Published On: Fri, Sep 9th, 2022

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಾರ್ಷಿಕ ಮಹಾಸಭೆ, ಬಹಿರಂಗ ಅಧಿವೇಶನ, ಸಂಸ್ಥಾಪನ ದಿನಾಚರಣೆ

ಮುಂಬಯಿ :  ನಮ್ಮ ಸರಕಾರ ಬಹು ದೊಡ್ಡ ಯೋಜನೆಗಳನ್ನು ಕರಾವಳಿ ಜಿಲ್ಲೆಗಳಲ್ಲಿ ನೀಡುತ್ತಿದ್ದು ಮಾಲೀನ್ಯ ರಹಿತ ಯಾವುದೇ ದೊಡ್ಡ ಪ್ಯಾಕೇಜನ್ನು ಹೊಂದಿದ ನೂತನ ಕೈಗಾರಿಕೋದ್ಯಮಗಳು ಸ್ಥಾಪನೆಯಾಗುದರಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಸಂಪೂರ್ಣ ಪ್ರೋತ್ಸಾಹವಿದೆ. ಇದರಿಂದ ಜಿಲ್ಲೆಗಳ ಅಭಿವೃದ್ದಿಯಾಗುವುದು ಹಾಗೂ ನಮ್ಮ ಜಿಲ್ಲೆಗಳಲ್ಲಿನ ವಿದ್ಯಾವಂತ ಯುವ ಜನಾಂಗಕ್ಕೂ ಉದ್ಯೋಗವಕಾಶ ಸಿಗುವಂತಾಗುವುದು.  ಸಮಿತಿಯ ಹೋರಾಟದಿಂದ ಜಿಲ್ಲೆಗಳ ಅಭಿವೃದ್ದಿಗೊಂಡಿದೆ ಹಾಗೂ ದೇಶ ವಿದೇಶಗಳ ಉದ್ಯಮಗಳು ಜಿಲ್ಲೆಗೆ ಲಗ್ಗೆ ಹೂಡುತ್ತಿದೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ  ಎಲ್. ವಿ. ಅಮೀನ್ ನುಡಿದರು.

ಸೆ. 5ರಂದು ಕುರ್ಲಾ ಪೂರ್ವದ ಬಂಟರ ಸಂಘದ ಅನೆಕ್ಸ್ ಸಭಾಗೃಹದಲ್ಲಿ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಏಕೈಕ ಸರಕಾರಿ ಸಂಸ್ಥೆ ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ 23ನೇ ವಾರ್ಷಿಕ ಮಹಾಸಭೆಯ ಬಳಿಕ ನಡೆದ ಬಹಿರಂಗ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿ  ಎಲ್. ವಿ. ಅಮೀನ್ ಅವರು ಮಾತನಾಡಿದರು. 

ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ  ಶೆಟ್ಟಿ, ಯವರು ಮಾತನಾಡುತ್ತಾ ಈ ಹಿಂದಿನ ಎಲ್ಲಾ ಅಧ್ಯಕ್ಷರುಗಳ ಕಾಲಾವಧಿಯಲ್ಲಿ ಎದುರಿಸಲಾಗದಂತಹ ಸಮಸ್ಯೆಗಳನ್ನು ಸಮರ್ಥ ರೀತಿಯಲ್ಲಿ ಎದುರಿಸಿ ಎಲ್ಲಾ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇವೆ. ಇದೀಗ ಎಲ್. ವಿ. ಅಮೀನ್ ಅವರ ಕಾಲಾವಧಿಯಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಹಮ್ಮಿಕೊಂಡಿದೆ.

ವಿದ್ಯುತ್ ಹಾಗೂ ಗ್ಯಾಸ್ ಶವಾಗಾರ ನಿರ್ಮಾಣ ದೇಶವ್ಯಾಪ್ತಿ ಆಗಬೇಕೆನ್ನುವ ಹೋರಾಟ ನಮ್ಮದಾಗಿದ್ದು ಸಂಮದಪಟ್ಟ ಮಂತ್ರಿಗಳನ್ನು ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಬಳ್ಕುಂಜೆಯಲ್ಲಿ ಬರಲಿರುವ ಸರಕಾರದ ಕೈಗಾರಿಕೋದ್ಯಮ ಜನಪರ ವಾದ ಬೇಡಿಕೆ ಇದ್ದರೆ ನಾವು ಬೆಂಬಲಿಸಲಿದ್ದೇವೆ ನಾವು ಈ ಬಗ್ಗೆ ಬಲ್ಕುಂಜೆ ಗ್ರಾಮದಲ್ಲಿ ಬ್ರಹತ್ ಸಭೆಯನ್ನು ಆಯೋಜಿಸಲಿದ್ದೇವೆ.

ಗ್ರಾಮಸ್ಥರ ಬೇಡಿಕೆಗಳು ಅವರ ಸಮಸ್ಯೆಗಳನ್ನು ಸರಕಾರ ನಿರ್ವಹಿಸುವಲ್ಲಿ ಹೊಣೆ ಹೊತ್ತರೆ ನಾವು ಸರಕಾರದೊಂದಿಗೆ ಬೆಂಬಲಿಸಲ್ಲು ಸಿದ್ದರಿದ್ದೇವೆ. ಮಂಗಳೂರಿನ ವಿಮಾನ ನಿಲ್ಡಾಣಕ್ಕೆ ಜಾರ್ಜ್ ಫೇರ್ನಾಂಡೀಸ್ ಹೆಸರಿಡುವ ಮನವಿಗೆ ಸರಕಾರ ಸ್ಪಂದಿಸಿದೆ. ಜಿಲ್ಲೆಯಲ್ಲಿ ಜಾರ್ಜ್ ಪೆರ್ನಾಂಡೀಸ್ ವೃತ್ತ ನಿರ್ಮಾಣ ಮಾಡುದಕ್ಕೆ ಸರಕಾರ ಅವರ ಹುಟ್ಟೂರ ಸಮೀಪದಲ್ಲಿ ಜಾಗ ನೀಡುದಾಗಿ ಭರವಸೆ ನೀಡಿದೆ.  ಹೊಸ ವಿನ್ಯಾಸದೊಂದಿಗೆ ವೃತ್ತ ನಿರ್ಮಾಣ ಮಾಡುವ ಖರ್ಚನ್ನು ಸಮಿತಿ ಮಾಡಬೇಕೆಂದು ಸರಕಾರ ತಿಳಿಸಿದೆ.  ಕೈಗಾರಿಕ ಮಂತ್ರಿಗಳನ್ನು ಸಂಪರ್ಕಿಸಿ ಜಿಲ್ಲೆಗೆ ಮಾಲೀನ್ಯ ರಹಿತ ಬಹುರಾಷ್ಟೀಯ ಕಂಪೆನಿ ಬರುವಂತೆ ನಾವು ಯಶಸ್ವಿಯಾಗಿದ್ದೇವೆ ಎಂದರು.  

ಈ ಸಂದರ್ಭದಲ್ಲಿ ಸಮಿತಿಯ ಮಾಜಿ ಅಧ್ಯಕ್ಷರು ಗಳಾದ ಎಡ್ವಕೇಟ್ ಪ್ರಕಾಶ್‌ ಎಲ್. ಶೆಟ್ಟಿ, ಎಡ್ವಕೇಟ್ ಸುಭಾಷ್ ಶೆಟ್ಟಿ, , ಹರೀಶ್‌ ಕುಮಾರ್ ಶೆಟ್ಟಿ ಮತ್ತು ಧರ್ಮಪಾಲ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು.

ಜಿಲ್ಲೆಯ ಉಪಾಧ್ಯಕ್ಷರಾದ ಜಗದೀಶ್ ಅಧಿಕಾರಿ, ಹೋಟೆಲ್ ಫೆಡರೇಶನ್ ಆಪ್ ಮಹಾರಾಷ್ಟ್ರ ದ ಅಧ್ಯಕ್ಷ ಡಾ. ಶಂಕರ್ ಶೆಟ್ಟಿ ವಿರಾರ್, ಪತ್ರಕರ್ತ ದಯಾಸಾಗರ ಚೌಟ, ಸಮಿತಿಯ ಉಪಾಧ್ಯಕ್ಷರಾದ ಸಿಎ ಐ. ಆರ್. ಶೆಟ್ಟಿ ಮೊದಲಾದವರು ಮಾತನಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ನಗರದ ವಿವಿಧ ಜಾತೀಯ  ಸಂಘಟನೆಗಳಾದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಅಧ್ಯಕ್ಷ ಸದಾನಂದ ಆಚಾರ್ಯ. ಶ್ರೀ ರಜಕ ಸಂಘದ ಉಪಾಧ್ಯಕ್ಷ ಹರೀಶ್ ಸಾಲಿಯನ್, ಕುಲಾಲ ಸಂಘ ಮುಂಬೈ ಅಧ್ಯಕ್ಷ ದೇವದಾಸ್ ಎಲ್. ಕುಲಾಲ್,   ಪದ್ಮಶಾಲಿ ಸೇವಾ ಸಂಘ ಮುಂಬೈ. ಅಧ್ಯಕ್ಷ ಉತ್ತಮ್ ಶೆಟ್ಟಿಗಾರ,  ದೇವಾಡಿಗ ಸಂಘ ಅಧ್ಯಕ್ಷ ಪ್ರವೀಣ್ ಎನ್ ದೇವಾಡಿಗ,   ಗಾಣಿಗ ಸಂಘ ಮುಂಬೈ, ಗೌರವ ಅಧ್ಯಕ್ಷ ರಾಮಚಂದ್ರ ಗಾಣಿಗ,  ಬಂಡಾರಿ ಸೇವಾ ಸಂಘ ಮುಂಬೈ ಅಧ್ಯಕ್ಷ  ನ್ಯಾ. ಆರ್‌.ಎಂ. ಭಂಡಾರಿ, ಕನ್ನಡ ಕಲಾವಿದರ ಪರಿಷತ್ ಮಹಾರಾಷ್ಟ್ರ ಅಧ್ಯಕ್ಷ ಡಾ. ಸುರೇಂದ್ರ ಕುಮಾರ್ ಹೆಗ್ಡೆ, ಸಾಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಸಾಪಲ್ಯ, ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷ ಚಂದ್ರಶೇಖರ್ ಬೆಳ್ಚಡ, ಒಕ್ಕಲಿಗರ ಸಂಘ ಮಹಾರಾಷ್ಟ್ರದ ಅಧ್ಯಕ್ಷ  ಜಿತೇಂದ್ರ ಜೆ ಗೌಡ, , ಕರ್ನಾಟಕ ಸಂಘ ಅಂಧೇರಿಯ ಗೌರವ ಅಧ್ಯಕ್ಷರಾದ ಹ್ಯಾರಿ ಸಿಕ್ಕೇರ .  ಸಮಿತಿಯ ಉಪಾಧ್ಯಕ್ಷ ಹಿರಿಯಡ್ಕ ಮೋಹನ್ ದಾಸ್, ಕೋಶಾಧಿಕಾರಿ ತುಳಸಿದಾಸ್ ಅಮೀನ್, ಜೊತೆ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ, ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಸಮಿತಿಯ ಉಪಾಧ್ಯಕ್ಷರಾದ ನಿತ್ಯಾನಂದ ಡಿ.ಕೋಟ್ಯಾನ್ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿಯಾದ ಸುರೇಂದ್ರ ಸಾಲ್ಯಾನ್ ಮುಂಡ್ಕೂರು ಸ್ವಾಗತಿಸಿದರು. 

ಸಭೆಯಲ್ಲಿ ಮುಳೂಂಡ್ ಬಂಟ್ಸ್ ನ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಕಲಾ ಜಗತ್ತಿನ ರೂವಾರಿ ವಿಜಯ್ ಕುಮಾರ್ ತೋನ್ಸೆ,   ಬಂಟ್ಸ್ ಸಂಘ ಮುಂಬೈಯ ಡಾ. ಪ್ರಭಾಕರ್ ಶೆಟ್ಟಿ ಬೋಳ , ಭಂಡಾರಿ ಸೇವಾ ಸಂಘದ ರಾಕೇಶ್ ಭಂಡಾರಿ ,  ದೇವಾಡಿಗ ಸಂಘದ ಮಹಿಳಾ ಪದಾಧಿಕಾರಿಗಳು ಮತ್ತಿತರ ಜಾತೀಯ ಸಂಘ ಸಂಸ್ಥೆಗಳ, ತುಳು ಕನ್ನಡ ಸಂಸ್ಥೆಗಳ  ಸದಸ್ಯರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter