ಪೊಳಲಿ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ
ಪೊಳಲಿ: ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆ, ಸರಕಾರಿ ಪದವಿ ಪೂರ್ವ ಕಾಲೇಜು, ಬೆಂಜನಪದವು ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಅ12ರಂದು ಬುಧವಾರ ನಡೆಯಿತು.
ಕರಿಯಂಗಳ ಗ್ರಾ. ಪಂ.ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಅವರು ಅಧ್ಯಕ್ಷತೆ ವಹಿಸಿದರು. ಪ್ರಾಂಶುಪಾಲರು ಸ.ಪ.ಪೂ.ಕಾ.ಬೆಂಜನಪದವು ಶಿಬಿರದ ನಿರ್ದೇಶಕಿ ಕವಿತಾ ಉಪಸ್ಥಿತಿಯಲ್ಲಿ , ಮುಖ್ಯ ಅತಿಥಿಗಳಾಗಿ ಸರಕಾರಿ ಪ್ರೌಢಶಾಲೆ, ಪೊಳಲಿ ಶಾ.ಅ. ಮತ್ತು ಮೆ.ಉ. ಸಮಿತಿ, ಅಧ್ಯಕ್ಷ ವೆಂಕಟೇಶ್ ನಾವಡ, ಜ್ಞಾನೇಶ್ ಎಂ.ಪಿ ಬಿ ಇ ಒ, ಅಮ್ಮುಂಜೆ ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ತಂತ್ರಿ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಆಚಾರ್, ಲಯನ್ಸ್ ಕ್ಲಬ್ ಸದಸ್ಯ ಉಮೇಶ್ ಸಾಲ್ಯಾನ್ ಬೆಂಜನಪದವು, ಕರಿಯಂಗಳ ಮಾಜಿ ತಾ.ಪಂ. ಸದಸ್ಯ ಯಶವಂತ ಪೊಳಲಿ, ರಾಧಾಕೃಷ್ಣ ಭಟ್ ಮುಖ್ಯೋಪಧ್ಯಾಯರು ಸರಕಾರಿ ಪ್ರೌಢಶಾಲೆ ಪೊಳಲಿ, ಅನಂತ ಪದ್ಮನಾಭ ಪ್ರಭಾರ ಉಪ ಪ್ರಾಂಶುಪಾಲರು, ಸರಕಾರಿ ಪ್ರೌಢಶಾಲೆ, ಬೆಂಜನಪದವು, ಬಾಲಕೃಷ್ಣ ಎನ್.ವಿ. ಇತಿಹಾಸ ಉಪನ್ಯಾಸಕರು, ಶಿಬಿರದ ಅಧಿಕಾರಿ, ಸುಜಾತ ಕುಮಾರಿ ಶಿಕ್ಷಣ ಸಂಯೋಜಕಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಮೇದಪ್ಪ ಅವರು ನಿರೂಪಿಸಿದರು, ಡಾ.ಸಂಧ್ಯಾರಾಣಿ ಸ್ವಾಗತಿಸಿದರು, ಬಾಲಕೃಷ್ಣ ಎನ್ ವಿ ಶಿಬಿರದ ಕಾರ್ಯಕ್ರಮ ಅಧಿಕಾರಿ ಧನ್ಯವಾದ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆ ಪೊಳಲಿಯ ಮುಖ್ಯ ಶಿಕ್ಷಕರಾದ ಶ್ರೀ ರಾಧಾಕೃಷ್ಣ ಭಟ್ ಇವರನ್ನು ಸನ್ಮಾನಿಸಲಾಯಿತು.