ಇಷ್ಟೊತ್ತಿಗೆ ಹಗ್ಗ ಹಾಕಿ ನಮ್ಮನ್ನು ಗಲ್ಲಿಗೇರಿಸಬಹುದಿತ್ತಲ್ಲ: ನಳಿನ್‍ಗೆ ಡಿಕೆಶಿ ತಿರುಗೇಟು
ಚಾಮರಾಜನಗರ: ಮೂರು ವರ್ಷದಿಂದ ಬಿಜೆಪಿ (BJP) ಯವರು ಯಾಕೆ ಸುಮ್ಮನಿದ್ದರು. ಇಷ್ಟೊತ್ತಿಗೆ ಹಗ್ಗ ಹಾಕಿ ನಮ್ಮನ್ನು ಗಲ್ಲಿಗೇರಿಸಬಹುದಿತ್ತಲ್ವ. ಮೂರು ವರ್ಷದಿಂದ ಎಲ್ಲಿಗೆ ಹೋಗಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (D K Shivakumar) ತಿರುಗೇಟು ನೀಡಿದರು.
ಕಾಂಗ್ರೆಸ್ ಮಾಡಿದ್ದೆಲ್ಲ ಭ್ರಷ್ಟಾಚಾರ ಎಂಬ ನಳೀನ್ ಕುಮಾರ್ ಕಟೀಲ್ ಟ್ವೀಟ್ ಬಗ್ಗೆ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷದಿಂದ ಇವರ ಬಾಯಿ ಏನಾಗಿತ್ತು, ಪೆನ್ನು ಏನಾಗಿತ್ತು. ಮೂರು ವರ್ಷದಿಂದ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು.
ಕೆಪಿಸಿಸಿ (KPCC) ಅಧ್ಯಕ್ಷರ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎರಡು ವರ್ಷದಿಂದ ಶಕ್ತಿ ಮೀರಿ ಕೆಲಸ ಮಾಡಿದ್ದೀನಿ. ಹೋರಾಟ ಮಾಡಿದ್ದೀನಿ. ಸೆ.16 ರಂದು ಚುನಾವಣೆ ನಡೆಯುತ್ತೆ. ಪಿಆರ್‍ಒ ಆಗಿ ನಾಸೀಫನ್ ಬರ್ತಾ ಇದ್ದಾರೆ, ಅವರು ತಮಿಳುನಾಡಿನವರು. ಅವರು ಪಿಸಿಸಿ ಸದಸ್ಯರ ಜೊತೆ ಮಾತುಕತೆ ನಡೆಸುತ್ತಾರೆ. ಕೆಪಿಸಿಸಿಗೆ ಆಯ್ಕೆಯಾಗಿರುವ ಯಾರು ಬೇಕಾದರೂ ಸ್ಪರ್ಧಿಸಬಹುದು. ಸೆ.20 ರೊಳಗೆ ಚುನಾವಣಾ ಪ್ರಕ್ರಿಯೆ ಮುಗಿಸಬೇಕಿದೆ. ನಾನು ಪುನಾರಾಯ್ಕೆ ಆಗ್ತಿನೋ ಇಲ್ಲವೊ ಗೊತ್ತಿಲ್ಲ. ಪಕ್ಷ ಏನು ಜವಾಬ್ದಾರಿ ಕೊಡುತ್ತೋ ಅದನ್ನು ನಿಭಾಯಿಸ್ತೀನಿ ಎಂದರು.
ಭಾರತ್ ಜೋಡೋ ಯಾತ್ರೆ (Bharat Jodo Yatra) ಯು ದೇಶದಲ್ಲೇ ದೊಡ್ಡ ಐಕ್ಯತಾ ಯಾತ್ರೆ. ಐಕ್ಯತಾ ಯಾತ್ರೆಗೆ ಜನತೆ ಉತ್ತಮ ಪ್ರೋತ್ಸಾಹ ಕೊಡ್ತಾ ಇದ್ದಾರೆ. ಯಾತ್ರೆ ಉದ್ದೇಶ ತಿಳಿಸುವ ಸಲುವಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಭೆ ಮಾಡ್ತೀದ್ದೀನಿ. ಸೆ.30 ರಂದು ಗುಂಡ್ಲುಪೇಟೆ (Gundlupete) ಮೂಲಕ ರಾಜ್ಯ ಪ್ರವೇಶ ಮಾಡಲಿದೆ. ಯಾತ್ರೆಯಲ್ಲಿ ಪಕ್ಷಾತೀತವಾಗಿ ಭಾಗವಹಿಸಬಹುದು. ಎಷ್ಟು ದಿನ ಬೇಕಾದರೂ ಭಾಗವಹಿಸಲು ಅವಕಾಶವಿದೆ. ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ (Rahul Gandhi) ಅವರು ರೈತರು ಮಹಿಳೆಯರು ಸೇರಿದಂತೆ ವಿವಿಧ ಸಂಘಟನೆಗಳನ್ನು ಭೇಟಿ ಮಾಡಲಿದ್ದಾರೆ. ಪ್ರತಿ ದಿನ ಇಬ್ಬರು ಶಾಸಕರಿಗೆ ಯಾತ್ರೆಯ ಜವಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.