರು ಇದ್ದಾರೆ.
ಕಳೆದ 66 ವರ್ಷಗಳಲ್ಲಿ ಪ್ರತಿನಿಧಿಗಳ ಪರಿಶ್ರಮದಿಂದ ದೇಶದಲ್ಲೇ ಅತೀ ದೊಡ್ಡ ವಿಮಾ ಸಂಸ್ಥೆಯಾಗಿ ಬೆಳೆದು ನಿಂತಿರುವ ಭಾರತೀಯ ಜೀವ ವಿಮಾ ನಿಗಮದಲ್ಲಿ ಐ ಆರ್ ಡಿ ಎ ರೂಪಿಸುತ್ತಿರುವ ಕೆಲವೊಂದು ಅನಗತ್ಯ ಪ್ರಸ್ತಾವನೆ ಮತ್ತು ಮಾರಕ ಯೋಜನೆಗಳು ಸಂಸ್ಥೆ ಮತ್ತು ಪ್ರತಿನಿಧಿಗಳ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ. ಇದಕ್ಕಾಗಿ ಡಿ.9ರಂದು ಹೈದರಾಬಾದ್ ನಲ್ಲಿ ಐ ಆರ್ ಡಿ ಎ ವಿರುದ್ಧ ಲಕ್ಷಾಂತರ ಮಂದಿ ಪ್ರತಿನಿಧಿಗಳು ವಿವಿಧ ರಾಜ್ಯಗಳಿಂದ ಬಂದು ಧರಣಿ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಲಿಕಾಯ್ ಸಂಘದ ದಕ್ಷಿಣ ಮಧ್ಯೆ ವಲಯ ಅಧ್ಯಕ್ಷ ಎಲ್. ಮಂಜುನಾಥ್ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಗಾಣದಪಡ್ಪು ಸಭಾಂಗಣದಲ್ಲಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ ವತಿಯಿಂದ ಸೋಮವಾರ ನಡೆದ ‘ ಐ ಆರ್ ಡಿ ಎ ಪ್ರಸ್ತಾವನೆ ಮತ್ತು ಪರಿಣಾಮ’ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಘದ ಉಡುಪಿ ವಿಭಾಗೀಯ ಅಧ್ಯಕ್ಷ ಎಂ.ಎಸ್.ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ರಾಜ್ಯಗಳಿಂದಲೂ ಪ್ರತಿಭಟನೆಗೆ ತೆರಳಲು ಪ್ರತಿನಿಧಿಗಳು ಮುಂದಾಗಿದ್ದಾರೆ ಎಂದರು.
ರಾಜ್ಯ ಸಮಿತಿ ಅಧ್ಯಕ್ಷ ಎ.ಎಸ್.ಲೋಕೇಶ ಶೆಟ್ಟಿ ಮಾತನಾಡಿ, ಈಗಾಗಲೇ ಆಯಾಯ ಜಿಲ್ಲೆಯ ಸಂಸದರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದರು.
ರಾಜ್ಯ ಉಪಾಧ್ಯಕ್ಷೆ ರೇಖಾ ಕೋಟೆಕಾರ್, ರಾಜ್ಯ ಜೊತೆ ಕಾರ್ಯದಶರ್ಿ ವಲಿ ಮೊಯ್ದಿನ್, ಉಡುಪಿ ವಿಭಾಗ ಪ್ರಧಾನ ಕಾರ್ಯದಶರ್ಿ ದಯಾನಂದ ಶೆಟ್ಟಿ ಕೆ.ಪಿ., ಬಂಟ್ವಾಳ ಘಟಕ ಅಧ್ಯಕ್ಷ ಪ್ರಶಾಂತ ಕೋಟ್ಯಾನ್ ಮತ್ತಿತರರು ಇದ್ದರು.
ಇದೇ ವೇಳೆ ಹೈದರಾಬಾದ್ ಧರಣಿ ಬಗ್ಗೆ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಉಡುಪಿ ವಿಭಾಗ ಕಾಯರ್ಾಧ್ಯಕ್ಷ ಪ್ರಕಾಶ್ ರೈ ಸಾರಕೆರೆ ಸ್ವಾಗತಿಸಿ, ಕೋಶಾಧಿಕಾರಿ ಲಕ್ಷ್ಮಣ ಸಾಲ್ಯಾನ್ ವಂದಿಸಿದರು. ಪ್ರತಿನಿಧಿ ನವೀನ್ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು.