ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ; ೨೨ನೇ ವಾರ್ಷಿಕ ಮಹಾಸಭೆ ಗುಣಾತ್ಮಕ ಸೇವೆ ಜಯಲಕ್ಷ್ಮೀ ಸೊಸೈಟಿಯ ಉದ್ದೇಶವಾಗಿದೆ : ರಂಗಪ್ಪ ಸಿ.ಗೌಡ
ಮುಂಬಯಿ : ಹಣಕಾಸು ವ್ಯವಸ್ಥೆಯ ದೂರದೃಷ್ಠಿ ಹೊಂದಿರುವ ಈ ಸೊಸೈಟಿ ಜನಸಾಮಾನ್ಯರ ಸೊಸೈಟಿ ಆಗಿದೆ. ಗುಣಾತ್ಮಕ ಸೇವೆ ನಮ್ಮ ಉದ್ದೇಶವಾಗಿದ್ದು, ಆಸಕ್ತ ಸರ್ವರ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದೆ. ಸುಮಾರು ಎರಡು ದಶಕಗಳ ಸೇವೆಯಲ್ಲಿ ಎಲ್ಲಾ ಪಂಥಾಹ್ವಾನಗಳನ್ನು ದಿಟ್ಟತನದಿಂದ ಎದುರಿಸಿ ಮುನ್ನಡೆದು ಬಂದಿರುವುದೇ ಈ ಸೊಸೈಟಿಯ ಸಾಧನೆಯಾಗಿದೆ ಎಂದು ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ಇದರ ಕಾರ್ಯಧ್ಯಕ್ಷ ರಂಗಪ್ಪ ಸಿ.ಗೌಡ ತಿಳಿಸಿದರು.

ಸೆ.18ರಂದು ಭಾನುವಾರ ಪೂರ್ವಾಹ್ನ ಅಂಧೇರಿ ಪೂರ್ವದ ಹೊಟೇಲ್ ಸಾಲಿಟೇರ್‌ನ ಸಭಾಗೃಹದಲ್ಲಿ ಜಯಲಕ್ಷ್ಮೀ ಪಥಸಂಸ್ಥೆಯು ತನ್ನ ೨೨ನೇ ವಾರ್ಷಿಕ ಮಹಾಸಭೆ ನಡೆಸಿದ್ದು ಮಹಾಸಭೆಯ ಅಧ್ಯಕ್ಷತೆ ವಹಿಸಿ ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯನ್ನಿತ್ತರು.ರಂಗಪ್ಪ ಗೌಡ ಮಾತನಾಡಿದರು.

ಒಕ್ಕಲಿಗರ ಧೀಶಕ್ತಿ ದೈವೈಕ್ಯ ಮಹಾಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಮಹಾಗಣಪತಿಗೆ ಆರತಿ ಬೆಳಗಿಸಿ ಮಹಿಳಾ ನಿರ್ದೇಶಕಿ ಸುನಂದ ಆರ್.ಗೌಡ ಮತ್ತು ನೌಕರವೃಂದದ ನಾರಿಯರು ಸಭೆಗೆ ಸಾಂಕೇತಿಕವಾಗಿ ಚಾಲನೆಯನ್ನಿತ್ತರು. ಒಕ್ಕಲಿಗರ ಸಂಘ ಮಹಾರಾಷ್ಟç ಕೋಶಾಧಿಕಾರಿ ದೀಪು ಆರ್.ಗೌಡ, ಉದ್ಯಮಿ ಅರುಣ್ ಭೋಸ್ಲೆ ಮುಖ್ಯ ಅತಿಥಿüಯಾಗಿದ್ದು ಸೊಸೈಟಿಯ ಉಪಾಧ್ಯಕ್ಷ ಎ.ಕೆಂಪೇ ಗೌಡ (ರಾಮಣ್ಣ), ಕಾರ್ಯದರ್ಶಿ ಕೆ.ರಾಜೇ ಗೌಡ, ಕೋಶಾಧಿಕಾರಿ ಮುತ್ತೇ ಎಸ್.ಗೌಡ, ನಿರ್ದೇಶಕರಾದ ರಾಹುಲ್ ಯು.ಲಗಡೆ ವೇದಿಕೆಯಲ್ಲಿ ಆಸೀನರಾಗಿದ್ದು ಸೊಸೈಟಿಯ ಉನ್ನತಿಗಾಗಿ ಶ್ರಮಿಸಿದ ಸರ್ವರ ಅನನ್ಯ ಸೇವೆ ಶ್ಲಾಘಿಸಿ ಅಭಿವಂದಿಸಿದರು ಹಾಗೂ ಸೊಸೈಟಿಯ ಉನ್ನತಿಗೆ ಶುಭಾರೈಸಿದರು.

