ನ.15ರಂದು ಒಡ್ಡೂರಿನಲ್ಲಿ ಬಿಜೆಪಿ ಹಿರಿಯರ ಸಮ್ಮಿಲನ
ಬಂಟ್ವಾಳ: ಬಿಜೆಪಿ ಹಿರಿಯರ ಸಮ್ಮಿಲನ ಕಾರ್ಯಕ್ರಮ ಬಂಟ್ವಾಳ ಬಿಜೆಪಿ ಮಂಡಲದ ವತಿಯಿಂದ ಶಾಸಕ ರಾಜೇಶ್ ನ್ಯಾಕ್ ಅವರ ನೇತೃತ್ವದಲ್ಲಿ ನ. 15ರಂದು ಒಡ್ಡೂರು ಫಾರ್ಮ್ ನಲ್ಲಿ ನಡೆಯಲಿದೆ.
ಈ ನಿಟ್ಟಿನಲ್ಲಿ ಪೂರ್ವತಯಾರಿಯಸಭೆಯು ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು. ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಧಾನ ಕಾರ್ಯ ದರ್ಶಿಗಳಾದ ಡೊಂಬಯ ಅರಳ, ರವೀಶ್ ವಿಟ್ಲಪಡೂರು ಮತ್ತು ಬಿಜೆಪಿ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.