ಅ16ರಂದು ಗೋ ರಥ ಯಾತ್ರೆ
ಕೊಡ್ಮಾಣ್ : ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನಮ್ ಟ್ರಸ್ಟ್ (ರಿ) ಮತ್ತು ಗೋ ಸೇವಾ ಗತಿವಿಧಿ, ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ ಗೋ ನವರಾತ್ರಿ ಉತ್ಸವದ ಸಂದೇಶ ಹಾಗೂ ಉದ್ದೇಶವನ್ನು ಸಾರುವ “ಗೋ ರಥ ಯಾತ್ರೆ”ಗೆ ಅ.16ರ ಭಾನುವಾರ ಬೆಳಿಗ್ಗೆ 9ಗಂಟೆಗೆ ರಾಧಾ ಸುರಭಿ ಗೋ ಮಂದಿರ ಗೋವಿನ ತೋಟದಲ್ಲಿ ಚಾಲನೆ ದೊರೆಯಲಿದೆ.
ಈ ಯಾತ್ರೆಗೆ ಶ್ರೀ ಲಕ್ಷ್ಮೀ ನಾರಾಯಣ ಕ್ಷೇತ್ರ ಕರಿಂಜೆ, ಮೂಡಬಿದ್ರೆಯ ಪರಮಪೂಜ್ಯ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿಯವರ ಆಶೀರ್ವಚನದೊಂದಿಗೆ, ಎಂ.ಪಿ.ಸಿ ಮಂಗಳೂರು ಇದರ ಎಂ.ಪಿ.ದಿನೇಶ್ ಹಾಗೂ ಮಂಗಳೂರಿನ ನ್ಯಾಯವಾದಿ ಪಿ.ಶಿವಶಂಕರ ರಾವ್ ಗೋ ರಥ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಈ ಗೋ ರಥ ಯಾತ್ರೆ ಸಾಗಿ ಬರುವ ದಾರಿಯಲ್ಲಿ ಗೋ ಭಕ್ತರು ರಥವನ್ನು ಸ್ವಾಗತಿಸಿ, ಗೋ ಪೂಜೆ ಸಲ್ಲಿಸಿ,ಗೋ ನವರಾತ್ರಿ ಉತ್ಸವಕ್ಕೆ ಸಹಕರಿಸಬೇಕಾಗಿ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.