ಟೇಕ್ ಆಫ್ ಆಗುವ ಮೊದಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಇಂಜಿನ್‍ನಲ್ಲಿ ಬೆಂಕಿ
ಮಸ್ಕತ್: ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ(Flight) ಟೇಕ್ ಆಫ್ ಆಗುವ ಮೊದಲೇ ಇಂಜಿನ್‍ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಒಮಾನ್‌ನ ಮಸ್ಕತ್‌ನಲ್ಲಿ ನಡೆದಿದೆ.
ಮಸ್ಕತ್(Muscat) ವಿಮಾನ ನಿಲ್ದಾಣದಲ್ಲಿ ವಿಮಾನವು ಟೇಕ್ ಆಫ್ ಮಾಡುವ ಮೊದಲು ಇಂಜಿನ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಅದರಲ್ಲಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಈ ಏರ್ ಇಂಡಿಯಾ ಎಕ್ಸ್‌ಪ್ರೆಸ್(Air India Express) ವಿಮಾನವು ಕೊಚ್ಚಿಗೆ(Kochi) ಹೊರಟಿತ್ತು.
ವಿಮಾನದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಒಟ್ಟು 145 ಪ್ರಯಾಣಿಕರಿದ್ದರು(Passenger). ಅವರೆಲ್ಲರನ್ನು ವಿಮಾನದಿಂದ ಟರ್ಮಿನಲ್ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ.
ಎರಡು ತಿಂಗಳ ಹಿಂದೆ ಕ್ಯಾಲಿಕಟ್‍ನಿಂದ ದುಬೈಗೆ ಕಾರ್ಯಾಚರಣೆ ನಡೆಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಸುಟ್ಟ ವಾಸನೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಮಸ್ಕತ್‍ಗೆ ತಿರುಗಿಸಲಾಗುತ್ತು. ಆಗಲೂ ಯಾವುದೇ ಗಂಭೀರ ತೊಂದರೆ ಕಂಡು ಬಂದಿರಲಿಲ್ಲ.