ಹಿಜಾಬ್ ತೀರ್ಪು: ಇಬ್ಬರು ನ್ಯಾಯಮೂರ್ತಿಗಳ ವಿಭಿನ್ನ ಅಭಿಪ್ರಾಯ
ಮಂಗಳೂರು: ಕರಾವಳಿ ಭುಗಿಲೆದ್ದ ಹಿಜಾಬ್ ವಿವಾದಕ್ಕೆ ಇಂದು ಅಂತಿಮ ಚುಕ್ಕಿ ಬೀಳುತ್ತೆ ಅನ್ನುವಷ್ಟರಲ್ಲಿ ಮತ್ತೊಂದು ಹಂತದ ತೀರ್ಪುಗೆ ಕಾಯ್ದು ನೋಡಬೇಕಾದ ಅನಿವಾರ್ಯತೆ ಇದೆ.
ಇಂದು ಸುಪ್ರೀಂ ಕೋರ್ಟ್ ಹಾಲ್ ನಂಬರ್ 6 ರಲ್ಲಿ ಹಿಜಾಬ್ ತೀರ್ಪಿಗೆ ಸಂಬಂಧಿಸಿ ನ್ಯಾಯಮೂರ್ತಿಗಳು ವಿಭಿನ್ನ ಆದೇಶವನ್ನು ಹೊರಡಿಸಿದ್ದಾರೆ.
ಐತಿಹಾಸಿಕ ತೀರ್ಪು ಪ್ರಕಟಕ್ಕೆ ವಕೀಲರು ಕಿಕ್ಕಿರಿದು ತುಂಬಿದ್ದರು.
• ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದ ನ್ಯಾಯಮೂರ್ತಿ ಹೇಮಂತ್ ಗುಪ್ತಾ.
• ನ್ಯಾಯಮೂರ್ತಿ ಧುಲಿಯಾ ಸರ್ಕಾರಿ ಆದೇಶವನ್ನು ರದ್ದುಗೊಳಿಸಿದೆ.
• ಹಿಜಾಬ್ ಧರಿಸಿಕೊಳ್ಳಬೇಕೋ, ಬೇಡವೋ ಇದು ವಿದ್ಯಾರ್ಥಿನಿಯರ ಆಯ್ಕೆ ಪ್ರಶ್ನೆ – ಸುಧಾಂಶು ಧುಲಿಯಾ
• ವಿಭಿನ್ನ ತೀರ್ಪಿನಿಂದ ವಿಸ್ಕೃತ ಪೀಠಕ್ಕೆ ವರ್ಗಾವಣೆ • ಸಿಜೆಐ ಪೀಠಕ್ಕೆ ಪೀಠಕ್ಕೆ ಅರ್ಜಿ ವರ್ಗಾವಣೆ.
• ಹೈಕೋರ್ಟ್ ಆದೇಶ ಯಥಾಸ್ಥಿತಿ ಮುಂದುವರಿಕೆ • ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದ ನ್ಯಾಯಮೂರ್ತಿ
• ಬಹುಮತದ ತೀರ್ಪಿಗೆ ಮತ್ತೆ ಕಾಯಬೇಕು
• ವಸ್ತ್ರಕ್ಕಿಂತ ಹೆಣ್ಣು ಮಕ್ಕಳ ಶಿಕ್ಷಣ ಮುಖ್ಯ
ನ್ಯಾ. ಹೇಮಂತ್ ಗುಪ್ತಾ ಅವರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಆದರೆ ನ್ಯಾ.ಸುಧಾಂಶ ಅವರು ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ವಜಾಗೊಳಿಸಿದೆ. ಇಬ್ಬರೂ
ನ್ಯಾಯಮೂರ್ತಿಗಳು ವಿಭಿನ್ನ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಜೆಐ ವಿಸ್ತ್ರತ ಪೀಠಕ್ಕೆ ವರ್ಗಾವಣೆಯನ್ನು ಮಾಡಿ ಆದೇಶ ಹೊರಡಿಸಿದೆ.
ಸಿಜೆಐ ಪೀಠದ ಅಂತಿಮ ತೀರ್ಪು ಬರುವವರೆಗೂ ಕೂಡ ಶಾಲೆ, ಕಾಲೇಜುಗಳಲ್ಲಿ ಯಥಾಸ್ಥಿತಿಯನ್ನು ಕಾಪಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಸದ್ಯ ರಾಜ್ಯದಲ್ಲಿನ ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ. ಹೀಗಾಗಿ ರಾಜ್ಯ ಸರಕಾರದ ಆದೇಶ ಎಂದಿನಂತೆಯೇ ಮುಂದುವರಿಯಲಿದೆ.
ಅಲ್ಲದೇ ಹೈಕೋರ್ಟ್ ಆದೇಶ ಮುಂದುವರಿಕೆ ಆಗಲಿದೆ. ಇದೀಗ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳ ಅಂಗಳದಲ್ಲಿದ್ದು ಐದು ಅಥವಾ ಏಳು ಮಂದಿ ನ್ಯಾಯಾಧೀಶರ ಪೀಠವನ್ನು ರಚಿಸುವ ಸಾಧ್ಯತೆಯಿದೆ. ಅಲ್ಲಿಯ ವರೆಗೂ ಯಥಾಸ್ಥಿತಿ ಮುಂದುವರಿಕೆಯಾಗಲಿದೆ.