Published On: Sat, Sep 17th, 2022

ಮಹತ್ತರವಾದ ಕಾರಣಕ್ಕಾಗಿ ಮತ್ತೆ ಕ್ರಿಕೆಟ್ ಆಡಲು ಮೈದಾನಕ್ಕಿಳಿದ ಲೆಜೆಂಡ್ ಕ್ರಿಕೆಟಿಗರು

ಕೋಲ್ಕತ್ತಾ: ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022 (Legends League Cricket 2022) ಇಂದಿನಿಂದ ಆರಂಭವಾಗುತ್ತಿದ್ದು, ವಿಶ್ವದ ಶ್ರೇಷ್ಠ ಕ್ರಿಕೆಟ್ ಆಟಗಾರರು ನಿವೃತ್ತಿಯ ಬಳಿಕ ಇದೀಗ ಮಹತ್ತರವಾದ ಕಾರ್ಯಕ್ಕಾಗಿ ಮತ್ತೆ ಮೈದಾನಕ್ಕಿಳಿದು ಆಡುತ್ತಿದ್ದಾರೆ.

ಇಂದು ಕೋಲ್ಕತ್ತಾದಲ್ಲಿ ಗುಜರಾತ್ ಜೈಂಟ್ಸ್ (Gujarat Giants) ವಿರುದ್ಧ ಇಂಡಿಯಾ ಕ್ಯಾಪಿಟಲ್ಸ್ (India Capitals) ಆಡುವ ಮೂಲಕ ಲೀಗ್ ಪಂದ್ಯ ಆರಂಭವಾಗುತ್ತಿದೆ. ನಿನ್ನೆ ಇಂಡಿಯನ್ ಮಹಾರಾಜಸ್ ಮತ್ತು ವಿಶ್ವ ಜೈಂಟ್ಸ್ ನಡುವೆ ವಿಶೇಷ ಪ್ರದರ್ಶನ ಪಂದ್ಯ ನಡೆಯಿತು. ಈ ಮೂಲಕ ಟೂರ್ನಿಗೆ ಚಾಲನೆ ಸಿಕ್ಕಿದ್ದು, ಇಂದಿನಿಂದ ಅಧಿಕೃತ ಪಂದ್ಯಗಳು ನಡೆಯಲಿದೆ.

ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್, ಹರ್ಭಜನ್ ಸಿಂಗ್, ಗೌತಮ್ ಗಂಭೀರ್, ಶ್ರೀಶಾಂತ್, ಶೇನ್ ವಾಟ್ಸನ್‌, ಸನತ್ ಜಯಸೂರ್ಯ, ಜಾಂಟಿ ರೋಡ್ಸ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇನ್ ಸೇರಿದಂತೆ ಹಲವು ದಿಗ್ಗಜ ಆಟಗಾರರು ಟೂರ್ನಿಯಲ್ಲಿ ಆಡುತ್ತಿದ್ದು, ಈ ಎಲ್ಲಾ ಆಟಗಾರರನ್ನು 4 ತಂಡಗಳಾಗಿ ವಿಂಗಡಿಸಿ ಟೂರ್ನಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಬರುವ ಆದಾಯವನ್ನು ಹೆಣ್ಣು ಮಕ್ಕಳ ಶಿಕ್ಷಣವನ್ನು ಬೆಂಬಲಿಸುವ ಕಪಿಲ್ ದೇವ್ ಅವರ ಖುಷಿ ಫೌಂಡೇಶನ್‍ಗೆ (Kapil Dev’s Khushii Foundation) ನೀಡುವ ಮಹತ್ತರವಾದ ಕಾರ್ಯಕ್ಕೆ ಈ ಟೂರ್ನಿಯಲ್ಲಿ ದಿಗ್ಗಜ ಆಟಗಾರರು ಆಡುತ್ತಿದ್ದಾರೆ.

ಲೀಗ್ ಪಂದ್ಯಗಳು ಇಂದಿನಿಂದ ಆರಂಭಗೊಂಡರೆ ಟೂರ್ನಿಯ ಕ್ವಾಲಿಫೈಯರ್ ಪಂದ್ಯವು ಅಕ್ಟೋಬರ್ 2 ರಂದು ಜೋಧ್‍ಪುರದಲ್ಲಿ ನಡೆಯಲಿದ್ದು, ಎಲಿಮಿನೇಟರ್ ಅಕ್ಟೋಬರ್ 3 ರಂದು ನಡೆಯಲಿದೆ. ಫೈನಲ್ ಅಕ್ಟೋಬರ್ 5 ರಂದು ನಡೆಯಲಿದೆ. 

