ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಸದಸ್ಯರಿಂದ ಸ್ವಾಗತ
ಕಲ್ಲಡ್ಕ: ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ವತಿಯಿಂದ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಗಣಿತ ವಿಜ್ಞಾನ ಮೇಳದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿಯ ಮೋನಿಶಾ ಮತ್ತು ೬ನೇ ತರಗತಿಯ ಸಾನ್ವಿಕಾಮತ್ ಅವರಿಗೆ ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮೀರಘುರಾಜ್, ಸುಧಾ ಭಟ್ ಮತ್ತು ಮಲ್ಲಿಕಾ ಶೆಟ್ಟಿರವರು ಆರತಿ ಬೆಳಗಿ, ತಿಲಕವಿಟ್ಟು, ಸಿಹಿ ನೀಡಿ, ಹೂವುವಿಟ್ಟು ಆರ್ಶೀವಾದ ಮಾಡಿದರು. ನಂತರ ವಿಜೇತ ವಿದ್ಯಾರ್ಥಿಗಳುತಮ್ಮ ಅನಿಸಿಕೆ ಹಂಚಿಕೊಂಡರು.ಸಂಯೋಜಕರಾದ ರಾಜೇಶ್ವರಿ ಎಂ ತಮ್ಮ ಅನುಭವಗಳನ್ನು ಹಂಚಿಕೊಂಡು ಮಕ್ಕಳಿಗೆ ಪ್ರೇರಣಾ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಹಾಗೂ ಅಧ್ಯಾಪಕ ವೃಂದ, ಅಧ್ಯಾಪಕರೇತರ ವೃಂದ ಉಪಸ್ಥಿತರಿದ್ದರು.