ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘದ ಮಹಾಸಭೆ, ರೂ ೨.೮೫ ಕೋಟಿ ಲಾಭ : ಸುರೇಶ ಕುಲಾಲ್
ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘದ ವತಿಯಿಂದ ಸೆ.18ರಂದು ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಸುರೇಶ ಕುಲಾಲ್ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಡಾ.ಅಮ್ಮೆಂಬಳ ಬಾಳಪ್ಪ ಅವರು ಸ್ಥಾಪಿಸಿದ ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘವು ಕಳೆದ ಸಾಲಿನಲ್ಲಿ ಒಟ್ಟು ರೂ ೭೨೬.೦೮ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ರೂ ೨.೮೫ ಕೋಟಿ ಲಾಭ ಗಳಿಸಿಸುವ ಮೂಲಕ ಸದಸ್ಯರಿಗೆ ಶೇ. ೧೬ ರಷ್ಟು ಡಿವಿಡೆಂಡ್ ನೀಡುತ್ತಿರುವುದಾಗಿ ಸಂಘದ ಅಧ್ಯಕ್ಷ ಸುರೇಶ ಕುಲಾಲ್ ತಿಳಿಸಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಭಾನುವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಉಪಾಧ್ಯಕ್ಷ ಪದ್ಮನಾಭ ವಿ., ನಿರ್ದೇಶಕರಾದ ವಿಶ್ವನಾಥ ಕೆ. ಬಿ., ಅರುಣ್ ಕುಮಾರ್, ಜನಾರ್ಧನ ಕುಲಾಲ್, ಎಂ. ವಾಮನ ಟೈಲರ್, ಸತೀಶ್, ಸುರೇಶ್ ಎನ್., ರಮೇಶ್ ಸಾಲ್ಯಾನ್, ನಾಗೇಶ್ ಬಿ., ವಿ. ವಿಜಯ್ ಕುಮಾರ್, ಎಂ. ಕೆ ಗಣೇಶ್ ಸಮಗಾರ, ಜಗನ್ನಿವಾಸ ಗೌಡ, ಜಯಂತಿ, ವಿದ್ಯಾ ಇದ್ದರು. ನಿರ್ದೇಶಕ ಬಿ. ರಮೇಶ್ ಸಾಲ್ಯಾನ್ ಸ್ವಾಗತಿಸಿ, ಸಹಾಯಕ ಪ್ರಧಾನ ವ್ಯವಸ್ಥಾಪಕ ಮೋಹನ್ ಜಿ.ಮೂಲ್ಯ ವರದಿ ವಾಚಿಸಿದರು. ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಲೆಕ್ಕ ಪತ್ರ ಮಂಡಿಸಿದರು. ವ್ಯವಸ್ಥಾಪಕಿ ಕಮಲ ಮತ್ತು ಶಾಖಾಧಿಕಾರಿ ವಿನೋದ್ ಕುಮಾರ್ ನಿರೂಪಿಸಿದರು.