ತಂಡಗಳು:
ಮಣಿಪಾಲ್ ಟೈಗರ್ಸ್ (Manipal Tigers): ಹರ್ಭಜನ್ ಸಿಂಗ್ (ನಾಯಕ), ಪರ್ವಿಂದರ್ ಅವಾನಾ, ವಿ.ಆರ್.ವಿ ಸಿಂಗ್, ಇಮ್ರಾನ್ ತಾಹಿರ್, ಬ್ರೆಟ್ ಲೀ, ಮುತ್ತಯ್ಯ ಮುರಳೀಧರನ್, ಫಿಲ್ ಮಸ್ಟರ್ಡ್, ಮೊಹಮ್ಮದ್ ಕೈಫ್, ರಿಯಾನ್ ಸೈಡ್‍ಬಾಟಮ್, ಲ್ಯಾನ್ಸ್ ಕ್ಲೂಸೆನರ್, ಡಿಮಿಟ್ರಿ ಮಸ್ಕರೇನ್ಹಸ್, ರೋಮೇಶ್ ಕಲುವಿತಾರಣ, ರೀಟೈಂಡರ್ ಸೋಧಿ, ಡೇರನ್ ಸ್ಯಾಮಿ.

ಗುಜರಾತ್ ಜೈಂಟ್ಸ್ (Gujarat Giants): ವೀರೇಂದ್ರ ಸೆಹ್ವಾಗ್ (ನಾಯಕ), ಕ್ರಿಸ್ ಗೇಲ್, ಪಾರ್ಥಿವ್ ಪಟೇಲ್, ಅಜಂತಾ ಮೆಂಡಿಸ್, ಮನ್ವಿಂದರ್ ಬಿಸ್ಲಾ, ಲೆಂಡ್ಲ್ ಸಿಮನ್ಸ್, ರಿಚರ್ಡ್ ಲೆವಿ, ಮಿಚೆಲ್ ಮೆಕ್‍ಕ್ಲೆನಾಘನ್, ಸ್ಟುವರ್ಟ್ ಬಿನ್ನಿ, ಕೆವಿನ್ ಒ‌ ಬ್ರಿಯಾನ್, ಅಶೋಕ್ ದಿಂಡಾ, ಜೋಗಿಂದರ್ ಶರ್ಮಾ, ಗ್ರೇಮ್ ಸ್ವಾಲೆಟ್, ಗ್ರೇಮ್ ಸ್ವಾಲೆಟ್, ಸಿಎಚ್. ಮತ್ತು ಎಲ್ಟನ್ ಚಿಗುಂಬುರ.

ಇಂಡಿಯನ್ ಕ್ಯಾಪಿಟಲ್ಸ್ (India Capitals): ಗೌತಮ್ ಗಂಭೀರ್ (ನಾಯಕ), ಲಿಯಾಮ್ ಪ್ಲಂಕೆಟ್, ರಜತ್ ಭಾಟಿಯಾ, ಹ್ಯಾಮಿಲ್ಟನ್ ಮಸಕಝ, ಮುಶ್ರಫೆ ಮೊರ್ತಜಾ, ಜಾನ್ ಮೂನಿ, ರವಿ ಬೋಪಾರಾ, ಪ್ರವೀಣ್ ತಾಂಬೆ, ದಿನೇಶ್ ರಾಮ್‍ದಿನ್, ಅಸ್ಗರ್ ಅಫಘಾನ್, ಮಿಚೆಲ್ ಜಾನ್ಸನ್, ಪ್ರಾಸ್ಪರ್ ಉತ್ಸೇಯಾ, ರಾಸ್ ಟೇಲರ್, ಜಾಕ್ ಟೇಲರ್ ಮತ್ತು ಪಂಕಜ್ ಸಿಂಗ್.

ಭಿಲ್ವಾರಾ ಕಿಂಗ್ಸ್ (Bhilwara Kings): ಇರ್ಫಾನ್ ಪಠಾಣ್ (ನಾಯಕ), ಯೂಸುಫ್ ಪಠಾಣ್, ನಿಕ್ ಕಾಂಪ್ಟನ್, ಶ್ರೀಶಾಂತ್, ಶೇನ್ ವಾಟ್ಸನ್‌, ಟಿಮ್ ಬ್ರೆಸ್ನನ್, ಓವೈಸ್ ಶಾ, ಮಾಂಟಿ ಪನೇಸರ್, ನಮನ್ ಓಜಾ, ವಿಲಿಯಂ ಫೋರ್ಟರ್‍ಫೀಲ್ಡ್, ಫಿಡೆಲ್ ಎಡ್ವರ್ಡ್‌ಸ್, ಸಮಿತ್ ಪಟೇಲ್, ಮ್ಯಾಟ್ ಪ್ರಯರ್, ಟಿನೋ ಬೆಸ್ಟ್ ಮತ್ತು ಸುದೀಪ್ ತ್ಯಾಗಿ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter