೯೮ ಲಕ್ಷ ರೂ ವೆಚ್ಚದ ಎರಡು ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಡಾ. ಭರತ್ ಶೆಟ್ಟಿ
ಕೈಕಂಬ: ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಪೆರಾರ ಗ್ರಾಮದ ಪಡೀಲ್ ಮತ್ತು ಮುರ ಎಂಬಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಒಟ್ಟು ೯೮ ಲಕ್ಷ ರೂ ವೆಚ್ಚದ ಎರಡು ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಗಳಿಗೆ ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅ. ೩ ಗುದ್ದಲಿಪೂಜೆ ನೆರವೇರಿಸಿದರು.
ಡಾ. ಭರತ್ ಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಯೋಜನೆ ರೂಪಿಸಿದೆ. ತನ್ನ ಕ್ಷೇತ್ರದಲ್ಲಿ ಜೆಜೆಎಂ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಚಾಲನೆ ಸಿಕ್ಕಿದ್ದು, ಯೋಜನೆ ಪೂರ್ಣಗೊಂಡಾಗ ಪ್ರತಿ ಮನೆಗೂ ಕುಡಿಯುವ ನೀರು ಲಭ್ಯವಾಗಲಿದೆ. ಪ್ರಸಕ್ತ ಯೋಜನೆಯಡಿ ಎರಡು ಕಡೆ ೫೦ ಸಾವಿರ ಲೀಟರ್ ಸಾಮರ್ಥ್ಯದ ತಲಾ ಎರಡು ನೀರಿನ ಟ್ಯಾಂಕ್ ನಿರ್ಮಾಣಗೊಳ್ಳಲಿದೆ ಎಂದರು.
ಕಾರ್ಯಕ್ರಮದಲ್ಲಿ ಪಡುಪೆರಾರ ಪಂಚಾಯತ್ ಅಧ್ಯಕ್ಷೆ ಅಮಿತಾ ಎಂ. ಶೆಟ್ಟಿ, ಉಪಾಧ್ಯಕ್ಷೆ ಸೇಸಮ್ಮ, ಪಿಡಿಒ ಉಗ್ಗಪ್ಪ ಮೂಲ್ಯ, ಸದಸ್ಯರಾದ ಜಯಂತ ಪೂಜಾರಿ, ಯಶವಂತ ಪೂಜಾರಿ, ವಿನೋದ್, ದೇವಪ್ಪ ಶೆಟ್ಟಿ, ರಾಜೇಶ್ ಪೂಜಾರಿ, ಸೀತಾರಾಮ ಗೌಡ ಮತ್ತು ಅನುರಾಜ್, ಅನಿಲ್ ಕುಮಾರ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗುರುಪ್ರಸಾದ್, ಗುತ್ತಿಗೆದಾರ ಮಹಾಬಲ ಶೆಟ್ಟಿ, ಯಶೋಧರ, ಉದ್ಯಮಿ ಶೆರೀಫ್, ಸ್ಥಳೀಯ ನಾಗರಿಕರು, ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.