ಸಾಂತಾಕೂಜ್ ಪೂರ್ವದಲ್ಲಿ ನಡೆಸಲ್ಪಟ್ಟ ರಕ್ತದಾನ ಶಿಬಿರ
ಮುಂಬಯಿ: ಅಖಿಲ ಭಾರತೀಯ ತೇರಾ ಪಂತ್ಯುವಕ್ಪ ಪರಿಷದ್” ಸಂಸ್ಥೆಯು ಮುಂಬಯಿ ಸಾಂತಾಕೂಜ್ ಪೂರ್ವದ ವಿಹಾರ್ ಹೊಯೇಲ್ ಸಭಾಂಗಣದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಸಿತು.
ರಕ್ತದಾನ ಶಿಬಿರದಲ್ಲಿ ಗೌರವ ಅತಿಥಿüಯಾಗಿ ಕಾಂಗ್ರೇಸ್ (ಐ) ಪಕ್ಷದ ಹಿರಿಯ ಮುಖಂಡ ಹಾಗೂ ಸ್ಥಾನೀಯ ಸಮಾಜಸೇವಕ ಶೇಖರ ಜೆ.ಸಾಲಿಯಾನ್ ಪಾಲ್ಗೊಂಡು ಎಲ್ಲ ದಾನಿಗಳಿಗೂ ಪ್ರಮಾಣಪತ್ರ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ, ಕಿರಣ್ ಪರ್ಮಾರ್, ದೀಪಕ್ ಪರ್ಮಾರ್, ವಿಕಾಸ್‌ಕಡ್, ಸುರೇಶ್ ಜೈನ್, ಅಶೋಕ್ ಜೈನ್ ಮುಂತಾದ ಕಾರ್ಯಕಾರಿ ಸಮಿತಿಯ ಅನೇಕ ಸದಸ್ಯರೂ ಪಾಲ್ಗೊಂಡಿದ್ದರು.