ಕಚೇರಿ ಅಧಿಕಾರಿಗಳಾದ ಲೆಕ್ಕಾಧಿಕಾರಿ ಶಿಲ್ಪಾ ಸಂತೋಷ್ ಮಾಂಡವ್ಕಾರ್, ಪ್ರಕಾಶ್ ನಾಮ್‌ದೇವ್ ವಾಡ್ಕರ್, ಪ್ರದೀಪ್‌ಕುಮಾರ್ ಆರ್.ಗೌಡ, ಶಿವಕುಮಾರ್ ಹೆಚ್.ಗೌಡ, ಆಶಾರಾಣಿ ಬಿ.ಗೌಡ ಮತ್ತು ಘ್ಯಾನ್‌ಶ್ಯಾಮ್ ಟಿ.ಬಾವ್ಕರ್ ಉಪಸ್ಥಿತರಿದ್ದು ಸೊಸೈಟಿಯ ವಿವಿಧ ಮಾಹಿತಿಗಳನ್ನಿತ್ತರು.

ಕಾರ್ಯದರ್ಶಿ ಕೆ.ರಾಜೇ ಗೌಡ ಅಂತರಿಕ ಲೆಕ್ಕಪತ್ರಗಳ ಮಾಹಿತಿ ಮತ್ತು ವಾರ್ಷಿಕ ವ್ಯವಹಾರದ ಮಾಹಿತಿ ನೀಡಿ ಹಣಕಾಸು ವ್ಯವಹಾರದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಂಡು ಬಂದ ಪಥಸಂಸ್ಥೆ ಇದಾಗಿದೆ. ಗ್ರಾಹಕರಿಗೆ ಭರವಸೆಯ ಸೇವೆ ನೀಡಿದಾಗಲೇ ಆಥಿüðಕ ಸಂಸ್ಥೆಗಳ ಉನ್ನತಿ ಸಾಧ್ಯ. ಸಾರ್ವಜನಿಕರ ಸೇವೆಯಲ್ಲಿ ವಿಶ್ವಾಸ ಬೆಳೆಸಿದ ಈ ಸೊಸೈಟಿ ಅಗತ್ಯವುಳ್ಳವರ ಸೇವೆಗೆ ಸ್ಪಂದಿಸಿದೆ ಅನ್ನುವ ಅಭಿಮಾನ ನಮಗಿದೆ ಎಂದರು.

ಸೊಸೈಟಿಯ ಗ್ರಾಹಕರು, ಹಿಷೆದಾರರು, ಕರ್ಮಚಾರಿಗಳು, ಪಿಗ್ಮೀ ಸಂಗ್ರಹದಾರರು, ಹಿತೈಷಿಗಳು ಸಭೆಯಲ್ಲಿ ಹಾಜರಿದ್ದು ಕೆ.ರಾಜೇ ಗೌಡ ಅವರ ೭೫ನೇ ವರ್ಷದ ಹುಟ್ಟುಹಬ್ಬದ ಕೇಕ್ ಕತ್ತರಿಸಿ ಅಮೃತ ಮಹೋತ್ಸವ ಸಂಭ್ರಮಿಸಿದ್ದು ನಿರ್ದೇಶಕರು ಸನ್ಮಾನಿಸಿ ಶುಭಕೋರಿ ಅಭಿನಂದಿಸಿದರು.

ಸೊಸೈಟಿಯ ಪ್ರಬಂಧಕ ಪರ್ಶುರಾಮ್ ಕೆ.ದೌಂಡ್ ಸ್ವಾಗತಿಸಿ ಸಭಾ ಕಲಾಪ ನಡೆಸಿ ಗತ ಸಾಲಿನ ಮಹಾಸಭೆಯ ವರದಿ ವಾಚಿಸಿ, ಸಂಸ್ಥೆಯ ವಾರ್ಷಿಕ ಕಾರ್ಯಚಟುವಟಿಕೆಗಳ ಮಾಹಿತಿಯನ್ನಿತ್ತರು ಹಾಗೂ ಅತಿಥಿüಗಳನ್ನು ಪರಿಚಯಿಸಿ ವಂದಿಸಿದರು.













