ಯಕ್ಷಕಲಾ ಸಂಘದಲ್ಲಿ ನೂತನ ವಿದ್ಯಾರ್ಥಿಗಳ ಮುಕ್ತ ಯಕ್ಷಗಾನ ನಾಟ್ಯ ತರಬೇತಿ ಆರಂಭ
ಬೆಳ್ಳೂರು: ಯಕ್ಷಕಲಾ ಸಂಘ ವರಕೋಡಿ ಬಡಗಬೆಳ್ಳೂರು ಇದರ ಆಶ್ರಯದಲ್ಲಿ ಅ.09ರಂದು ಭಾನುವಾರ ನೂತನ ವಿದ್ಯಾರ್ಥಿಗಳ ಉಚಿತ ಯಕ್ಷಗಾನ ನಾಟ್ಯ ತರಬೇತಿ ತರಗತಿ ಆರಂಭವಾಯಿತು.

ಗುರುಗಳಾದ ದೇವದಾಸ್ ಅರ್ಕುಳ, ಸಂಘದ ಗೌರವ ಅಧ್ಯಕ್ಷ ಚಂದ್ರಶೇಖರ ಅಜೀಲ ಮಕ್ಕಳ ಮೇಳದ ಸಂಚಾಲಕ ಪ್ರವೀಣ್ ವರಕೋಡಿ ಸಂಘದ ಅಧ್ಯಕ್ಷ ಕೇಶವ ನಾಳಿಮಾರ್ ಹಾಗೂ ಉಪಾಧ್ಯಕ್ಷ ಕಾರ್ಯದರ್ಶಿ ಕೋಶಾಧಿಕಾರಿ ಕ್ರೀಡಾ ಕಾರ್ಯದರ್ಶಿ ಮತ್ತು ಸರ್ವ ಸದಸ್ಯರು ಹಾಗೂ ಮಕ್ಕಳ ಪೋಷಕರು ಸಂಘದಲ್ಲಿ ಈ ಮುಂಚೆ ಯಕ್ಷಗಾನ ನಾಟ್ಯ ತರಬೇತಿ ಪಡೆದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ದೇವದಾಸ್ ಅರ್ಕುಳ ಇವರು ಮಾತಾಡಿ ಮಕ್ಕಳು ಸಮಯ ಪ್ರಜ್ಞೆ ಮತ್ತು ಶಿಸ್ತು ಬೆಳೆಸಿಕೊಳ್ಳಲು ಕರೆನೀಡಿದರು ಅಜಿಲರು ಪ್ರಥಮ ಪೂಜಿತ ಗಣಪತಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿ ಮಕ್ಕಳನ್ನು ಆಶಿರ್ವಾದಿಸಿ ಹಿತನುಡಿ ನೀಡಿದರು ಬಳಿಕ ಸುಮಾರು 42 ಮಂದಿ ವಿದ್ಯಾರ್ಥಿಗಳು ಯಕ್ಷಕಲಾ ಸಂಘದ ಯಕ್ಷಧಾಮದಲ್ಲಿ ಯಕ್ಷಗಾನದ ಪ್ರಥಮ ಹೆಜ್ಜೆಯನ್ನಿಟ್ಟರು. ಸಂಘದ ಸದಸ್ಯ ದಿನೇಶ್ ವರಕೋಡಿ ಸ್ವಾಗತಿಸಿ ವಂದಿಸಿದರು