ಸೌದಿ ಅರೇಬಿಯಾದಲ್ಲಿ ಟೀಂ ಬಿ ಹ್ಯೂಮನ್ 2ನೇ ಘಟಕ ಆರಂಭ
ಸೌದಿ ಅರೇಬಿಯಾದಲ್ಲಿ ಟೀಂ ಬಿ ಹ್ಯೂಮನ್ ತನ್ನ 2ನೇ ಘಟಕವನ್ನು ರಚಿಸಿತು. ಟೀಂ ಬಿ ಹ್ಯೂಮನ್ ಈ ಹಿಂದೆ ಕೇವಲ ಒಂದೇ ಘಟಕವನ್ನು ಝುಬೈಲ್ ನಲ್ಲಿ ಹೊಂದಿದ್ದು, 2ನೇ ಕೊರೊನಾ ಅಲೆಯ ಮೊದಲು ರಿಯಾದ್, ಬುರೈದಾ, ಜೆಡ್ಡಾ ಮತ್ತು ದಮ್ಮಾಮ್ ನಲ್ಲಿ ತನ್ನ ಹೊಸ ಘಟಕಗಳನ್ನು ರಚಿಸುವ ಯೋಜನೆಯನ್ನು ಹಮ್ಮಿಕೊಂಡಿತ್ತು. ಈಗ ಸೌದಿ ಅರೇಬಿಯಾದಲ್ಲಿ ಜುಬೈಲ್ ಮತ್ತು ಗಾಸಿಮ್ ಘಟಕಗಳನ್ನು ರಚಿಸಲಾಗಿದ್ದು, ಉಳಿದ ಘಟಕಗಳನ್ನು ಸಹ ಆದಷ್ಟು ಬೇಗ ರಚಿಸಲಾಗುವುದು.
ಸ್ಥಳೀಯ ಉದ್ಯಮಿಗಳು, ವೈದ್ಯರು ಮತ್ತು ಇತರ ಸದಸ್ಯರು 2016ರಲ್ಲಿ ಟೀಂ ಬಿ ಹ್ಯೂಮನ್ ರಚನೆಯಾದಾಗಿನಿಂದ ಮತ್ತು ಕೈಗೊಂಡ ಎಲ್ಲಾ ಸೇವೆಗಳನ್ನು ಬೆಂಬಲಿಸಲು ಕೈಜೋಡಿಸಿದ್ದಾರೆ.
ಸಭೆಯು ಶ್ರೀ ಖಾದರ್ ಕನಂಗಾರ್ ಅವರ ಪವಿತ್ರ ಖುರಾನ್ ನ ಪಠಣದೊಂದಿಗೆ ಪ್ರಾರಂಭವಾಯಿತು. ಮುಖ್ಯ ಅತಿಥಿಗಳಾದ ಸುನ್ನೀ ಯುವಜನ ಸಂಘದ ಅಧ್ಯಕ್ಷ ಡಾ. ಅಬ್ದುಲ್ ರಶೀದ್ ಸಖಾಫಿ ಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ, ಯಾವುದೇ ಜಾತಿ ಅಥವಾ ವರ್ಣ ಭೇದ ನೋಡದೆ ಅಗತ್ಯವಿರುವವರಿಗೆ ಸಹಾಯ ಮಾಡುವುದು ಅಲ್ಲಾಹನಿಗೆ ಹೆಚ್ಚು ಇಷ್ಟವಾದ ಕೆಲಸ ಎಂದು ಸಲಹೆ ನೀಡಿದರು. ಟೀಂ ಬಿ-ಹ್ಯೂಮನ್ ಝುಬೈಲ್ ಯುನಿಟ್ ಅಧ್ಯಕ್ಷರಾದ ಶ್ರೀ ಬಶೀರ್ ಅಲ್ ಫಲಕ್ ರವರು ಭಾರತದಲ್ಲಿ ನಡೆಯುತ್ತಿರುವ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು.
ನವಾಜ್ ಡೀಲ್ಸ್ ಮತ್ತು ಲತೀಫ್ ಫರಂಗಿಪೇಟೆ ಇವರು ನುಹೈಮಾ ಕಂಪೌಂಡ್ ನಲ್ಲಿ ಕಾರ್ಯಕ್ರಮವನ್ನು ಅದ್ಭುತವಾಗಿ ಏರ್ಪಡಿಸಿದರು. ಟೀಂ ಬಿ-ಹ್ಯೂಮನ್ ಸ್ಥಾಪಕರಾದ ಶ್ರೀ ಆಸೀಫ್ ಡೀಲ್ಸ್ ರವರು ತಮ್ಮ ಅಮೂಲ್ಯ ಸಮಯವನ್ನು ಸಂಸ್ಥೆಯ ಒಳಿತಿಗಾಗಿ ವ್ಯಯಿಸಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು. ಹಾಗೂ ಸಿರಾಜ್ ಎರ್ಮಾಳ್ ರವರು ಸಭೆಗೆ ಆಗಮಿಸಿದ ಎಲ್ಲಾ ಅತಿಥಿಗಳಿಗೆ ವಂದನೆಗಳನ್ನು ಅರ್ಪಿಸಿದರು