ಪ್ರಭಾಕರ ಕಾರಂತ ನಿಧನ
ಬಂಟ್ವಾಳ: ಶಂಭೂರು ಗ್ರಾಮದ ಕೂಡಿಬೆಟ್ಟು ಗುತ್ತು ನಿವಾಸಿ, ಪ್ರಗತಿಪರ ಕೃಷಿಕ ಪ್ರಭಾಕರ ಕಾರಂತ (೭೦) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಬುಧವಾರ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಕಳೆದ ೪೦ ವರ್ಷಗಳಿಂದ ಶಂಭೂರು ಷಣ್ಮುಖ ಸುಬ್ರಹ್ಮಣ್ಯ ದೇವಳದ ಟ್ರಸ್ಟಿಯಾಗಿ, ಗಾಯತ್ರಿ ಕ್ರೆಡಿಟ್ ಸೊಸೈಟಿ ನಿರ್ದೇಶಕರಾಗಿದ್ದರು.