ಮೋದಿಯವರ 72ನೇ ಜನ್ಮದಿನಾಚರಣೆಯ ಪ್ರಯುಕ್ತ ಶ್ರೀ ಓಂ ಜನಹಿತಾಯ ಸಂಸ್ಥೆಯ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಹಿಂದುಳಿದ ಮೋರ್ಚಾ ಬಂಟ್ವಾಳ ಮಂಡಲದ ವತಿಯಿಂದ ನಮ್ಮ ಹೆಮ್ಮೆಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಜಿ ಅವರ 72ನೇ ವರ್ಷದ ಜನ್ಮ ದಿನಾಚರಣೆಯ ಪ್ರಯುಕ್ತ ಗುಡ್ಡೆ ಅಂಗಡಿ ಶ್ರೀ ಓಂ ಜನಹಿತಾಯ ಸಂಸ್ಥೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿಯವರು ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಜಿಲ್ಲಾ ಓಬಿಸಿ ಉಪಾಧ್ಯಕ್ಷರಾದ ಪುರುಷೋತ್ತಮ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಅಳ್ಬ ಅರಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮಿಧರ ಶೆಟ್ಟಿ,, ಓಬಿಸಿ ಮೋರ್ಚಾದ ಅಧ್ಯಕ್ಷರಾದ ಆನಂದ ಶಂಭೂರು ಮಂಡಲ ಒಬಿಸಿ ಮೋರ್ಚಾದ ಪ್ರದಾನ ಕಾರ್ಯದರ್ಶಿ ಗಳಾದ ಉಮೇಶ್ ಅರಳ, ಚಿದಾನಂದ ಕಲ್ಲಡ್ಕ, ಪುರಸಭೆ ಸದಸ್ಯರಾದ ಹರಿಪ್ರಸಾದ್, ಮಂಡಲದ ಉಪಾಧ್ಯಕ್ಷರಾದ ಚಂದ್ರವತಿ ಪೊಳಲಿ ಕ್ಷೇತ್ರ ಕಾರ್ಯದರ್ಶಿ ರಮಾನಾಥ ರಾಯಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶ್ವತ್ ರಾವ್, ಪಂಚಾಯತ್ ಉಪಾಧ್ಯಕ್ಷರಾದ ರಶ್ಮಿತ್ ಶೆಟ್ಟಿ ಮಮತಾ ಪೂಜಾರಿ ನಂದಾರಾಮ ರೈ ಜಗದೀಶ ಆಳ್ವ, ರಂಜನ್ ಶೆಟ್ಟಿ,, ರಮೇಶ್ ಬಟ್ಟಾಜೆ, ಕಮಲಾಕ್ಷಿ ಪೂಜಾರ್ತಿ ಯಶವಂತ್ ಪೊಳಲಿ,ಗೋಪಾಲ ಬಂಗೇರಾ,ದಿನೇಶ್ ಬಟ್ಟಾಜೆ ಮತ್ತು ಪಂಚಾಯತ್ ಸದಸ್ಯರು ಪಕ್ಷದ ಅನನ್ಯ ಜವಾಬ್ದಾರಿ ಪ್ರಮುಖರು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
ಮೋದಿಜಿ ಅವರ ಜನ್ಮದಿನದ ಪ್ರಯುಕ್ತ ಓಂ ಜನಹಿತ ಶಾಲೆಯ 600 ಮಕ್ಕಳಿಗೆ ವತಿಯಿಂದ ಸಿಹಿತಿಂಡಿಯನ್ನು ಹಂಚಲಾಯಿತು. ಓಬಿಸಿ ಮೋರ್ಚಾ ಅಧ್ಯಕ್ಷರಾದ ಅನಂದ ಶಂಭೂರು ಸ್ವಾಗತಿಸಿದರು ಉಪಾಧ್ಯಕ್ಷರಾದ ಮೋಹನ್ ದಾಸ್ ಕೊಟ್ಟಾರಿ ವಂದಿಸಿದರು.