ಲಂಡನ್: ಸ್ಟೀಫಾನಿಯಾ ಬ್ಯೂಡಾನ್.. ಬ್ರಟಿನ್ನಿನ ಆನ್‘ಲೈನ್‘ನಲ್ಲಿ ಭಾರೀ ಸುದ್ದಿ ಮಾಡಿದ್ದ ಯುವತಿ. ತನ್ನ ಆಕರ್ಷಕ ದೇಹ ಸೌಂದರ್ಯದ ಫೋಟೋಗಳನ್ನ ತೆಗೆದು ಆನ್‘ಲೈನ್‘ಗೆ ಹಾಕಿದ್ದ ಈಕೆ ಲಕ್ಷಾಂತರ ಜನರ ಅಭಿಮಾನ ಗಿಟ್ಟಿಸಿದ್ದಳು. ಈಕೆಯ ಬಿಕಿನಿ ಫೋಟೋ ನೋಡಿ ಅದೆಷ್ಟೋ ಮಂದಿ ಈಕೆಯ ಸೌಂದರ್ಯಕ್ಕೆ ಹುಚ್ಚರಾಗಿದ್ದರು. ಆದರೆ, ಈ ಭಯಾನಕ ಬ್ಯೂಟಿಯ ಹೆಸರು 40ಕ್ಕೂ ಹೆಚ್ಚು ಕಳ್ಳತನ ಸೇರಿ 100ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಕೇಳಿಬಂದಿದೆ. ಈ ಮಧ್ಯೆ, ಕಳ್ಳತನ, ಅಕ್ರಮವಾಗಿ ಗನ್ ಬಳಕೆ ಸೇರಿ 30 ಪ್ರಕರಣಗಳಲ್ಲಿ ಈಕೆಯ ವಿರುದ್ಧ ಆರೋಪ ಸಾಬೀತಾಗಿದ್ದು, ಡಿಸೆಂಬರ್ 9ರಂದು ಈಕೆಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಇದೀಗ ಈ ಬೆಡಗಿ ತನ್ನ ತಪ್ಪುಗಳಿಗೆ ಕ್ಷಮೆ ಕೇಳುತ್ತಿದ್ದಾಳೆ. ಆದರೆ, ಕಾಲ ಮಿಂಚಿಹೋಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟೋ ಮಂದಿ ಈಕೆಯನ್ನ ವಿಶ್ವದ ಅತ್ಯಂತ ಸೆಕ್ಸಿ ಕ್ರಿಮಿನಲ್ ಎಂದು ಈಗಾಗಲೇ ಘೋಷಿಸಿದ್ಧಾರೆ.

stefania

By suddi9

Leave a Reply

Your email address will not be published. Required fields are marked *