ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯಲ್ಲಿ ಸ್ಕೂಲ್ ಬಸ್ ವ್ಯವಸ್ಥೆಗೆ ಚಾಲನೆ
ಅಡ್ಯನಡ್ಕ: ಜನತಾ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ನವೆಂಬರ್ 2ರಿಂದ ಸ್ಕೂಲ್ ಬಸ್ ವ್ಯವಸ್ಥೆ ಆರಂಭವಾಗಿದೆ. ಅಡ್ಯನಡ್ಕ ಎಜುಕೇಷನಲ್ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗೋವಿಂದ ಪ್ರಕಾಶ್ ಸಾಯ ಹಾಗೂ ಸಂಸ್ಥೆಯ ಸಂಚಾಲಕರಾದ ಶ್ರೀಮತಿ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ಹಸಿರು ನಿಶಾನೆ ತೋರುವ ಮೂಲಕ ಸ್ಕೂಲ್ ಬಸ್ ವ್ಯವಸ್ಥೆಗೆ ಚಾಲನೆ ನೀಡಿದರು.

ಅಡ್ಯನಡ್ಕ ಎಜುಕೇಷನಲ್ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗೋವಿಂದ ಪ್ರಕಾಶ್ ಸಾಯ ಅವರು ಮಾತನಾಡಿ, ಇಂದು ನಮ್ಮ ವಿದ್ಯಾಸಂಸ್ಥೆಗೆ ಆಗಮಿಸುವ ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳ ಕನಸು ನನಸಾಗಿದೆ ಎಂದರಲ್ಲದೆ, ಸ್ಕೂಲ್ ಬಸ್ ವ್ಯವಸ್ಥೆಗೆ ಕಾರಣರಾದ ಶ್ರೀ ಮುಳಿಯ ರಾಮ ಪೂಜಾರಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಶ್ರೀಮತಿ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ಮಾತನಾಡಿ, ಸ್ಕೂಲ್ ಬಸ್ ವ್ಯವಸ್ಥೆಯ ಮೂಲಕ ಹೆಚ್ಚಿನ ವಿದ್ಯಾರ್ಥಿಗಳು ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗೆ ಬರುವಂತಾಗಲಿ ಎಂದು ಆಶಿಸಿದರು. ಬಸ್ ವ್ಯವಸ್ಥೆಗೆ ಮನಃಪೂರ್ವಕವಾಗಿ ಶ್ರಮಿಸಿದ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಡಿ. ಶ್ರೀನಿವಾಸ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಕೆ. ವಸಂತ ಗೌಡ ಹಾಗೂ ಪೂರ್ಣ ಸಹಕಾರ ನೀಡುತ್ತಿರುವ ಎಲ್ಲಾ ಮುಖ್ಯೋಪಾಧ್ಯಾಯರು, ಬೋಧಕ ವರ್ಗ ಮತ್ತು ಹೆತ್ತವರನ್ನು ಸ್ಮರಿಸಿದರು.
ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯಸ್ಥರು, ಉಪನ್ಯಾಸಕರು, ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಡ್ಯನಡ್ಕ ಜನತಾ ಕನ್ನಡ ಮಾಧ್ಯಮ ಶಾಲೆ, ಜನತಾ ಆಂಗ್ಲ ಮಾಧ್ಯಮ ಶಾಲೆ, ಜನತಾ ಪ್ರೌಢಶಾಲೆ ಹಾಗೂ ಜನತಾ ಪದವಿಪೂರ್ವ
ಕಾಲೇಜು ಇವು ಅಡ್ಯನಡ್ಕದಲ್ಲಿ ನೂರಾರು ವಿದ್ಯಾರ್ಥಿಗಳ ಭವಿಷ್ಯದ ಕನಸನ್ನು ನನಸಾಗಿಸುತ್ತಿರುವ ವಿದ್ಯಾಸಂಸ್ಥೆಗಳು. ಗ್ರಾಮೀಣ
ಭಾಗದಿಂದ ಹಾಗೂ ದೂರದೂರದ ಪ್ರದೇಶಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ
ವಿದ್ಯಾರ್ಥಿಗಳಿಗಾಗಿ ಸ್ಕೂಲ್ ಬಸ್ ಆರಂಭವಾಗುವುದರೊಂದಿಗೆ ಮುಚ್ಚಿರಪದವು, ಪೆರುವಾಯಿ, ಬಿಲ್ಲಂಪದವು, ಮೂಡಂಬೈಲು,
ಕೊಲ್ಲಪದವು, ಸರವು – ಹೀಗೆ ಮೂಲೆಮೂಲೆಯ ಹಳ್ಳಿಗಳಿಂದ ಬರುವ ಕೇಪು, ಪೆರುವಾಯಿ, ಪುಣಚ ಗ್ರಾಮಗಳ ಅನೇಕ ವಿದ್ಯಾರ್ಥಿಗಳಿಗೆ
ಹೆಚ್ಚಿನ ಪ್ರಯೋಜನವಾದಂತಾಗಿದೆ.