ಮಳಲಿ ಮಸೀದಿ ವಿವಾದ; ವಿಹಿಂಪಗೆ ಮೊದಲ ಗೆಲುವು – ಮಹತ್ವದ ತೀರ್ಪು ಕೊಟ್ಟ ಸಿವಿಲ್ – ನ್ಯಾಯಾಲಯ
ಕೈಕಂಬ: ಮಳಲಿ ಮಸೀದಿಯಲ್ಲಿ ಕರಾವಳಿಯಲ್ಲಿ ಹೊಸ ಸಂಚಲನ ಮೂಡಿಸಿದ ಪ್ರಕರಣ. ಮಸೀದಿ ಕೆಡವಿದಾಗ ಅಲ್ಲಿ ದೇಗುಲದ ಮಾದರಿಯಲ್ಲಿರಚನೆ ಕಂಡುಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಇಂದು ಮಹತ್ವದ ತೀರ್ಪು ನೀಡಿದ್ದು ವಿಶ್ವ ಹಿಂದೂ ಪರಿಷತ್‌ಗೆ ಮೊದಲ ಗೆಲುವು ಲಭಿಸಿದೆ.
ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಬಳಿ ದರ್ಗಾವನ್ನು ನವೀಕರಣಕ್ಕಾಗಿ ಕೆಡವಿದಾಗ ಹಿಂದೂ ದೇಗುಲ ಹೋಲುವ ಆಕೃತಿಯ ವಾಸ್ತುಶಿಲ್ಪದ ಕಟ್ಟಡ ಪತ್ತೆಯಾಗಿತ್ತು. ಮಳಲಿ ಮಸೀದಿ ಜಾಗದಲ್ಲಿ ಕೋರ್ಟ್ ಕಮಿಷನರ್ ಮೂಲಕ ಸರ್ವೆ ನಡೆಸಲು ಆದೇಶ ನೀಡಬೇಕೆಂದು ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿತ್ತು. ಈಗ ಸಿವಿಲ್ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಮಸೀದಿ ಆಡಳಿತ ಮಂಡಳಿ ಅರ್ಜಿ ವಜಾ ಮಾಡಿದೆ.