ದೆಹಲಿ ಕೆಂಪು ಕೋಟೆಯಲ್ಲಿ ವಿಶ್ವ ಮೈತ್ರಿ ಕ್ಷಮಾ ವಾಣಿ ಆಚರಣೆ
ಮುಂಬಯಿ: ರಾಷ್ಟ್ರ ಸಂತ ಆಚಾರ್ಯ 108 ಪ್ರಾಗ್ಯಸಾಗರ ಮುನಿರಾಜರ ಮಾರ್ಗದರ್ಶನ ದಲ್ಲಿ ಕಳೆದ ಭಾನುವಾರ ವಿವಿಧ ಸಂಪ್ರದಾಯದ ಸಾಧು ಸಾದ್ವಿಯರ ದಿವ್ಯ ಉಪಸ್ಥಿತಿಯಲ್ಲಿ ವಿಶ್ವ ಮೈತ್ರಿದಿನ ಕ್ಷಮಾ ವಾಣಿಪರ್ವ ನಡೆಸಲಾಯಿತು.
ಬೆಳಿಗ್ಗೆಯಿಂದ ಮಧ್ಯಾಹ್ನ ವರೆಗೆ ವೈವಿಧ್ಯ ಮಯ ಕಾರ್ಯಕ್ರಮಗಳೊಂದಿಗೆ ಆಚರಿಸ ಲಾದ ಕಾರ್ಯಕ್ರಮದಲ್ಲಿ ಆಚಾರ್ಯ ವಿಮದ್ ಸಾಗರ, ಆಚಾರ್ಯ ಶ್ರುತ ಸಾಗರ, ವಿಬಂಜನ ಸಾಗರ, ಮೂಡು ಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಹರಿದ್ವಾರದ ಚಿದಾನಂದ ಸ್ವಾಮೀಜಿ ಮೊದಲಾದ ಸಾದುಸಂತರು, ಸಂಸ್ಕೃತಿ ಸಚಿವೆ ಸ್ಮೃತಿ ಇರಾನಿ ಉಪಸ್ಥಿತರಿದ್ದರು.
ಆಚಾರ್ಯಪ್ರಾಗ್ಯ ಸಾಗರ ಮುನಿರಾಜ್ ಆಶೀರ್ವಾಚನಗೈದು ದ್ವೇಷ ಅಸೂಯೆಯಿಂದ ಜೀವನ ದುಃಖವಾಗುದು ಸಂಯಮ ಕ್ಷಮೆ ಮೈತ್ರಿಯಿಂದ ಯಶಸ್ಸು ನೆಮ್ಮದಿ ಶಾಂತಿ ಸಿಗುದು ಎಂದರು.
ಭಗವಾನ್ ಮಹಾವೀರ ಸ್ವಾಮಿ ಸಂದೇಶ ಲೋಕ ಪ್ರಿಯ ಎಲ್ಲಾರಿಗೂ ಕ್ಷಮೆ ಎಲ್ಲಾರೂ ಕ್ಷಮಿಸುವ ಗುಣ ಬೆಳೆಸಿ ಕೊಳ್ಳೋಣ ಬದುಕು ಬದುಕಲು ಬಿಡಿ ಎನ್ನುವ ಸಂದೇಶ ನಿಜವಾದ ಅಹಿಂಸೆ ಎಂದು ಮೂಡುಬಿದಿರೆ ಚಾರುಕೀರ್ತಿ ಸ್ವಾಮೀಜಿ ತಿಳಿಸಿ ದರು.
ದಿಗಂಬರ ಶ್ವೇತಾoಬರ ಸಂಪ್ರದಾಯದ ಸ್ವಾಮೀಜಿ ಮಂಗಲ ಪ್ರಾರ್ಥನೆ ಮಾಡಿ ಎಲ್ಲರೂ ಪರಸ್ಪರ ಕ್ಷಮೆ ಯಾಚಿಸಿದರು.
ರಮೇಶ್ ಜೈನ್, ಸೂರಜ್ ಮಲ್ ವಿಹಾರ ಅನಿಲ್ ಜೈನ್ ಹಾಗೂ ದೆಹಲಿ ಜೈನ್ ಸಮಾಜ ಪ್ರಮುಖ ಚಕ್ರೆಶ್ ಜೈನ್ ಉಪಸ್ಥಿತರಿದ್ದರು