ಕೈಕಂಬ: ಮಂಗಳೂರು ತಾಲೂಕಿನ ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ೧೧ ಕಡೆಯಲ್ಲಿ ಒಟ್ಟು ಒಂದು ಕೋಟಿ ಆರು ಲಕ್ಷ ರೂ(೧.೦೬ ಕೋಟಿ ರೂ) ಅನುದಾನದ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು.

ಮೂಡುಶೆಡ್ಡೆಯ ಮಹಾದೇವಿ ಮಂದಿರ ರಸ್ತೆ(೨೫ ಲ. ರೂ), ಜಾರಗುತ್ತು ರಸ್ತೆ(೧೦ ಲ. ರೂ), ಅರಂತೋಟ(೧೦ ಲ. ರೂ), ಚೌಟರ ಮನೆ ರಸ್ತೆ(೧೦ ಲ. ರೂ), ಶುಭೋದಯ ಶಾಲೆ ರಸ್ತೆ(೧೦ ಲ. ರೂ), ನಿಸರ್ಗಧಾಮ ರಸ್ತೆ(೧೦.೫೦ ಲ. ರೂ), ಎದುರುಪದವು ರಸ್ತೆ(೧೦ ಲ. ರೂ), ನಿರಂಜನ ಶೆಟ್ಟಿ ರಸ್ತೆ(೫ ಲ. ರೂ), ಪಡುಶೆಡ್ಡೆ ಶ್ರೀ ಕರ‍್ದಬ್ಬು ದೈವಸ್ಥಾನ ರಸ್ತೆ(೫.೫೦ ಲ. ರೂ), ಶ್ರೀ ದೇವಿ ಭಜನಾ ಮಂದಿರ ರಸ್ತೆ(೫ ಲ. ರೂ) ಮತ್ತು ಶಾಲೆ ಪದವು ರಸ್ತೆ(೫. ಲ. ರೂ) ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ.

ಮೂಡುಶೆಡ್ಡೆ ಪಂಚಾಯತ್ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ಅನಿಲ್ ಕುಮಾರ್, ಪಂಚಾಯತ್ ಸದಸ್ಯರಾದ ಚಂದ್ರಶೇಖರ್ ಸಂಕಲಾಜೆ, ರಿತೇಶ್, ವೇದಾವತಿ, ಬಬಿತಾ, ಚಂದ್ರಿಕಾ, ಸುನಿಲ್, ನಳಿನಿ, ಕಿರಣ್ ಶೆಟ್ಟಿ, ಸುಕೇಶ್ ಕೊಟ್ಟಾರಿ, ತಾಪಂ ಮಾಜಿ ಅಧ್ಯಕ್ಷ ಹರೀಶ್ ಕುಮಾರ್, ಶಕ್ತಿ ಕೇಂದ್ರದ ಪ್ರಮುಖರಾದ ಹರಿಪ್ರಸಾದ್ ಶೆಟ್ಟಿ ಮತ್ತು ಉಮೇಶ್ ಜೆ, ತಾಪಂ ಮಾಜಿ ಸದಸ್ಯೆ ಕವಿತಾ ಡಿ, ಬಿಜೆಪಿ ಹಿರಿಯ ಮುಖಂಡ ರಮಾನಾಥ ಅತ್ತರ್(ಚಿತ್ತಣ್ಣ), ಜಯರಾಮ ಕೊಟ್ಟಾರಿ, ಪೆರ್ಮುದೆ ಶಕ್ತಿ ಕೇಂದ್ರ ಕಾರ್ಯದರ್ಶಿ ಗಜೇಂದ್ರ, ವಕೀಲ ಉಮೇಶ್ ಶೆಟ್ಟಿ ಹೊಸಲಕ್ಕೆ, ಗುತ್ತಿಗೆದಾರ ಸುನಿಲ್ ಹಾಗೂ ಪಕ್ಷ ಕಾರ್ಯಕರ್ತರು, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.



