Published On: Sat, Sep 10th, 2022

ಇಂದು ಬಿಜೆಪಿಯಿಂದ ಜನಸ್ಪಂದನ – ದೊಡ್ಡಬಳ್ಳಾಪುರದಲ್ಲಿ ಶಕ್ತಿ ಪ್ರದರ್ಶನ

ಚಿಕ್ಕಬಳ್ಳಾಪುರ: ಮುಂದಿನ ವಿಧಾನಸಭೆ ಚುನಾವಣೆಗೆ(Election) ಬಿಜೆಪಿ(BJP) ಭರ್ಜರಿ ಸಿದ್ಧತೆ ನಡೆಸಿದೆ. ಈ ಸಿದ್ಧತೆಯ ಭಾಗವಾಗಿ ದೊಡ್ಡಬಳ್ಳಾಪುರದಲ್ಲಿ ಇಂದು ಬೃಹತ್ ಜನಸ್ಪಂದನ(Jana Spandana) ಸಮಾವೇಶ ಆಯೋಜಿಸಲಾಗಿದೆ.

ಜನಸ್ಪಂದನ ಸಮಾವೇಶದ ಮೂಲಕ 2023ರ ಚುನಾವಣೆಗೆ ರಾಜ್ಯ ಬಿಜೆಪಿ ದೊಡ್ಡಬಳ್ಳಾಪುರದಿಂದ ಕಹಳೆ ಮೊಳಗಿಸುತ್ತಿದೆ. 40 ಎಕರೆ ಮೈದಾನದಲ್ಲಿ ಜನಸ್ಪಂದನ ಕಾರ್ಯಕ್ರಮ ಬೃಹತ್ ವೇದಿಕೆ ಸಿದ್ಧವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಯನ್ನು ಸಿಎಂ ಬೊಮ್ಮಾಯಿ ಜನರ ಮುಂದಿಡಲಿದ್ದಾರೆ.

ಜನಸ್ಪಂದನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಉಳಿದಂತೆ ರಾಜ್ಯ ಬಿಜೆಪಿ ನಾಯಕರು, ಸಚಿವರು, ಸಂಸದರು, ಶಾಸಕರು, ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ.

ಸಮಾವೇಶದ ಹೈಲೈಟ್ಸ್
ಸಮಾವೇಶಕ್ಕೆ 1,200*140 ಅಡಿ ಉದ್ದ ಮತ್ತು ಅಗಲ ವಿಸ್ತೀರ್ಣದ ಬೃಹತ್‌ ವೇದಿಕೆ ನಿರ್ಮಾಣಗೊಂಡಿದ್ದು, ಸುಮಾರು 100 ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದಲ್ಲಿ 3 ಲಕ್ಷ ಜನ ಭಾಗಿಯಾಗುವ ನಿರೀಕ್ಷೆಯಿದೆ. 

ಎಲ್‍ಇಡಿ ಸ್ಕ್ರೀನ್ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. 15 ಅಡಿ ಎತ್ತರ, 90 ಅಡಿ ಅಗಲದ ಬೃಹತ್ ಎಲ್‍ಇಡಿ ಸ್ಕ್ರೀನ್ ಹಾಕಲಾಗಿದ್ದು ಕಾರ್ಯಕರ್ತರಿಗೆ ಉಪಹಾರ ಮತ್ತು ಊಟಕ್ಕಾಗಿ 203 ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ.

ಪುರುಷರಿಗೆ 160, ಮಹಿಳೆಯರಿಗೆ 40, ವಿಕಲಚೇತನರಿಗೆ 3 ಕೌಂಟರ್ ನಿರ್ಮಿಸಲಾಗಿದೆ. ಬಿಗಿ ಭದ್ರತೆಗಾಗಿ 2000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter