ವಿಜಯದಶಮಿಯಂದು ವಿವೇಕಾ ಚೈತನ್ಯಾ ಸ್ವಾಮಿಯಿಂದ ಕುಮಾರಿ ಪೂಜೆ
ಕೈಕಂಬ: ಪೊಳಲಿ ರಾಮಕೃಷ್ಣ ತಪೊವನದಲ್ಲಿ ವಿವೇಕ ಚೈತನ್ಯಾನಂದ ಸ್ವಾಮಿಗಳಿಂದ ಕುಮಾರಿ ಪೂಜೆಯು ಅ.05ರಂದು ನೆರವೇರಿತು. ಮಹಾಲಯ ಅಮವಾಸ್ಯೆಯ ಬೆಳಗ್ಗೆ ಆಶ್ರಮದಿಂದ ಮಡಿಯುಟ್ಟ ಮಹಿಳೆಯರು ಹಾಗೂ ಆಶ್ರಮದ ಮಕ್ಕಳು ಭಜನೆಯಲ್ಲಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ರಾಜರಾಜೇಶ್ವರೀ ಹಾಗೂ ಭದ್ರಕಾಳಿಯ ಭಾವಚಿತ್ರದ ಜತೆಗೆ ದೀಪ ಹಿಡಿದುಕೊಂಡು ದೇವರ ನಾಮಸ್ಮರಣೆ ಮಾಡಲಾಗುತ್ತದೆ.

ಪೊಳಲಿಯ ರಾಜರಸ್ತೆಯಲ್ಲಿ ಮುಖ್ಯ ದ್ವಾರದವರೆಗೆ ಸಾಗಿ ಅಲ್ಲಿಂದ ಹಿಂದುರುಗಿ ದೇವಸ್ಥಾನಕ್ಕೆ ಸುತ್ತು ಬಂದು ದೇವರ ದರ್ಶನ ಪಡೆದು ಆಶ್ರಮಕ್ಕೆ ಬಂದು ಸ್ವಾಮೀಜಿ ಅವರು ನವದುರ್ಗೆ ಯರಂತೆ ಕುಮಾರಿಯವರನ್ನು ಅಲಂಕರಿಸಿ ಪೂಜೆ ನೆರವೇರಿಸುತ್ತಾರೆ. ದಿನಕ್ಕೆ ಒರ್ವ ಕುಮಾರಿಯನ್ನು ದೇವಿಯಂತೆ ಅಲಂಕರಿಸಿ ಪೂಜೆ ಮಾಡುತ್ತಾರೆ? 9 ದಿನಗಳಲ್ಲಿ ಪೂಜೆ ನೆರವೇರಿಸಿ. 9 ಕುಮಾರಿಯವರನ್ನು ದೇವಿಯ ಪ್ರತಿಮೆಯಂತೆ ಅಲಂಕರಿಸಿ ನವದುರ್ಗೆಯರ ಪೂಜೆ ನೆರವೇರಿಸುತ್ತಾರೆ. ಪ್ರತಿದಿನ ಮಹಿಳೆಯರಿಂದ ಭಜನೆ ಕಾರ್ಯಕ್ರಮ ನಡೆಯುತ್ತದೆ. ಕುಮಾರಿಯರೆಂದರೆ 5 ವರ್ಷಗಿಂತ ಕೆಳಗಿನ ಸಣ್ಣ ಹೆಣ್ಣುಮಕ್ಕಳನ್ನು ಶಾರದೆಯಅಲಂಕಾರ ಮಾಡಿಸಿ ಅವರಿಗೆ ಪೂಜೆ ನೆರವೇರಿಸುತ್ತಾರೆ.

ಜಗನ್ಮಾತೆಯ ವೈಭವನ್ನು ನವರಾತ್ರಿಯ 9 ದಿನಗಳಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ರಾಮಕೃಷ್ಣತಪೊವನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಕುಮಾರಿ ಪೂಜೆ ನೆರವೇರಿಸಿದ ನವದುರ್ಗೆಯರು
- ಶೈಲಪುತ್ರಿಯಾಗಿ: ಇವಳು ಹಿಮಾಲಯ ಪರ್ವತರಾಜನ ಮಗಳು ದುರ್ಗೆಯ ರೂಪದಲ್ಲಿ ಇವಳು ಮೊದಲನೇಯವಳು ಇವಳು ಬ್ರಹ್ಮ ವಿಷ್ಣು ಮಹೇಶ್ವರ ಶಕ್ತಿಯ ರೂಪ ಒಂದು ಕೈಯಲ್ಲಿ ತ್ರಿಶೂಲ. ಇನ್ನೊಂದು ಕೈಯಲ್ಲಿ ಕಮಲವನ್ನು ಹಿಡಿದು ವೃಷಭವಾಹಿನಿಯಾಗಿದ್ದಾಳೆ.
- ಬ್ರಹ್ಮಚಾರಿಣಿಯಾಗಿ: ಇವಳು ನವರಾತ್ರಿಯ ಎರಡನೇ ದಿವಸದ ಆರಾಧ್ಯ ದೇವತೆ, ಬ್ರಹ್ಮಚಾರಿಣಿ ಎಂದರೆ ತಪವನ್ನು ಆಚರಿಸುವವಳು. ತನ್ನ ಶಕ್ತಿಗಳಿಂದ ಎಲ್ಲರನ್ನೂ ಜಾಗೃತ ಗೊಳಿಸುವಳು. ಇವಳು ಜ್ಞಾನದ ಗಣಿಯಾಗಿರುವಳು. ಅವಳು ಸದಾ ಆನಂದರೂಪಿಣಿ, ಶಾಂತರೂಪಿಣಿ, ಮೋಕ್ಷದಾಯಿಣಿ ಆಗಿರುವಳು.
- ಚಂದ್ರಘಂಟಾ: ನವರಾತ್ರಿಯ 3 ನೇ ಆರಾಧ್ಯ ದೇವತೆಯಾಗಿ ದುರ್ಗೆಯ ರೂಪದಲ್ಲಿ ಚಂದ್ರಘಂಟಾ ಹೆಸರಿನಿಂದ ಬರುವಳು. ತನ್ನ ಹಣೆಯಲ್ಲಿ ಅರ್ಧಚಂದ್ರ ಮತ್ತು ಘಂಟೆಯ ರೂಪದಲ್ಲಿ ಈ ಹೆಸರು. ಇವಳು ಬಂಗಾರದ ವರ್ಣದವಳು. ಹತ್ತು ಕೈಗಳನ್ನು ಮತ್ತು 3 ಕಣ್ಣುಗಳನ್ನು 8 ಕೈಗಳಲ್ಲಿ ಶಸ್ತ್ರಗಳು. ಇನ್ನೊಂದು ಕೈಯಲ್ಲಿ ಮುದ್ರಾಕಾರವನ್ನು ಹೊಂದಿ ಮತ್ತೊಂದು ಕೈಯಲ್ಲಿ ಆಶೀರ್ವಾದವನ್ನು ಹಸ್ತ ಹೊಂದಿರುವಳು. ಇವಳು ಸಿಂಹವಾಹಿನಿಯಾಗಿ, ಶೌರತ್ವ ಮತ್ತು ಶಕ್ತಿ ಅಸುರರನ್ನು ನಾಶ ಮಾಡುವ ಅವತಾರದಲ್ಲಿ ಇರುವಳು.
- ಕೂಷ್ಮಾಂಡ: ನವರಾತ್ರಿಯ ನಾಲ್ಕನೇ ದಿನದ ಆರಾಧ್ಯ ದೇವತೆಯಾಗಿ ದುರ್ಗೆಯು ಕೂಷ್ಮಾಂಡ ದೇವತೆಯಾಗಿ ಬರುವಳು. ಇವಳು 8 ಕೈಗಳನ್ನು ಉಳ್ಳವಳು ಶಸ್ತ್ರಗಳನ್ನು ಮತ್ತು ಮಾಲೆಯನ್ನು ಹೊಂದಿರುವಳು ಇವಳು ವ್ಯಾಘ್ರವಾಹಿಣಿ ಆಗಿರುವಳು. ಸೌರ ಪ್ರಭಾವಳಿಯನ್ನು ಹೊಂದಿರುವವಳು. ಎಂದರೆ ಸಣ್ಣದು, ಊಷ್ಮ ಎಂದರೆ ಬೆಚ್ಚಗಿನ ಅಂಡ ಎಂದರೆ, ತತ್ತಿಯಾಕಾರ, ಇದರರ್ಥವೆಂದರೆ, ವಿಶ್ವವನ್ನು ಸೃಷ್ಠಿಸುವವಳು.
- ಸ್ಕಂದ ಮಾತ: ನವರಾತ್ರಿಯ 5ನೇ ದಿನದಂದು ದುರ್ಗೆಯ ಸ್ಕಂದ ಮಾತೆಯಾಗಿ ಅವತರಿಸುವಳು. ಅಸುರರ ನಾಶಕ್ಕಾಗಿ ಅವತರಿಸಿದ ದೇವತೆ. ಇವಳು ತನ್ನ ಜೊತೆಯಲ್ಲಿ ಸ್ಕಂದನನ್ನು ತನ್ನ ಮಗುವಿನ ರೂಪದಲ್ಲಿ ತರುವಳು. ಇವಳು ಸಿಂಹವಾಹಿನಿಯಾಗಿದ್ದು, ಸ್ಕಂದನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡಿರುವಳು. ಇವಳಿಗೆ ಇವಳಿಗೆ 3ಕಣ್ಣುಗಳು ಮತ್ತು 4 ಕೈಗಳು 2 ಕೈಗಳಲ್ಲಿ ಕಮಲನ್ನು ಹಿಡಿದು. ಇನ್ನೆರಡು ಕೈಗಳಲ್ಲಿ ರಕ್ಷಾಮುದ್ರೆ ಹೊಂದಿರುವಳು.
- ಕಾತ್ಯಾಯಿನಿ: ನವರಾತ್ರಿಯ 6ನೇ ದಿವಸದ ದೇವತೆಯಾಗಿ ಇರುವಳು ಕಠ ಎಂಬ ಖುಷಿಯ ಹೆಸರನ್ನೇ ಇಲ್ಲಿ ಕಾತ್ಯೆ ಎಂದು ಬಳಸಿಕೊಳ್ಳಲಾಗಿದೆ. ಈ ಮುನಿಯು ಕಠೋರ ತಪಸ್ಸನ್ನು ಆಚರಿಸಿ ದೇವತೆಯನ್ನೇ ತನ್ನ ಮಗಳಾಗಿ ಬರಬೇಕೆಂದು ಆಶಯಿಸಿದ್ದರಿಂದ ಈ 6 ನೇ ದಿನದ ದೇವತೆಗೆ ಕಾತ್ಯಾಯನಿ ಎಂಬ ಹೆಸರು ಬಂತು.
- ಕಾಳರಾತ್ರಿ ಯಾಗಿ: ನವರಾತ್ರಿಯ 7ನೇ ದಿನದ ದೇವತೆಯಾಗಿ ಕಾಲರಾತದರಿ ರೂಪದಲ್ಲಿ ದುರ್ಗೆಯು ಬರುವಳು ಹರಡಿದ ಕೂದಲು ಭಯಾನಕ ರೂಪದಲ್ಲಿ ಇರುವಳು. ಇವಳಿಗೆ 3 ಕಣ್ಣುಗಳು ಮತ್ತು ಹೊಳೆಯುವ ಉತ್ರ ರೂಪದಲ್ಲಿ ಇರುವಳು ನೀಲ ವರ್ಣದ ಚರ್ಮ ಹರಡಿದ ಕೂದಲು ಮತ್ತು ನಾಲ್ಕು ಕೈಗಳು ಎರಡು ಕೈಗಳಲ್ಲಿ ಒಂದರಲ್ಲಿ ಖಡ್ಗವನ್ನು ಇನ್ನೊಂದರಲ್ಲಿ ಕೈಯಲ್ಲಿ ದೇವಟಿಗೆಯನ್ನು ಇನ್ನೆರಡು ಕೈಗಳಲ್ಲಿ ರಕ್ಷಾಮುದ್ರೆಯನ್ನು ಹೊಂದಿರುವಳು. ಇವಳು ಕತ್ತಲನ್ನು ಮತ್ತು ಅಜ್ಞಾನವನ್ನು ನಿವಾರಿಸುವಳು.
- ಮಹಾಗೌರಿಯಾಗಿ: ನವರಾತ್ರಿಯ 8ನೇ ದಿವಸದಲ್ಲಿ ದುರ್ಗೆಯು ಮಹಾಗೌರಿಯಾಗಿ ಬರುವಳು. ಅವಳ ಆರಾಧನೆಯಿಂದ ವರ್ತಮಾನ ಮತ್ತು ಭೂತಕಾಲದ ಪಾಪಕರ್ಮಗಳು ನಾಶವಾಗಿ ಭವಿಷ್ಯದಲ್ಲಿ ಶುದ್ಧತ್ವವನ್ನು ಹೊಂದಿ ಭಕ್ತಾದಿಗಳು ಜೀವಿಸುವರು ಮಹಾಗೌರಿಯು ಜ್ಞಾನರೂಪಿಣಿ ಶಾಂತರೂಪಿಣಿಯಾಗಿರುವವಳು. ಅವಳು ಮಾಡಿದ ತಪಸ್ಸಿನಿಂದ ಸೌಂದರ್ಯವನ್ನು ಪಡೆದು ಶ್ವೇತವರ್ಣಿಯಾಗಿ ಕಂಗೊಳಿಸುವಳು ಚಂದ್ರನಂತೆ ರಜತಶುದ್ದಿಯಂತೆ. ಮಲ್ಲಿಗೆಯಾಷ್ಟೇ ಶ್ವೇತವರ್ಣಿಯಾಗಿರುವಳು. 8 ವರ್ಷದ ಹಸುಳೆಯಗಿ ಈ ರೂಪದಲ್ಲಿ ಅವತರಿಸುವಳು. ಇವಳಿಂದ ಶಾಂತ ಮತ್ತು ಅನುಕಂಪ ಮೂರ್ತಿಯಾಗಿದ್ದು, ತ್ರಿಶೂಲ ಮತ್ತು ಡಮರುವನ್ನು ಹಿಡಿದು ವೃಷಭವಾಹಿನಿ ಆಗಿರುವಳು.
- ಸಿದ್ದಿದಾತ್ರಿ: ನವರಾತ್ರಿಯ 9 ನೇ ದಿವಸದಲ್ಲಿ ದುರ್ಗೆಯು ಸಿದ್ದಿದಾತ್ರಿಯಾಗಿ ಪೂಜಿಸಲ್ಪಡುವಳು. ಅಷ್ಟ ಸಿದ್ದಿಗಳಲ್ಲಿ ಅತಿಮಾನುಷೆ ಶಕ್ತಿಗಳನ್ನು ಪಡೆದು ಈ ರೂಪದಲ್ಲಿ ಬರುವಳು. ಇವಳಿಗೆ 4 ಕೈಗಳು ಇದ್ದು ಸಿಂಹವಾಹಿನಿ ಅಗಿರುವಳು. ಮತ್ತು ಎಲ್ಲಿ ದೇವತೆಗಳನ್ನು ಋಷಿಯಾಗಿ ತಂತ್ರಸಾಧಿಕರನ್ನು ಆಶಿರ್ವದಿಸುವಳು ಶಿವನು ಈ ಎಲ್ಲಾ ಅಷ್ಟ ಸಿದ್ದಿಗಳನ್ನು ಹೊಂದಿರುವನು ಅಷ್ಟ ಸಿದ್ದಿಯನ್ನು ಪಡೆದ ಮಹಾಶಕ್ತಿಯಾಗಿ ಇಲ್ಲಿ ಅವತರಿಸಿದ್ದಾಳೆ?
ಶರನ್ನವರಾತ್ರಿಯ ಮೊದಲ ದಿನದಿಂದ ಒಂಬತ್ತನೆ ದಿನದವರೆಗೆ ಪೂಜಿಸಲ್ಪಟ್ಟ ಕುಮಾರಿಯವರನ್ನು 10ನೇ ದಿನದಂದು 9 ಕುಮಾರಿಯವರಿಗೆ ಅಲಂಕರಿಸಿ ಒಟ್ಟಿಗೆ ಕುಳ್ಳಿರಿಸಿ ಪೂಜೆ ನೆರವೇರಿಸಿ ಫಲಪುಷ್ಪ, ಹಣ್ಣು ಹಂಪಲುಗಳನ್ನು ನೀಡಿ ದುರ್ಗೆಯ ರೂಪದಲ್ಲಿ ಇದ್ದ ಕುಮಾರಿಯವರನ್ನು ಸ್ವಾಮೀಜಿಯವರು ಸಾಕ್ಷಾತ್ ಶಾರದಾ ದೇವಿಯಂತೆ ಕಂಡು ಅವರಿಗೆ ಸಾಷ್ಟಾಂಗ ನಮಸ್ಕರಿಸಿ ಆಶೀರ್ವಾದ ಪಡೆದು ನಂತರ ಕುಮಾರಿಯವರಿಗೆ ಅನ್ನದಾನ ಮಾಡಿ ಸಂತೃಪ್ತಿಗೊಳ್ಳುತ್ತಾರೆ.





