ಪಾಂಡವರಕಲ್ಲು: ಉಚಿತ ಮನೆ ನಿರ್ಮಿಸಿ ಹಸ್ತಾಂತರ
ಬಂಟ್ವಾಳ: ತಾಲ್ಲೂಕಿನ ಪಾಂಡವರಕಲ್ಲು ಎಂಬಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ವತಿಯಿಂದ ಅರ್ಹ ಬಡ ಕುಟುಂಬಕ್ಕೆ ಉಚಿತ ಮನೆ ಹಸ್ತಾಂತರ ಕಾರ್ಯಕ್ರಮ ಅ.14ರಂದು ಶುಕ್ರವಾರ ನಡೆಯಿತು.
ಇಲ್ಲಿನ ಪಾಂಡವರಕಲ್ಲು ಎಂಬಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ವತಿಯಿಂದ ಅರ್ಹ ಬಡ ಕುಟುಂಬಕ್ಕೆ ಉಚಿತ ಮನೆ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಎಸ್ ಡಿ ಪಿ ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ ನೂತನ ಮನೆಯ ಕೀಲಿ ಹಸ್ತಾಂತರಿಸಿದರು. ಬದ್ರಿಯಾ ಜುಮ್ಮಾ ಮಸೀದಿ ಖತೀಬ ರಿಯಾಝ್ ಫೈಝಿ ದುವಾ ನೆರವೇರಿಸಿದರು.
ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಮೂನಿಶ್ ಆಲಿ, ಮಸೀದಿ ಅಧ್ಯಕ್ಷ ಅತಾವುಲ್ಲಾ ಪಾಂಡವರಕಲ್ಲು, ಜಮಾತೆ ಉಪಾಧ್ಯಕ್ಷ ಹಕೀಂ ಕುದುರು, ಪ್ರಧಾನ ಕಾರ್ಯದರ್ಶಿ ಕೆ.ಪಿ. ಉಮರ್ ಮುಸ್ಲಿಯಾರ್, ಬಡಗ ಕಜೆಕಾರು ಗ್ರಾಮ ಸಮಿತಿ ಅಧ್ಯಕ್ಷ ಸಾದಿಕ್ ಕೆ.ಪಿ., ಜಿಲ್ಲಾ ಸಮಿತಿ ಸದಸ್ಯ ಯೂಸುಫ್ ಆಲಡ್ಕ, ಬೆಳ್ತಂಗಡಿ ಕ್ಷೇತ್ರ ಉಪಾಧ್ಯಕ್ಷ ಹನೀಫ್ ಪುಂಜಾಲಕಟ್ಟೆ, ಕ್ಷೇತ್ರ ಸಮಿತಿ ಸದಸ್ಯರಾದ ಇಮ್ರಾನ್ ಪಾಂಡವರಕಲ್ಲು, ಪುರಸಭಾ ಸಮಿತಿ ಕಾರ್ಯದರ್ಶಿ ಇಕ್ಬಾಲ್ ಮೈನ್ಸ್, ಜಮಾತೆ ಮಾಜಿ ಅಧ್ಯಕ್ಷ ಪುತ್ತುಮೋನು ಕುದುರು ಮತ್ತಿತರರು ಇದ್ದರು.