ಆಸ್ಟ್ರೇಲಿಯಾದಲ್ಲಿ ರಾಮಾಯಣ ನೃತ್ಯರೂಪಕ ಪ್ರದರ್ಶನ ಪವಿತ್ರಾ ಆರ್ಟ್ ವ್ಹಿಜ್ಯುಅಲ್ ಇನ್‌ಸ್ಟಿಟ್ಯೂಟ್ ಡೊಂಬಿವಿಲಿ ತಂಡ ಆಯ್ಕೆ
ಮುಂಬಯಿ: ಡೊಂಬಿವಿಲಿ ಇಲ್ಲಿನ ಪವಿತ್ರಾ ಆರ್ಟ್ ವ್ಹಿಜ್ಯುಅಲ್ ಇನ್‌ಸ್ಟಿಟ್ಯೂಟ್ ತಂಡವು ಭಾರತ ಸರ್ಕಾರದ ಸಾಂಸ್ಕೃತಿಕ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಆಸ್ಟ್ರೇಲಿಯಾ ಅಲ್ಲಿನ ಭಾರತದ ರಾಯಭಾರಿ ಕಚೇರಿ ಇವುಗಳ ಸಹಯೋಗ ಹಾಗೂ ಭಾರತ ರಾಷ್ಟ್ರದ ಸ್ವಾತಂತ್ರ‍್ಯೋತ್ಸವ ಅಮೃತಮಹೋತ್ಸವದ ಭಾಗವಾಗಿ ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಶನ್‌ಸ್ (ಐಸಿಸಿಆರ್) ಇದರ ಪ್ರಾಯೋಜಕತ್ವದೊಂದಿಗೆ ಆಸ್ಟ್ರೇಲಿಯಾದಲ್ಲಿ ರಾಮಾಯಣ ನೃತ್ಯರೂಪಕ ಪ್ರಸ್ತುತಪಡಿಸಲು ಆಯ್ಕೆಗೊಂಡಿದೆ.
೨೦೨೨ರ ಜನವರಿ ೨೬ರಂದು ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾರತದ ಪ್ರಧಾನ ಮಂತ್ರಿ ಮತ್ತು ಅಧ್ಯಕ್ಷರ ಮುಂದೆ ರಾಜ್‌ಪಥ್‌ನಲ್ಲಿ ಪ್ರದರ್ಶನ ನೀಡಿದ ಈ ತಂಡವು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವಾಗಿಸಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯೆಯಾಗಿದೆ. ಪವಿತ್ರಾ ಇನ್‌ಸ್ಟಿಟ್ಯೂಟ್‌ನ ಸುಮಾರು ೭ ಹಿರಿಯ ವಿದ್ಯಾರ್ಥಿಗಳೊಂದಿಗೆ ಆಸ್ಟ್ರೇಲಿಯಾದ ೧೨ ದಿನಗಳ ಪ್ರವಾಸದಲ್ಲಿ ಅಲ್ಲಿನ ಮೂರು ಪ್ರದೇಶಗಳಾದ ಕ್ಯಾನ್ಬೆರಾ, ಮೆಲ್ಬೋರ್ನ್ ಮತ್ತು ಸಿಡ್ನಿ ಇಲ್ಲಿ ಪ್ರದರ್ಶನ ನೀಡಲಿದ್ದು ಜೊತೆಗೆ ಕಾರ್ಯಾಗಾರಗಳನ್ನು ನಡೆಸಿ ತಂಡವು ಅಕ್ಟೋಬರ್ ೧೭ ರಂದು ಭಾರತಕ್ಕೆ ಹಿಂತಿರುಗಲಿದೆ. ತಂಡಲ್ಲಿ ಕಲಾವಿದರಾದ ಪವಿತ್ರಾ ಭಟ್, ಆಭಾ, ಜಾನ್ಹವಿ ವಿ, ಜಿದ್ನ್ಯಾಸ, ಶಾಲಿನ್, ಗರಿಮಾ, ಮನಸ್ವಿ ಮತ್ತು ಜಾನ್ಹವಿ ಕೆ. ಭಾಗವಹಿಸಲಿದ್ದಾರೆ.
ಪವಿತ್ರಾ ಆರ್ಟ್ ವಿಷುಯಲ್ ಇನ್‌ಸ್ಟಿಟ್ಯೂಟ್ ಪವಿತ್ರ ಭಟ್ ಮತ್ತು ಅಪರ್ಣಾ ಶಾಸ್ತ್ರಿ ಭಟ್ ಅವರು ಡೊಂಬಿವಿಲಿ ಇಲ್ಲಿ ಭರತನಾಟ್ಯ ನೃತ್ಯ ತರಗತಿ ನಡೆಸುತ್ತಿದ್ದಾರೆೆ. ಸದ್ಯ ಸುಮಾರು ೨೫೦ ವಿದ್ಯಾರ್ಥಿಗಳನ್ನು ಹೊಂದಿರುವ ಈ ಸಂಸ್ಥೆಯು ಈ ವರ್ಷ ೨೦ನೇ ವರ್ಷದ ಸಂಭ್ರಮದಲ್ಲಿದೆ. ವಿದ್ಯಾರ್ಥಿಗಳಿಗೆ ಭರತನಾಟ್ಯವನ್ನು ಅಭ್ಯಾಸ ಮಾಡುವಲ್ಲಿ ತನ್ನದೇ ಪ್ರತಿಷ್ಠೆಯನ್ನು ರೂಪಿಸಿಕೊಂಡಿದೆ. ಅನೇಕ ವಿದ್ಯಾರ್ಥಿಗಳು ತಮ್ಮ ರಂಗಪ್ರವೇಶವನ್ನು ಪೂರ್ಣಗೊಳಿಸಿದ್ದು ಈ ತಂಡವು ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾಗಿ ಪ್ರತಿಷ್ಠಿತ ಗೌರವಗಳಿಗೆ ಭಾಜನವಾಗಿದೆ. ೯ ವಿದ್ಯಾರ್ಥಿಗಳು ಭರತನಾಟ್ಯಕ್ಕಾಗಿ ಭಾರತ ಸರ್ಕಾರದ ಜೂನಿಯರ್ ವಿದ್ಯಾಥಿüðವೇತನವನ್ನೂ ಪಡೆದಿದ್ದಾರೆ.